Government Scheme: ಸರ್ಕಾರದಿಂದ ಸಿಕ್ತಾ ಇದೆ ನೋಡಿ ಉಚಿತ ಮನೆ; ಎಲ್ಲರಿಗೂ ಸಿಗತ್ತೆ, ನೀವೂ ಕೂಡ ಅರ್ಜಿ ಸಲ್ಲಿಸಿ!

Government Scheme: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಕಳೆದ ಸಾಕಷ್ಟು ಸಮಯಗಳಿಂದ ಬೇರೆ ಬೇರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಭರವಸೆಯನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಅದೇ ರೀತಿಯಲ್ಲಿ ಈಗ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ಮನೆಯನ್ನು ನೀಡುವಂತಹ ಕೆಲಸವನ್ನು ಕೂಡ ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ಪಡೆದುಕೊಳ್ಳೋಣ.

ರಾಜೀವ್ ಗಾಂಧಿ ಆವಾಸ್ ಯೋಜನೆ!

ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ 52,189 ಮನೆಗಳು ಈಗಾಗಲೇ ನಿರ್ಮಾಣಗೊಳ್ಳುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಮನೆಯ ವೆಚ್ಚ 7.5 ಲಕ್ಷ ಆದರೆ ಒಂದು ಲಕ್ಷ ರುಪಾಯಿ ಅರ್ಜಿ ಸಲ್ಲಿಸುವಾತನೆ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ 3.5 ಲಕ್ಷ ರೂಪಾಯಿ ನೀಡಿದ್ದರೆ ರಾಜ್ಯ ಸರ್ಕಾರ 3 ಲಕ್ಷ ರೂಪಾಯಿ ಹಣವನ್ನ ಈ ಯೋಜನೆ ಅಡಿಯಲ್ಲಿ ಮನೆ ಕಟ್ಟುವುದಕ್ಕೆ ನೀಡುತ್ತದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಹೇಳಿರುವಂತಹ ಮಾಹಿತಿ ಪ್ರಕಾರ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಈ ಯೋಜನೆ ಅಡಿಯಲ್ಲಿ ತಮ್ಮದೇ ಆಗಿರುವಂತಹ ಸ್ವಂತವಾದ ಮನೆಯನ್ನು ಕಟ್ಟುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ. ಮನೆ ಇಲ್ಲದೆ ಇರುವಂತಹ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ಜನರು ರಾಜೀವ್ ಗಾಂಧಿ ಅವಾಸ್ ಯೋಜನೆ ಅಡಿಯಲ್ಲಿ ತಮಗೆ ಬೇಕಾಗಿರುವಂತಹ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಆರ್ಥಿಕ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ನೀಡುತ್ತಿವೆ ಎಂದು ಹೇಳಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆ ಹಾಗೂ ಡಾಕ್ಯುಮೆಂಟ್ಸ್ ಗಳ ಬಗ್ಗೆ ತಿಳಿಯೋಣ ಬನ್ನಿ.

ಅರ್ಜಿ ಸಲ್ಲಿಸಬೇಕಾಗಿರೋ ಡಾಕ್ಯುಮೆಂಟ್ಸ್ ಗಳು ಹಾಗೂ ಇನ್ನಿತರ ಮಾಹಿತಿಗಳು!

  • ಬ್ಯಾಂಕ್ ಪಾಸ್ ಬುಕ್
  • ಒಂದು ವೇಳೆ ಅರ್ಜಿ ಸಲ್ಲಿಸುವರು ಮೃತರಾಗಿದ್ದರೆ ಅವರ ಮೃತ ಪ್ರಮಾಣ ಪತ್ರ
  • ರೇಷನ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೆ.

ಇನ್ನು ಅರ್ಜಿ ಸಲ್ಲಿಸುವುದಕ್ಕೆ ಪ್ರಮುಖವಾಗಿ ರಾಜೀವ್ ಗಾಂಧಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಹಾಗೂ ಇನ್ನಿತರ ಸ್ಥಳದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ನಮೂದಿಸಬೇಕಾಗುತ್ತದೆ ಹಾಗೂ ಆರ್‌ಡಿ ನಂಬರ್ ಅನ್ನು ಕೂಡ ನಮೂದಿಸಬೇಕಾಗುತ್ತದೆ. ಅಲ್ಲಿ ಕೇಳಲಾಗುವಂತಹ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತುಂಬಿಸಿ ಡಾಕ್ಯೂಮೆಂಟ್ ಗಳನ್ನು ಅಟಾಚ್ ಮಾಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮತ್ತೆ ಅದೇ ವೆಬ್ ಸೈಟಿಗೆ ಹೋಗಿ ನಿಮ್ಮ ಮನೆ ಕಟ್ಟುವಿಕೆಯ ಅನೌನ್ಸ್ಮೆಂಟ್ ಆಗಿದೆಯೋ ಇಲ್ಲವೋ ಅನ್ನೋದನ್ನ ಕೂಡ ನೀವು ಚೆಕ್ ಮಾಡಬಹುದಾಗಿದೆ.

Comments are closed.