ಲಕ್ಷ್ಮೀದೇವಿಯ ವಿಗ್ರಹವನ್ನು ಈ ರೀತಿ ಇಡಿ. ಮನೆಗೆ ಹಣ ಹರಿದುಕೊಂಡು ಬರುತ್ತೆ!

ನಮ್ಮ ಸನಾತನ ಹಿಂದೂ ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ಮಾತೆಯನ್ನು ಸಂಪತ್ತಿನ ಹಾಗೂ ಸಮೃದ್ಧಿಯ ಅಧಿದೇವತೆ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹಾಗೂ ಆಕೆಯನ್ನ ಕ್ರಮಬದ್ಧವಾಗಿ ಪೂಜೆ ಮಾಡಿದರೆ ಖಂಡಿತವಾಗಿ ಜೀವನದಲ್ಲಿ ಪ್ರತಿಯೊಂದು ಸಮೃದ್ಧಿಯನ್ನು ಅನುಭವಿಸಬಹುದೆಂಬುದಾಗಿ ಹೇಳಲಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ತಪ್ಪಾದ ರೀತಿಯಲ್ಲಿ ಇಡುವುದರಿಂದಾಗಿ ಕೂಡ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಹೀಗಾಗಿ ಸರಿಯಾದ ಪೂಜೆ ಮಾಡುವಂತಹ ವಿಧಾನ ಮತ್ತು ಮೂರ್ತಿಯನ್ನು ಸರಿಯಾದ ರೀತಿಯಲ್ಲಿ ಹೇಗೆ ಇಡಬಹುದು ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಕೂಡ ತುಂಬಾ ಅಗತ್ಯವಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

  • ದೇವರು ಕೋಣೆಯಲ್ಲಿ ಉತ್ತಮ ಸ್ಥಳದಲ್ಲಿ ಲಕ್ಷ್ಮಿ ಮಾತೆಯ ಮೂರ್ತಿಯನ್ನು ಅಥವಾ ಫೋಟೋವನ್ನು ಇಡಬೇಕಾಗಿರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಈ ಫೋಟೋ ಅಥವಾ ಮೂರ್ತಿಯನ್ನು ನೆಲಕ್ಕೆ ತಾಗುವಂತೆ ಇಡಬಾರದು. ಒಂದು ವೇಳೆ ನಿಮ್ಮ ಮನೆಯಲ್ಲಿ ದೇವರು ಕೋಣೆ ಇಲ್ಲದೆ ಹೋದಲ್ಲಿ ಮರದ ಸ್ಟೂಲ್ ಮೇಲೆ ಕೂಡ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬಹುದಾಗಿದೆ.
  • ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವಾ ಮೂರ್ತಿ ಇಡುವ ಸಂದರ್ಭದಲ್ಲಿ ಗಣಪತಿಯ ಬಲ ಭಾಗದಲ್ಲಿ ಹಾಗೂ ಮಹಾವಿಷ್ಣುವಿನ ಎಡಭಾಗದಲ್ಲಿ ಇಡಬೇಕು ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಇದು ಸಾಕಷ್ಟು ಶುಭವನ್ನು ತರುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದೇವರ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚಿನ ಲಕ್ಷ್ಮಿಯ ಮೂರ್ತಿಯನ್ನು ಇಡಬಾರದು ಎಂಬುದಾಗಿ ಪರಿಗಣಿಸಲಾಗುತ್ತದೆ ಯಾಕೆಂದರೆ ಇದರಿಂದಾಗಿ ನಕಾರಾತ್ಮಕ ಶಕ್ತಿಗಳ ಓಡಾಟ ಹೆಚ್ಚಾಗುತ್ತೆ.
  • ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಫೋಟೋವನ್ನು ಇಡುವುದರಿಂದಾಗಿ ಮನೆಯಲ್ಲಿ ಆರ್ಥಿಕ ಸಂಪತ್ತು ಹೆಚ್ಚಾಗಲಿದೆ. ಇನ್ನು ಯಾವುದೇ ಕಾರಣಕ್ಕೂ ಕೂಡ ನಿಂತಿರುವ ಬಂಗಿಯಲ್ಲಿ ಇರುವಂತಹ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಇಡುವುದಕ್ಕೆ ಹೋಗ್ಬೇಡಿ. ಕಮಲದ ಮೇಲೆ ಕುಳಿತಿರುವಂತಹ ಫೋಟೋ ಅಥವಾ ಮೂರ್ತಿಯನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಸೂಚಿಸಿರುವ ರೀತಿಯಲ್ಲಿ ಈ ಮೇರೆ ಹೇಳಿರುವ ಹಾಗೆ ನೀವು ಲಕ್ಷ್ಮೀದೇವಿಯ ಫೋಟೋವನ್ನು ಅಥವಾ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗಲಿದೆ. ಕೇವಲ ಎಷ್ಟು ಮಾತ್ರವಲ್ಲದೆ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತವೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹೆಚ್ಚಳ ಕಂಡುಬರುತ್ತದೆ. ಯಾವುದೇ ಸಮಸ್ಯೆ ಇಲ್ಲದೆ ಕುಟುಂಬಸ್ಥರು ಮನೆಯಲ್ಲಿ ಸಂತೋಷದಿಂದ ಜೀವಿಸಲಿದ್ದಾರೆ ಹಾಗೂ ಆರ್ಥಿಕ ಸಂಕಷ್ಟವನ್ನು ಅನುಭವಿಸಬೇಕಾಗಿರುವಂತಹ ಅಗತ್ಯ ಕೂಡ ಈ ಸಂದರ್ಭದಲ್ಲಿ ಕಂಡುಬರುವುದಿಲ್ಲ.

Comments are closed.