Siddaramaiah: ಸಿಎಂ ಸಿದ್ದರಾಮಯ್ಯ ಅವರಿಂದ ಮನೆ ಹಾಗೂ ಅಂಗಡಿಗಳನ್ನು ಬಾಡಿಗೆ ನೀಡುವವರಿಗೆ ಜಾರಿ ಮಾಡಿದ್ದಾರೆ ನೋಡಿ ಹೊಸ ನಿಯಮ!

Siddaramaiah: ಕೆಲಸ ಹಾಗೂ ಉದ್ಯೋಗಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವವರೆಗೆ ಬಾಡಿಗೆ ಮನೆಗಳ ಅವಶ್ಯಕತೆ ಅತ್ಯಂತ ಕಡ್ಡಾಯವಾಗಿರುತ್ತದೆ. ಇನ್ಮುಂದೆ ಬಾಡಿಗೆಗಾಗಿ ಮನೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಪಡೆದುಕೊಳ್ಳುವವರು ಹಾಗೂ ನೀಡುವವರು ಇಬ್ಬರಿಗೂ ಕೂಡ ಸರ್ಕಾರದಿಂದ ನಿಯಮಗಳು ಬದಲಾಗಿದ್ದು ಅದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದ್ದು ತಪ್ಪದೆ ಲೇಖನವನ್ನ ಕೊನೆಯವರೆಗೂ ಓದಿ.

ಬಾಡಿಗೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ನಿಯಮ ಬದಲಾವಣೆ!

ಕೆಲವರು ತಮ್ಮ ಖಾಲಿ ಇರುವಂತಹ ಬಾಡಿಗೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳಂತಹ ಕಟ್ಟಡವನ್ನು ಹಣದ ಆಸೆಗೆ ಯಾರು ಗೊತ್ತು ಗುರಿ ಇಲ್ಲದವರಿಗೆ ಬಾಡಿಗೆಗೆ ನೀಡುವಂತಹ ಕೆಲಸವನ್ನು ಮಾಡುತ್ತಾರೆ. ಆದರೆ ಈಗ ಸರ್ಕಾರದ ಹೊಸ ನಿಯಮಗಳ ಪ್ರಕಾರ ಇನ್ಮುಂದೆ ಈ ರೀತಿ ಬೇಕಾಬಿಟ್ಟಿಯಾಗಿ ಯಾರಿಗೆ ಬೇಕಾದರೂ ಕೂಡ ಬಾಡಿಗೆಗೆ ನೀಡುವ ಹಾಗಿಲ್ಲ. ಬಾಡಿಗೆ ನೀಡುವುದಕ್ಕಿಂತ ಮುಂಚೆ ಪೊಲೀಸ್ ಇಲಾಖೆ ಹೇಳುವಂತಹ ಕೆಲವೊಂದು ಸಲಹೆ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದಾಗಿ ತಿಳಿದುಬಂದಿದೆ.

ಯಾಕಾಗಿ ಈ ನಿಯಮ?

