ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಹೂಡಿಕೆ ಮಾಡಿ ಎಷ್ಟು ಲಾಭ ಸಿಗುತ್ತದೆ ಗೊತ್ತಾ?

ದೀರ್ಘಕಾಲಿಕ ಹೂಡಿಕೆ ವಿಚಾರಕ್ಕೆ ಬಂದರೆ ಯಾವುದೇ ಬ್ಯಾಂಕ್ ಅಥವಾ ಯಾವುದೇ ಫೈನಾನ್ಸಿಯಲ್ ಸಂಸ್ಥೆ ಆಗಿರಲಿ ಖಂಡಿತವಾಗಿ ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಉತ್ತಮ ಆಯ್ಕೆ ಆಗಿರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇನ್ನು ಇವತ್ತಿನ ಈ ಲೇಖನದ ಮೂಲಕ ವಿಶೇಷವಾಗಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವುದರಿಂದಾಗಿ ನಿಮಗೆ ಎಷ್ಟು ಲಾಭ ಸಿಗುತ್ತೆ ಅನ್ನೋದರ ಬಗ್ಗೆ ಹೇಳೋದಿಕ್ಕೆ. ಒಂದು ವೇಳೆ ನೀವು ಕೂಡ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಖಂಡಿತವಾಗಿ ಈ ಲೇಖನ ಅನ್ನೋದು ನಿಮಗೆ ಸಾಕಷ್ಟು ಉಪಯುಕ್ತಕಾರಿಯಾಗಲಿದೆ.

ಕೆನರಾ ಬ್ಯಾಂಕ್ ನಲ್ಲಿ ಫಿಕ್ಸಿಡ್ ಡೆಪಾಸಿಟ್ ಹೂಡಿಕೆ!

ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಗ್ರಾಹಕರಿಗೆ 6.85% ವಾರ್ಷಿಕ ಬಡ್ಡಿದರವನ್ನು ನೀಡಲಾಗುತ್ತದೆ. ನೀವು ಕೆಲವು ನಿಗದಿತ ನಿರ್ದಿಷ್ಟ ವರ್ಷದವರೆಗೆ 20,000 ಹಣವನ್ನು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

 • 20,000 ನೀವು ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ ನಿಮಗೆ ರಿಟರ್ನ್ ರೂಪದಲ್ಲಿ ಒಟ್ಟಾರೆಯಾಗಿ 21,406 ರೂಪಾಯಿಗಳು ಸಿಗುತ್ತದೆ.
 • ಎರಡು ವರ್ಷದ ಹೂಡಿಕೆಯ ಮೇಲೆ ಒಟ್ಟಾರೆಯಾಗಿ 22, 910 ಸಿಗುತ್ತೆ.
 • ಮೂರು ವರ್ಷಗಳ ಮೇಲಿನ ಹೂಡಿಕೆ ಮೇಲೆ 24,520 ಸಿಗುತ್ತೆ.
 • ನಾಲ್ಕು ವರ್ಷಗಳ ಮೇಲಿನ ಹೂಡಿಕೆ ಮೇಲೆ 26243 ರೂಪಾಯಿ ಸಿಗುತ್ತೆ.
 • ಐದು ವರ್ಷಗಳ ಹೂಡಿಕೆ ಮೇಲೆ 28, 088 ರೂಪಾಯಿ ಪಡೆದುಕೊಳ್ಳಬಹುದಾಗಿದೆ.
  ಇದು ಸಾಮಾನ್ಯ ನಾಗರಿಕರಿಗೆ ಕೆನರಾ ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆಯ ಮೇಲೆ ನೀಡುವಂತಹ ರಿಟರ್ನ್ ಆಗಿದ್ದು ಹಿರಿಯ ನಾಗರಿಕರಿಗೆ ಸಿಗುವಂತಹ ಬಡ್ಡಿಯ ರಿಟರ್ನ್ ಅನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.

ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ರಿಟರ್ನ್!

 • 20000 ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 21,511 ರೂಪಾಯಿ ಸಿಗುತ್ತೆ.
 • ಎರಡು ವರ್ಷಗಳ ಹೂಡಿಕೆಯ ಮೇಲೆ 23136 ರೂಪಾಯಿ ಸಿಗುತ್ತೆ.
 • ಮೂರರಿಂದ ನಾಲ್ಕು ವರ್ಷಗಳ ಹೂಡಿಕೆಯ ಮೇಲೆ 24,848 ರೂಪಾಯಿ ಸಿಗುತ್ತೆ.
 • ಐದು ವರ್ಷಗಳ ಹೂಡಿಕೆಯ ಮೇಲೆ 28,575 ಸಿಗುತ್ತೆ.

ಒಂದು ವೇಳೆ ನೀವು ಕೂಡ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಇಲ್ಲಿ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ 20000 ಡೆಪಾಸಿಟ್ ಹಣವನ್ನು ಹೂಡಿಕೆ ಮಾಡುವುದರ ಮೇಲೆ ಎಷ್ಟು ರಿಟರ್ನ್ ಸಿಗುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಇದರ ಅನ್ವಯ ಹೂಡಿಕೆ ಮಾಡಬಹುದಾಗಿದೆ.

Comments are closed.