Hanuman: ಮಹಾಪ್ರಾಣ ಹನುಮಂತನಿಗೆ ಈ ರಾಶಿಯವರು ಎಂದರೆ ಪಂಚಪ್ರಾಣ!

Hanuman:ರೀತಿಯ ಕಷ್ಟಗಳು ಬಂದ್ರೂ ಕೂಡ ವಾಯುಪುತ್ರ ಆಂಜನೇಯನ ಸ್ಮರಿಸಿದರೆ ಸಾಕು ಆ ಕಷ್ಟಗಳೆಲ್ಲ ದೂರವಾಗುತ್ತವೆ ಎಂಬುದಾಗಿ ಆತನನ್ನು ನಂಬುವಂತಹ ಅಭಿಮಾನಿಗಳಿದ್ದಾರೆ. ಇನ್ನು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇರುವಂತಹ ದ್ವಾದಶ ರಾಶಿಗಳಲ್ಲಿ ಈ ಕೆಲವೊಂದು ರಾಶಿಗಳು ಹನುಮಂತನ ನೆಚ್ಚಿನ ರಾಶಿಗಳು ಎಂಬುದಾಗಿ ಶಾಸ್ತ್ರಗಳು ತಿಳಿಸುತ್ತವೆ. ಹಾಗಿದ್ರೆ ಆ ರಾಶಿಗಳು ಯಾವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ

ಮಂಗಳ ವಾರ ದಿನದಂದು ಹನುಮಂತನನ ಪೂಜೆ ಮಾಡುವುದರಿಂದಾಗಿ ಆತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎಂಬುದಾಗಿ ಶಾಸ್ತ್ರಗಳು ತಿಳಿಸುತ್ತವೆ ಹಾಗೂ ಮೇಷ ರಾಶಿಯವರು ಕೂಡ ಇದೇ ಕೆಲಸವನ್ನು ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ. ಹನುಮಂತನ ಪೂಜೆಯಿಂದ ಮೇಷ ರಾಶಿಯವರ ಜೀವನದಲ್ಲಿ ಅದೃಷ್ಟ ಹೆಚ್ಚಾಗಲಿದೆ. ಒಂದು ವೇಳೆ ಮೇಷ ರಾಶಿಯವರ ಬಳಿ ಹಣ ಇಲ್ಲದೆ ಹಣಕ್ಕಾಗಿ ಪರದಾಡುತ್ತಿದ್ದರೆ ಆ ಸಮಸ್ಯೆಯಿಂದಲೂ ಕೂಡ ದೂರವಾಗಲಿದ್ದಾರೆ. ಹನುಮಂತನ ಕೃಪೆಯಿಂದಾಗಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಪ್ರತಿಯೊಂದು ಸಮಸ್ಯೆಗಳಿಂದ ನೀವು ದೂರವಾಗಲಿದ್ದೀರಿ.

