Astrology: ಜೂನ್ 29 ರವರೆಗೆ ಬುಧನ ಭದ್ರ ಯೋಗದಿಂದಾಗಿ ಈ ರಾಶಿಯವರಿಗೆ ಸಿಗಲಿದೆ ಕೈತುಂಬ ಅದೃಷ್ಟ!

Astrology: ಗ್ರಹಗಳ ಸ್ಥಾನ ಪರಿಚಲನೆ ಯಿಂದಾಗಿ ಅದಕ್ಕೆ ಸಂಬಂಧಪಟ್ಟಂತಹ ರಾಶಿಯವರ ಜೀವನದ ಅರ್ಹ ಆಗಿರುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ ತನ್ನ ಸ್ವರಾಶಿ ಆಗಿರುವಂತಹ ಮಿಥುನ ರಾಶಿಯಲ್ಲಿ ಜೂನ್ 29 ರವರೆಗೆ ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ನೆಲೆಸಿರುತ್ತಾನೆ ಹಾಗೂ ಇದೇ ಸಂದರ್ಭದಲ್ಲಿ ಭದ್ರ ಯೋಗ ನಿರ್ಮಾಣವಾಗುತ್ತದೆ. ಇದರಿಂದಾಗಿ ಕೆಲವು ರಾಶಿಯವರ ಜೀವನ ಬದಲಾಗಲಿದ್ದು ಅವರ ಜೀವನದಲ್ಲಿ ಅದೃಷ್ಟದ ಸುರಿಮಳೆ ಆಗಲಿದ್ದು ಬನ್ನಿ ಆ ಅದೃಷ್ಟವಂತರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿ

ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಸ್ಥಾನವನ್ನು ತಲುಪಲಿದ್ದಾರೆ. ಕುಟುಂಬಸ್ಥರ ಜೊತೆಗೆ ಇರುವಂತಹ ಮಿಥುನ ರಾಶಿಯವರ ಕೋಪ ತಾಪ ದೂರವಾಗಲಿದ್ದು ಎಲ್ಲರೂ ನಡುವೆ ಉತ್ತಮ ಸಂಬಂಧ ಏರ್ಪಡಲಿದೆ. ತಮ್ಮ ಅಗತ್ಯತೆಗಳಿಗೆ ಖರ್ಚು ಮಾಡುವುದಕ್ಕೆ ಆರ್ಥಿಕ ಸ್ವಾತಂತ್ರ್ಯ ಕೂಡ ಮಿಥುನ ರಾಶಿಯವರಿಗೆ ಸಿಗಲಿದೆ. ದೇವರಲ್ಲಿ ಹೆಚ್ಚಾಗುವಂತಹ ಆತ್ಮವಿಶ್ವಾಸದಿಂದಾಗಿ ಯಾವುದೇ ರೀತಿಯ ಚಾಲೆಂಜಿಂಗ್ ಕೆಲಸಗಳನ್ನು ನೀಡಿದರು ಕೂಡ ಅದು ಅವರಿಗೆ ಕಷ್ಟ ಆಗೋದಿಲ್ಲ. ಸಾಕಷ್ಟು ಸಮಯಗಳ ಹಿಂದೆ ನೀವು ನಿಮ್ಮ ಪರಿಚಯಿಸ್ತರಿಗೆ ನೀಡಿರುವಂತಹ ಹಣವನ್ನು ಈ ಸಂದರ್ಭದಲ್ಲಿ ವಾಪಸ್ ಪಡೆದುಕೊಳ್ಳಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಜೀವನ ಸಂಗಾತಿಯ ಜೊತೆಗೆ ಇರುವಂತಹ ಭಿನ್ನಾಭಿಪ್ರಾಯಗಳು ದೂರವಾಗಲಿವೆ.

