Gruhalakshmi Scheme: ಕೊನೆಗೂ ಗೃಹಲಕ್ಷ್ಮಿ ಯೋಜನೆಗೆ ಅಂತ್ಯ ಬಂತಾ? ಸರ್ಕಾರ ಹೇಳಿದ್ದೇನು?

Gruhalakshmi Scheme: ಗೃಹಲಕ್ಷ್ಮಿ ಯೋಜನೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ತಂದಿರುವಂತಹ ಐದು ಪ್ರಮುಖ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾಗಿ ಕಾಣಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಗೃಹಜ್ಯೋತಿ ಯೋಜನೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ಹಣವನ್ನು ಮಾಸಿಕವಾಗಿ ನೀಡುವಂತಹ ಕೆಲಸವನ್ನು ಮಾಡಿಕೊಂಡು ಬಂದಿದೆ. ಇದರಿಂದಾಗಿ ಸಾಕಷ್ಟು ಮಹಿಳೆಯರಿಗೆ ತಮ್ಮ ಆರ್ಥಿಕ ಸಂಬಂಧ ಪಟ್ಟಂತಹ ಕೆಲಸಗಳನ್ನು ಈ ಹಣದ ಮೂಲಕ ಪೂರೈಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ.

ಇತ್ತೀಚಿಗಷ್ಟೇ ಮುಗಿದಿರುವಂತಹ ಲೋಕಸಭಾ ಚುನಾವಣೆಯಲ್ಲಿ ಈ ರೀತಿಯ ಗ್ಯಾರಂಟಿ ಯೋಜನೆಗಳನ್ನು ನೀಡಿದ ನಂತರ ಕೂಡ ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷಿತ ಗೆಲುವನ್ನು ಸಾಧಿಸಲು ಸಾಧ್ಯವಾಗಿಲ್ಲ ಎನ್ನುವಂತಹ ಬೇಸರ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರಲ್ಲಿ ಕೂಡ ಇದೆ. ಇದೆ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಕೂಡ ರಾಜ್ಯ ಸರ್ಕಾರದ ಬಳಿ ತಮ್ಮ ಆಗ್ರಹವನ್ನು ತೋರಿಸಿದ್ದಾರೆ ಎಂಬುದಾಗಿ ಕೂಡ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ಇಷ್ಟೆಲ್ಲ ಹಣ ಹೆಚ್ಚುವರಿ ಯಾಗಿ ಖರ್ಚು ಮಾಡಿದ ನಂತರ ಕೂಡ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರೂ ಕೂಡ ಈ ರೀತಿಯ ಸೋಲು ಕಂಡಿರುವುದು ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ನಿಲ್ಲಬಹುದು ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ನೇರವಾಗಿ ತನ್ನ ಸ್ಪಷ್ಟ ನಿಲುವನ್ನು ಬಹಿರಂಗಪಡಿಸಿದೆ ಎಂದು ಹೇಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆ ನಿಲ್ಲುವ ಬಗ್ಗೆ ಸರ್ಕಾರ ಹೇಳಿದ್ದೇನು?

ಗೃಹಲಕ್ಷ್ಮಿ ಯೋಜನೆ ಯಾಗಿ ರಾಜ್ಯಾದ್ಯಂತ ಮಹಿಳೆಯರು ಹಣವನ್ನು ಉಳಿತಾಯ ಮಾಡಿಕೊಳ್ಳುವ ಮೂಲಕ ಅದನ್ನ ತಮ್ಮ ಆಪರೇಷನ್ ಖರ್ಚಿಗೆ ಅಥವಾ ವೈಯಕ್ತಿಕ ಚಿಕಿತ್ಸೆಯ ಖರ್ಚಿಗೆ, ಕೆಲವರ ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಸೇರಿದಂತೆ ಬೇರೆ ಬೇರೆ ಪ್ರಮುಖ ಕೆಲಸಗಳಿಗೆ ಅವುಗಳನ್ನು ವಿನಿಯೋಗಿಸಿಕೊಂಡಿದ್ದಾರೆ ಇದರಿಂದಾಗಿ ಅವರ ಚಿಕ್ಕ ಪುಟ್ಟ ಆರ್ಥಿಕ ಅಗತ್ಯತೆಗಳು ಕೂಡ ಪೂರ್ಣಗೊಳ್ಳುತ್ತಿವೆ ಹೀಗಾಗಿ ಇಂತಹ ಪ್ರಮುಖ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೂಡ ನಿಲ್ಲಿಸುವ ಆಲೋಚನೆ ಮಾಡುವುದಿಲ್ಲ ಅನ್ನುವುದಾಗಿ ಸರ್ಕಾರ ಸ್ಪಷ್ಟಪಡಿಸಿದ ಎನ್ನುವಂತಹ ಮಾಹಿತಿ ಸಿಕ್ಕಿದೆ.

ಮಹಿಳೆಯರು ಕುಟುಂಬದ ದೃಷ್ಟಿಯಲ್ಲಿ ಈ ಹಣವನ್ನು ಯಾವ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಗಮನಿಸಿರುವ ಅಂತಹ ರಾಜ್ಯ ಸರ್ಕಾರ ಇದನ್ನ ಮುಂದುವರಿಸಿರುವಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಇನ್ಮುಂದೆ ನಿಲ್ಲಬಹುದು ಎಂಬುದಾಗಿ ಅಂದುಕೊಂಡಿದ್ದ ಜನರು ಯಾವುದೇ ರೀತಿಯ ಗೊಂದಲಕ್ಕೆ ಒಳಪಡಬೇಕಾದ ಅಗತ್ಯವಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋ ತನಕ ಖಂಡಿತವಾಗಿ ಇದು ಮುಂದುವರೆಯಲಿದೆ ಅನ್ನೋದು ಸರ್ಕಾರದ ಭರವಸೆಯ ಮಾತುಗಳಾಗಿವೆ.

Comments are closed.