Film: ಶ್ರೀಮಂತಿಕೆ ಅಂತ ಬಂದ್ರೆ ಡಾ. ರಾಜ್ ಕುಮಾರ್ ಫ್ಯಾಮಿಲಿಗಿಂತ ನಾವೇನ್ ಕಮ್ಮಿ ಇಲ್ಲ; ಯುವರಾಜ್ ಕುಮಾರ್ ಪತ್ನಿಯ ತಂದೆ ಕೊಟ್ಟ ಸ್ಟೇಟ್ಮೆಂಟ್ ವೈರಲ್, ಬೇಸೆತ್ತ ಕನ್ನಡ ಜನತೆ!

Film: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಸರಣಿಯಾಗಿ ನಡೆದುಕೊಂಡು ಬರುತ್ತಿವೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂತ ಅಂದ್ರೆ ನೀತಿ ಪಾಠಗಳನ್ನು ಹೇಳುವಂತಹ ಕನ್ನಡ ಚಿತ್ರರಂಗದ ಭಗವದ್ಗೀತೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಇವತ್ತು ಅದೇ ದೊಡ್ಡಮನೆ ಕುಟುಂಬದ ಮೂರನೇ ಜನರೇಷನ್ ಕುಡಿ ಆಗಿರುವಂತಹ ಯುವರಾಜ್ ಕುಮಾರ್ ರವರು ತಮ್ಮ ಪತ್ನಿ ಶ್ರೀದೇವಿ ಅವರಿಗೆ ವಿವಾಹವಿಚ್ಛೇದನವನ್ನು ನೀಡಿದ್ದಾರೆ ಎನ್ನುವುದಾಗಿ ಸುದ್ದಿ ತಿಳಿದು ಬಂದಿದ್ದು ಪ್ರತಿಯೊಬ್ಬರು ಕೂಡ ಈ ವಿಚಾರದ ಬಗ್ಗೆ ತಮ್ಮ ಬೇಸರವನ್ನು ಹೊಂದಿದ್ದಾರೆ.

ಯುವರಾಜ್ ಕುಮಾರ್ ರವರು ತಮ್ಮ ಪತ್ನಿ ಆಗಿರುವಂತಹ ಶ್ರೀದೇವಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ ನಂತರ ಎರಡು ಕಡೆಯಿಂದ ಸಾಕಷ್ಟು ಮಾಹಿತಿಗಳು ಕೂಡ ಹೊರಬರುವಂತ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದು ವಿಶೇಷವಾಗಿ ಶ್ರೀದೇವಿಯವರ ತಂದೆಯಾಗಿರುವಂತಹ ಭೈರಪ್ಪ ಅವರು ಕೆಲವೊಂದು ಹೇಳಿಕೆಯನ್ನು ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಈ ಪ್ರಕರಣ ಸದ್ದಾಗೋದಕ್ಕೆ ಕಾರಣವಾಗಿದ್ದಾರೆ. ರಾಜಕುಮಾರ್ ಅಕಾಡೆಮಿಯಲ್ಲಿ ಶ್ರೀದೇವಿ ಹಣ ವರ್ಗಾವಣೆ ಮಾಡಿದ್ದಾರೆ ಎನ್ನುವಂತಹ ಅಪವಾದಗಳು ಕೂಡ ಒಂದು ಕಡೆಯಲ್ಲಿ ಕೇಳಿ ಬರ್ತಾ ಇದ್ರೆ, ಇನ್ನೊಂದು ಕಡೆಯಲ್ಲಿ ಶ್ರೀದೇವಿ ಅವರ ತಂದೆ ದೊಡ್ಡಮನೆ ಕುಟುಂಬದ ಬಗ್ಗೆ ಅಪಹಾಸ್ಯದಲ್ಲಿ ಮಾತನಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮಾಧ್ಯಮದವರು ದೊಡ್ಮನೆ ಕುಟುಂಬದ ಬಗ್ಗೆ ಮಾತನಾಡಿದಾಗ ಅವರಿಗಿಂತ ದೊಡ್ಡ ಮನೆ ನಮ್ಮದು ಅವರ ಬಳಿ ಹಣ ಏನಿದೆ ಎಂಬುದಾಗಿ ಮಾತನಾಡಿದ್ದಾರೆ. ಯುವರಾಜ್ ಕುಮಾರ್ ಓದಿರೋದು ಕೇವಲ ಎಸ್ ಎಸ್ ಎಲ್ ಸಿ ನನ್ನ ಮಗಳು ಆಗಲೇ ಎಂಬಿಎ ಓದಿದ್ಲು ಆದ್ರೂ ಕೂಡ ಮನೆಯವರೆಲ್ಲರೂ ಇಷ್ಟಪಟ್ರು ಅಂತ ನನ್ನ ಮಗಳನ್ನ ಬಡವ ಆಗಿದ್ದರೂ ಕೂಡ ಮದುವೆ ಮಾಡಿಕೊಟ್ಟೆ ಎಂಬುದಾಗಿ ಬೈರಪ್ಪ ನೀಡಿರುವ ಹೇಳಿಕೆ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ನನ್ನ ಮಗಳು ಯುವನ ಕುಟುಂಬದ ಮೂರು ಕೋಟಿ ರೂಪಾಯಿ ಸಾಲವನ್ನು ತೀರಿಸಿದ್ದಾಳೆ ಆಶ್ಚರ್ಯಕರ ಮಾಹಿತಿಯನ್ನು ಕೂಡ ಭೈರಪ್ಪ ಇಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ನಾವೇ ದೊಡ್ಡ ಮನೆಯವರು ಅವರಿಗಿಂತ ಹೆಚ್ಚಿನ ಆಸ್ತಿ ನಮ್ಮ ಬಳಿ ಇದೆ ಎನ್ನುವುದಾಗಿ ಭೈರಪ್ಪ ಅವರ ಈ ಸಂದರ್ಭದಲ್ಲಿ ಅಸಮಾಧಾನದಿಂದ ಮಾತನಾಡಿದ್ದಾರೆ. ನನ್ನ ಮಗಳಿಂದಲೇ ಅವನಿಗೆ ಸಿನಿಮಾ ಸಿಕ್ಕಿದ್ದು ಅನ್ನೋ ಮಾಹಿತಿಯನ್ನು ಕೂಡ ಭೈರಪ್ಪ ಹೇಳಿದ್ದಾರೆ. ಯುವ ಸಿನಿಮಾದ ನಿರ್ಮಾಪಕ ನಿರ್ದೇಶಕ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವ ರೀತಿಯಲ್ಲಿ ಬುದ್ಧಿ ಹೇಳಿದರು ಕೂಡ ಯುವ ಅದನ್ನು ತಿದ್ದಿಕೊಳ್ಳಲಿಲ್ಲ ಬದಲಾಗಿ ಆತನ ತಂದೆ ತಾಯಿಯಿಂದಲೇ ಆತ ಹಾಳಾದ ಎನ್ನುವಂತಹ ಮಾಹಿತಿಯನ್ನು ಬೈರಪ್ಪ ಹೊರ ಹಾಕಿದ್ದಾರೆ.

Comments are closed.