ಕನ್ಯಾ ರಾಶಿ

ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಶೈಕ್ಷಣಿಕ ಜೀವನದ ಕುರಿತಂತೆ ಇನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ. ಉದ್ಯೋಗದಲ್ಲಿ ಇರುವಂತಹ ಅಡೆತಡೆಗಳು ದೂರವಾಗಿ ನೀವು ಅಂದುಕೊಂಡಿರುವಂತಹ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಕನ್ಯ ರಾಶಿ ಅವರಿಗೆ ವಿದೇಶಿ ಕಂಪನಿಗಳಲ್ಲಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದ ಕೆಲಸ ಸಿಗಲಿದೆ. ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಹೀಗಾಗಿ ಅದನ್ನ ಸಮರ್ಥವಾಗಿ ನಿಭಾಯಿಸುವಂತಹ ಸಾಮರ್ಥ್ಯ ನಿಮ್ಮಲ್ಲಿ ಬರುತ್ತದೆ. ವಂಶ ಪಾರಂಪರಿಕವಾಗಿ ಬಂದಿರುವಂತಹ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗುವಂತಹ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿದೆ.

ಧನು ರಾಶಿ

ಧನು ರಾಶಿಯವರು ತಮ್ಮ ಜೀವನದಲ್ಲಿ ಕೈತುಂಬ ಹಣವನ್ನು ಸಂಪಾದನೆ ಮಾಡಲಿದ್ದಾರೆ. ಒಂದು ವೇಳೆ ಕೆಲಸ ಮಾಡುವಂತಹ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆಗೆ ವಿರಸವನ್ನು ಹೊಂದಿದ್ದರೆ ಅದರಿಂದಲೂ ಕೂಡ ದೂರ ಹೋಗಬಹುದಾಗಿದೆ. ಪಾರ್ಟ್ನರ್ಶಿಪ್ ವ್ಯಾಪಾರದಲ್ಲಿ ಕೈತುಂಬ ಲಾಭ ಸಂಪಾದನೆ ಮಾಡುವ ಅವಕಾಶ ಇದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವಂತಹ ಸಾಧ್ಯತೆ ಇದೆ. ಸಾಕಷ್ಟು ಸಮಯಗಳಿಂದ ಒಂಟಿಯಾಗಿರುವಂತಹ ನೀವು ದಾಂಪತ್ಯ ಜೀವನಕ್ಕೆ ಕಾಲಿಡುವಂತಹ ಕಂಕಣ ಭಾಗ್ಯವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಿಂದ ಸಾಲವಾಗಿ ಹಣವನ್ನು ಪಡೆದುಕೊಂಡಿದ್ದವರು ಕೊನೆಗೂ ಆ ಸಾಲವನ್ನು ನಿಮಗೆ ವಾಪಾಸ್ ನೀಡಲಿದ್ದಾರೆ. ಅನಾರೋಗ್ಯ ದೂರವಾಗಲಿದೆ.

ಮೀನ ರಾಶಿ

ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲಿದ್ದೀರಿ. ಎಲ್ಲರ ವಿಶ್ವಾಸವನ್ನು ಗಳಿಸಿಕೊಳ್ಳುವಂತಹ ನೀವು ಪ್ರತಿಯೊಬ್ಬರ ನೆಚ್ಚಿನ ವ್ಯಕ್ತಿ ಆಗಿ ಸಮಾಜದಲ್ಲಿ ಕಾಣಿಸಿಕೊಳ್ಳುತ್ತೀರಿ. ಹಣಕಾಸಿನ ವಿಚಾರದಲ್ಲಿ ನೀವು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಈ ಸಂದರ್ಭದಲ್ಲಿ ನಿಮಗೆ ಆದಾಯದ ಮೂಲಗಳು ಒಂದಕ್ಕಿಂತ ಹೆಚ್ಚಾಗಿ ಇರುವುದರಿಂದಾಗಿ ಹೆಚ್ಚಿನ ಆದಾಯ ಹರಿದು ಬರುತ್ತದೆ. ನೀವು ಮನಸ್ಸಿನಲ್ಲಿರುವಂತಹ ಹಿಂಜರಿಕೆಯನ್ನು ಬಿಟ್ಟು ಕೆಲಸ ಮಾಡಿದರೆ ಯಾವ ಕೆಲಸವನ್ನು ಆದರೂ ಕೂಡ ನೀವು ಮಾಡಬಹುದು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Comments are closed.