Chanakya: ಈ ಅಭ್ಯಾಸಗಳು ನಿಮ್ಮ ಮನೆಯ ಮಹಿಳೆಯರಲ್ಲಿ ಇದ್ದರೆ ಅವರು ಮನೆ ಹಾಳು ಮಾಡುವಂತಹ ಗುಣವನ್ನು ಹೊಂದಿದ್ದಾರೆ ಎಂಬುದಾಗಿ ಅರ್ಥ!

Chanakya: ಆಚಾರ್ಯ ಚಾಣಕ್ಯರು ಭಾರತದ ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಮಹಿಳೆಯರಲ್ಲಿ ಇರುವಂತಹ ವಿಚಾರಗಳ ಬಗ್ಗೆ ಅವರು ತಮ್ಮ ಗ್ರಂಥಗಳಲ್ಲಿ ಕೂಡ ಉಲ್ಲೇಖಿಸಿದ್ದು ವಿಶೇಷವಾಗಿ ಮನೆಯನ್ನು ಹಾಳು ಮಾಡುವಂತಹ ಗುಣಗಳನ್ನು ಹೊಂದಿರುವಂತಹ ಮಹಿಳೆಯರು ಯಾವ ರೀತಿಯಲ್ಲಿ ಇರುತ್ತಾರೆ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ತಮ್ಮ ಮಾತುಗಳಲ್ಲಿ ಗ್ರಂಥದಲ್ಲಿ ಬರೆದಿಟ್ಟಿದ್ದು ಬನ್ನಿ ಯಾವ ಗುಣಗಳಿಂದ ಅಥವಾ ಅಭ್ಯಾಸಗಳಿಂದ ಮಹಿಳೆಯರು ಆ ಮನೆಗೆ ಮಾರಕ ಆಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