ಈ ರೀತಿ ಗೊತ್ತು ಗುರಿ ಇಲ್ಲದವರಿಗೆ ಕಟ್ಟಡಗಳನ್ನು ಬಾಡಿಗೆ ನೀಡುವ ಮೂಲಕ ಹಣದ ಆಸೆಗೆ ಗೊತ್ತಿಲ್ಲದಂತೆ ಕಟ್ಟಡ ಮಾಲೀಕರು ತಪ್ಪು ಮಾಡುತ್ತಿದ್ದಾರೆ. ದೇಶದ್ರೋಹಿ ಹಾಗೂ ಬೇರೆ ರೀತಿಯ ತಪ್ಪು ಕೆಲಸ ಮಾಡುವಂತಹ ಜನರು ಈ ರೀತಿ ಕಟ್ಟಡವನ್ನು ಬಾಡಿಗೆಗೆ ಪಡೆದು ತಪ್ಪು ಕೆಲಸಗಳನ್ನು ಎಸಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಾಖಲಾಗಿ ಪೊಲೀಸರು ತನಿಖೆಯನ್ನು ಮಾಡುವುದಕ್ಕೆ ಪ್ರಾರಂಭಿಸಿದ ಸಂದರ್ಭದಲ್ಲಿ ಮನೆಯ ಮಾಲೀಕರು ಅವರ ದಾಖಲೆಗಳು ಸರಿಯಾದ ರೀತಿಯಲ್ಲಿ ಇಲ್ಲದೇ ಇರುವ ಕಾರಣದಿಂದಾಗಿ ಅವರ್ಯಾರು ಗೊತ್ತಿಲ್ಲ ಬಾಡಿಗೆ ಕಾಲಿ ಮಾಡಿ ಸುಮಾರು ತಿಂಗಳಾಯ್ತು ಅನ್ನುವುದಾಗಿ ತಮ್ಮ ಅಸಹಾಯಕ ಕಾರಣಗಳನ್ನ ನೀಡ್ತಾರೆ. ಇನ್ನು ಮುಂದೆ ಕಟ್ಟಡಗಳನ್ನು ಬಾಡಿಗೆ ನೀಡುವುದಕ್ಕಿಂತ ಮುಂಚೆ ಸರಿಯಾದ ರೀತಿಯಲ್ಲಿ ಪೊಲೀಸರ ಸಲಹೆಯನ್ನು ಪಡೆದು ನಿಯಮಗಳ ಅನುಸಾರವಾಗಿ ಕಟ್ಟಡವನ್ನು ಬಾಡಿಗೆಗೆ ನೀಡಬೇಕೆಂಬುದಾಗಿ ಹೇಳಿಕೊಳ್ಳಲಾಗಿದೆ.

ಬಾಡಿಗೆ ನೀಡಬೇಕೆಂದ ಮುಂಚೆ ಈ ಮಾಹಿತಿಯನ್ನು ಪಡೆದುಕೊಳ್ಳಿ!

  • ಪ್ರಮುಖವಾಗಿ ಅವರ ವೈಯಕ್ತಿಕ ಮಾಹಿತಿಗಳನ್ನ ಪಡೆದುಕೊಳ್ಳಬೇಕಾಗಿರುವುದು ನಿಮ್ಮ ಪ್ರಮುಖ ಕರ್ತವ್ಯವಾಗಿರುತ್ತದೆ.
  • ಒಂದು ವೇಳೆ ವಿದೇಶಗಳಿಗೆ ಬಾಡಿಗೆ ನೀಡುತ್ತಿದ್ದೀರಿ ಎಂದಾದರೆ ಅವರ ಪಾಸ್ಪೋರ್ಟ್ ಹಾಗೂ ವೀಸಾ ಗಳಂತಹ ಪ್ರಮುಖ ದಾಖಲೆಗಳನ್ನು ಪಡೆದುಕೊಳ್ಳುವುದು ಅತ್ಯಂತ ಕಡ್ಡಾಯ.
  • ಆಧಾರ್ ಕಾರ್ಡ್ ಹಾಗೂ ಗುರುತು ಪತ್ರ ಸೇರಿದಂತೆ ಅವರ ಮೊಬೈಲ್ ನಂಬರ್ ಹಾಗೂ ಬಹುತೇಕ ಎಲ್ಲಾ ಪ್ರಮುಖ ಸಂಬಂಧಪಟ್ಟಂತಹ ದಾಖಲೆಗಳನ್ನು ಪಡೆದುಕೊಳ್ಳಬೇಕು. ಎಲ್ಲದಕ್ಕಿಂತ ಪ್ರಮುಖವಾಗಿ ಇದನ್ನು ಡಬಲ್ ಚೆಕ್ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ.
  • ಇನ್ನು ಅಂಗಡಿ ಮುಂಗಟ್ಟುಗಳನ್ನು ಬಾಡಿಗೆ ರೂಪದಲ್ಲಿ ನೀಡುವಂತಹ ವ್ಯಕ್ತಿಗಳು ಬಾಡಿಗೆಯನ್ನು ಪಡೆಯುತ್ತಿರುವಂತಹ ವ್ಯಕ್ತಿಗಳು ಯಾವ ವ್ಯವಹಾರವನ್ನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಈ ಮೂಲಕ ಅವರು ಒಂದು ವೇಳೆ ದೇಶದ್ರೋಹದ ಕೆಲಸವನ್ನು ಮಾಡ್ತಾ ಇದ್ದಾರೋ ಇಲ್ವೋ ಅನ್ನೋದನ್ನ ನೀವು ಪ್ರಮುಖವಾಗಿ ತಿಳಿದು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬಹುದಾಗಿದೆ.

Comments are closed.