ಕರ್ಕ ರಾಶಿ

ಶ್ರೀರಾಮ ಕೂಡ ಕರ್ಕರಾಶಿಯ ಲಗ್ನದಲ್ಲಿ ಜನಿಸಿರುವ ಕಾರಣದಿಂದಾಗಿ ವಿಶೇಷವಾಗಿ ಹನುಮಂತನಿಗೆ ಕರ್ಕ ರಾಶಿ ಅಂದರೆ ಅತ್ಯಂತ ಪ್ರಿಯವಾದ ರಾಶಿ ಎಂದು ಹೇಳಬಹುದಾಗಿದೆ. ಕಷ್ಟಪಟ್ಟು ಕೆಲಸ ಮಾಡುವಂತಹ ಜನರು ತಮ್ಮ ಕೆಲಸದಲ್ಲಿ ಹನುಮಂತನ ಸ್ಮರಣೆ ಇಟ್ಕೊಂಡ್ರೆ ಸಾಕು ಖಂಡಿತವಾಗಿ ಅವರು ತಮ್ಮ ಜೀವನದಲ್ಲಿ ಉತ್ತಮ ಹಂತವನ್ನು ಸಾಧಿಸುತ್ತಾರೆ. ವ್ಯಾಪಾರವನ್ನು ಪ್ರಾರಂಭ ಮಾಡುವುದಕ್ಕಿಂತ ಮುಂಚೆ ವ್ಯಾಪಾರಿಗಳು ಹನುಮಂತನ ಸ್ಮರಣೆ ಹಾಗೂ ಪೂಜೆ ಮಾಡುವುದರ ಮೂಲಕ ತಮ್ಮ ವ್ಯಾಪಾರದಲ್ಲಿ ಇನ್ನಷ್ಟು ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಕೂಡ ಮಂಗಳವಾರ ರಾಶಿ ಆಗಿರುವುದರಿಂದಾಗಿ ಹನುಮಂತನಿಗೆ ವೃಶ್ಚಿಕ ರಾಶಿ ರವರು ಅಂದ್ರೆ ತುಂಬಾನೇ ಇಷ್ಟ. ನಿಮ್ಮ ಜೀವನದಲ್ಲಿ ಸಾಧಿಸ ಬೇಕಾಗಿರುವಂತಹ ಪ್ರತಿಯೊಂದು ಸಾಧನೆ ಹಾಗೂ ಯಶಸ್ಸುಗಳನ್ನ ಹನುಮಂತನ ಕೃಪೆಯಿಂದಾಗಿ ನೀವು ಪಡೆದುಕೊಳ್ಳಬಹುದಾಗಿದೆ. ಮಂಗಳವಾರ ಹನುಮಂತನಿಗೆ ಉಪವಾಸ ಮಾಡುವ ಮೂಲಕ ನೀವು ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಮನಸ್ಸಿನ ಆಸೆ ಈಡೇರಿರುವುದಕ್ಕಾಗಿ ಹನುಮಂತನಿಗೆ ಕಡಲೆ ಅರ್ಪಿಸುವ ಮೂಲಕ ಪೂಜೆ ಮಾಡುವುದು ಇದರ ಪರಿಹಾರವಾಗಿದೆ.

ಮಕರ ರಾಶಿ

ಮಕರ ರಾಶಿಯವರ ಅರ್ಧಕ್ಕೆ ನಿಂತಿರುವಂತಹ ಕೆಲಸ ಮತ್ತೆ ಪ್ರಾರಂಭವಾಗಬೇಕು ಎನ್ನುವಂತಹ ಆಸೆ ಇದ್ರೆ ಹನುಮಂತನ ಪೂಜೆಯನ್ನು ಮಂಗಳವಾರ ನಿಯಮಿತವಾಗಿ ಮಾಡಿಕೊಂಡು ಹೋಗಿ. ಮಕರ ರಾಶಿಯವರು ಜೀವನದಲ್ಲಿ ಯಾವುದೇ ದೊಡ್ಡ ಮಟ್ಟದ ಕೆಲಸವನ್ನು ಪ್ರಾರಂಭ ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದರೆ ಅದಕ್ಕಿಂತ ಮುಂಚೆ ಆಂಜನೇಯ ಸ್ವಾಮಿಯ ದರ್ಶನ ಅಥವಾ ಪೂಜೆಯನ್ನು ಮಾಡುವ ಮೂಲಕ ಆ ನಿರ್ಧಾರವನ್ನು ಕೈಗೊಂಡು ಕೆಲಸವನ್ನು ಪ್ರಾರಂಭ ಮಾಡಿ ಖಂಡಿತವಾಗಿ ಮಕರ ರಾಶಿಯವರ ಕೆಲಸ ಈಡೇರುತ್ತದೆ.

ಬಡವರು ಹಾಗೂ ನಿರ್ಗತಿಕರಿಗೆ ಹನುಮಂತನ ಹೆಸರಿನಲ್ಲಿ ದಾನ ಮಾಡಿ ಹಾಗೂ ಹನುಮಾನ್ ಚಾಲೀಸವನ್ನ ಪ್ರತಿದಿನ ಪಠಿಸಿ ನಿಮಗೆ ಒಳ್ಳೆಯದಾಗುತ್ತದೆ. ಹನುಮಂತನಿಗೆ ಪೂಜೆಯ ಸಂದರ್ಭದಲ್ಲಿ ಹೂವಿನ ಹಾರವನ್ನು ಅರ್ಪಿಸುವುದು ಮಂಗಳವಾರದ ಸಂದರ್ಭದಲ್ಲಿ ಕೋತಿಗೆ ಬಾಳೆಹಣ್ಣು ಹಾಗೂ ಹನುಮಂತ ಇಷ್ಟ ಪಡುವಂತಹ ಆಹಾರವನ್ನು ಸಮರ್ಪಿಸುವುದು ನಿಮಗೆ ಒಳ್ಳೆಯ ಪರಿಣಾಮವನ್ನು ನೀಡುತ್ತದೆ.

Comments are closed.