  • ಮಹಿಳೆಯರಿಗೆ ಅಗತ್ಯಕ್ಕಿಂತ ಅತಿಯಾದ ಧೈರ್ಯ ಇದ್ರೆ ಅದನ್ನ ಅವರು ದುರುಪಯೋಗ ಪಡಿಸಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಧೈರ್ಯ ಇರಬೇಕು ನಿಜ ಆದರೆ ಮಹಿಳೆಯರಿಗೆ ಅಗತ್ಯಕ್ಕಿಂತ ಹೆಚ್ಚಿನ ಧೈರ್ಯ ಇರೋದು ಅವರ ಕೈಯಿಂದ ತಪ್ಪು ಕೆಲಸಗಳನ್ನು ಮಾಡಿಸುವುದು ಹೆಚ್ಚು ಎಂಬುದಾಗಿ ಅವರು ಹೇಳುತ್ತಾರೆ.
  • ನೀವು ಸಮಾಜದಲ್ಲಿ ಗಮನಿಸಿರಬಹುದು ಪುರುಷರಿಗೆ ಮೋಸ ಮಾಡುವಂತಹ ಜನರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿರ್ತಾರೆ ಅನ್ನೋದನ್ನ ತಿಳಿದುಕೊಳ್ಳಿ. ಈ ರೀತಿಯ ಗುಣಗಳನ್ನು ಮೊದಲಿನಿಂದಲೇ ಮೈಗೂಡಿಸಿಕೊಂಡು ಬಂದಿರುವಂತಹ ಮಹಿಳೆಯರು ಖಂಡಿತವಾಗಿ ಕುಟುಂಬಕ್ಕೆ ಘಾತಕವಾಗಿರುತ್ತಾರೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ. ತಮ್ಮ ವೈಯಕ್ತಿಕವಾದ ಲಾಭಕ್ಕೋಸ್ಕರ ಮಹಿಳೆಯರು ಈ ರೀತಿ ಮೋಸ ಮಾಡುವುದು ನಿಜಕ್ಕೂ ಕೂಡ ಅವರ ವ್ಯಕ್ತಿತ್ವವನ್ನು ಅದು ಪ್ರತಿಫಲಿಸುತ್ತದೆ.
  • ಮನೆಯ ಲಕ್ಷ್ಮಿ ಎಂಬುದಾಗಿ ಮಹಿಳೆಯನ್ನ ಅಥವಾ ಹೆಂಡತಿಯನ್ನು ಕರೆಯಲಾಗುತ್ತದೆ ಆದರೆ ಆಕೆ ತೆಗೆದುಕೊಳ್ಳುವಂತಹ ನಿರ್ಧಾರಗಳು ಮೂರ್ಖತನದಿಂದ ಕೂಡಿದ್ದರೆ ಅದು ಆ ಮನೆಗೆ ಸಾಕಷ್ಟು ಸಮಸ್ಯೆಯನ್ನು ಹೊತ್ತು ತರುತ್ತದೆ ಎಂಬುದಾಗಿ ಹೇಳಬಹುದಾಗಿದೆ. ಹೀಗಾಗಿ ಹಾಕಿ ತೆಗೆದುಕೊಳ್ಳುವಂತಹ ನಿರ್ಧಾರದಲ್ಲಿ ಅಥವಾ ಮಾಡುವಂತ ಕೆಲಸದಲ್ಲಿ ತೋರುವವಂತ ಮೂರ್ಖತನ ಮನೆಗೆ ಹಾನಿಯನ್ನು ಉಂಟುಮಾಡುತ್ತದೆ.
  • ಮಹಿಳೆಯರು ಇದ್ದ ಕಡೆ ಸ್ವಚ್ಛತೆ ಇರುತ್ತದೆ ಎಂಬುದಾಗಿ ಹೇಳಲಾಗುತ್ತದೆ ಆದರೆ ಒಂದು ವೇಳೆ ಅವರು ಮನೆಯನ್ನ ಅಶುದ್ಧತೆಯಿಂದ ಕಾಯ್ದುಕೊಂಡರೆ ಅವರು ಕೂಡ ಮನೆಗೆ ಮಾರಕ ಎಂಬ ರೀತಿಯಲ್ಲಿ ಪರಿಣಮಿಸುತ್ತಾರೆ ಎಂದು ಹೇಳಬಹುದಾಗಿದೆ. ಹೆಣ್ಣು ಮಕ್ಕಳು ಯಾವತ್ತೂ ಕೂಡ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ ಅನ್ನೋದನ್ನ ಪ್ರಮುಖವಾಗಿ ತಿಳಿದುಕೊಳ್ಳಿ.
  • ಕ್ರೌರ್ಯತೆಯ ಬಗ್ಗೆ ಮಾತನಾಡುವುದಾದರೆ ಗಂಡಿನ ಕ್ರೂರತನ ಕೇವಲ ಗಂಡಿಗೆ ಮಾತ್ರ ಬಹುತೇಕ ಸಮಯಗಳಲ್ಲಿ ಸೀಮಿತವಾಗಿರುತ್ತದೆ. ಆದರೆ ಈ ವಿಚಾರದಲ್ಲಿ ಹೆಣ್ಣನ್ನು ನಾವು ಹೋಲಿಸುವುದಕ್ಕೆ ಹೋದರೆ ಅದಕ್ಕೆ ಯಾವುದೇ ಲಿಮಿಟ್ ಇರುವುದಿಲ್ಲ ಹೀಗಾಗಿ ಅದು ಸಾಕಷ್ಟು ಅಪಾಯಕಾರಿ ಅಂತ ಹೇಳಬಹುದು.

ಈ ಮೇಲೆ ಹೇಳಿರುವಂತಹ ಇವಿಷ್ಟು ಗುಣಗಳು ಹುಟ್ಟಿನಿಂದಲೇ ಆ ಮಹಿಳೆಗೆ ಅಥವಾ ಹೆಣ್ಣುಮಗಳಿಗೆ ಬಂದಿದೆ ಅಂದ್ರೆ ಖಂಡಿತವಾಗಿ ಆ ಮನೆಗೆ ಆಕೆಯಿಂದ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದೇ ಸಂಭವಿಸುತ್ತದೆ ಎಂಬುದಾಗಿ ಆಚಾರ್ಯ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಇಂತಹ ಗುಣಗಳನ್ನು ಹೊಂದಿರುವಂತಹ ಮಹಿಳೆಯರು ಮನೆಗೆ ಒಳ್ಳೆದಕ್ಕಿಂತ ಹೆಚ್ಚಾಗಿ ಕೆಟ್ಟದ್ದನ್ನು ಮಾಡುವಂತಹ ಸಾಧ್ಯತೆ ಇರುತ್ತದೆ.

Comments are closed.