Fixed Deposit: ಹಿರಿಯ ನಾಗರಿಕರಿಗೆ ಬಂಪರ್ ನ್ಯೂಸ್ ಈ ಬ್ಯಾಂಕ್ಗಳಲ್ಲಿ ಹಣ ಇಟ್ರೆ ಸಿಗತ್ತೆ ಲಕ್ಷಗಟ್ಟಲೇ ರಿಟರ್ನ್ ಜೊತೆಗೆ ಆಕರ್ಷಕ ಬಡ್ಡಿ!

Fixed Deposit: ಡೆಪಾಸಿಟ್ ಯೋಜನೆ ನಿಜಕ್ಕೂ ಕೂಡ ಬೇರೆ ಯೋಜನೆಗಳಿಗೆ ಹೋಲಿಸಿದರೆ ದೀರ್ಘಕಾಲಿಕವಾಗಿ ಲಾಭವನ್ನು ಹಾಗೂ ಸುರಕ್ಷತೆಯನ್ನು ಒದಗಿಸುವಂತಹ ಇನ್ವೆಸ್ಟ್ಮೆಂಟ್ ಆಗಿದೆ. ಫಿಕ್ಸೆಡ್ ಡೆಪಾಸಿಟ್ ಯೋಜನೆಯ ವಿಚಾರಕ್ಕೆ ಬಂದ್ರೆ ಪ್ರತಿಯೊಂದು ಬ್ಯಾಂಕುಗಳು ಕೂಡ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ಹಾಗೂ ಸುರಕ್ಷತೆಯನ್ನು ನೀಡುವಂತಹ ಪ್ರಮಾಣವನ್ನು ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡುವಂತಹ ಬ್ಯಾಂಕುಗಳು ಯಾವುವು ಅನ್ನೋದನ್ನ ತಿಳಿಯೋಣ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತ ದೇಶದ ಬ್ಯಾಂಕಿಂಗ್ ಸಿಸ್ಟಮ್ ನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಸರ್ಕಾರಿ ಬ್ಯಾಂಕ್ ಆಗಿದೆ. ಇಲ್ಲಿ 400 ದಿನಗಳ ಅಮೃತ್ ಕಲಷ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ 7.60 ಪ್ರತಿಶತ ಬಡ್ಡಿದರವನ್ನ ಹಿರಿಯ ನಾಗರಿಕರಿಗೆ ನೀಡಲಾಗಿದೆ ಹಾಗೂ 80 ವರ್ಷಕ್ಕಿಂತ ಹಿರಿಯರಾಗಿರುವಂತಹ ಸೂಪರ್ ಹಿರಿಯ ನಾಗರಿಕರಿಗೆ ಇದರ ಬಗ್ಗೆ ಯಾವುದೇ ರೀತಿಯಲ್ಲಿ ಬಡಿದರವನ್ನ ಇನ್ನು ನಿರ್ಧಾರ ಮಾಡಿಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್

60 ವರ್ಷ ವಯಸ್ಸಿಗಿಂತ ಹೆಚ್ಚಾಗಿರುವಂತಹ ಹಿರಿಯ ನಾಗರಿಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 400 ದಿನಗಳ ಕಾಲ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ 7.75% ಬಡ್ಡಿ ದರವನ್ನು ನೀಡಲಾಗುತ್ತದೆ ಹಾಗೂ 80 ವರ್ಷ ವಯಸ್ಸಿಗಿಂತ ಹಿರಿಯ ನಾಗರಿಕರಿಗೆ ಐದು ವರ್ಷಗಳ ಹೂಡಿಕೆಯ ಮೇಲೆ 8.05% ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

ಬ್ಯಾಂಕ್ ಆಫ್ ಬರೋಡ

ಎರಡರಿಂದ ಮೂರು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡದಲ್ಲಿ 7.75% ಅಥವಾ ಅದಕ್ಕಿಂತಲೂ ಹೆಚ್ಚಿನ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

ಕೆನರಾ ಬ್ಯಾಂಕ್

444 ದಿನಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಕೆನರಾ ಬ್ಯಾಂಕ್ ನಲ್ಲಿ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 7.75% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ಹೆಚ್‍ಡಿಎಫ್‌ಸಿ ಬ್ಯಾಂಕ್

18 ರಿಂದ 21 ತಿಂಗಳುಗಳ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆ ಮೇಲೆ ಹೆಚ್‍ಡಿಎಫ್‍ಸಿ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ 7.75 ಪ್ರತಿಶತ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ಐಸಿಐಸಿಐ ಬ್ಯಾಂಕ್

ಪ್ರೈವೇಟ್ ಸೆಕ್ಟರ್ ನಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹ ಈ ಬ್ಯಾಂಕ್ ನಲ್ಲಿ 15 ತಿಂಗಳಿಂದ ಎರಡು ವರ್ಷಗಳ ನಡುವೆ ಇರುವಂತಹ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲೆ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ 7.75% ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

ಕೋಟಾಕ್ ಮಹೀಂದ್ರಾ ಬ್ಯಾಂಕ್

39 ದಿನಗಳಿಂದ 23 ತಿಂಗಳ ನಡುವಿನ ಫಿಕ್ಸ್ಡ್ ಡೆಪಾಸಿಟ್ ಹೋಲಿಕೆಯ ಮೇಲೆ ತನ್ನ ಸೀನಿಯರ್ ಸಿಟಿಜನ್ ಗ್ರಾಹಕರಿಗೆ ಕೋಟಕ್ ಮಹೇಂದ್ರ ಬ್ಯಾಂಕ್ 7.9 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ.

Comments are closed.