ತವರಿನಲ್ಲಿ ಆಸ್ತಿ ಕೇಳೋದಕಿಂತ ಮುಂಚೆ ಹೆಣ್ಣು ಮಕ್ಕಳು ಈ ನಿಯಮಗಳನ್ನು ತಿಳಿದುಕೊಳ್ಳಬೇಕು!

ಆರಂಭಿಕ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ತಂದೆ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಅಧಿಕಾರ ಎನ್ನುವ ರೀತಿಯಲ್ಲಿ ನಿಯಮವನ್ನು ಮಾಡಲಾಗಿತ್ತು. ಅದಾದ ನಂತರ ಕೇವಲ ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಆಸ್ತಿಯ ಪಾಲು ಸಿಗಬೇಕು ಎನ್ನುವುದಾಗಿ ನಿಯಮವನ್ನು ಜಾರಿಗೆ ತರಲಾಗುತ್ತದೆ. ಈ ವಿಚಾರದಲ್ಲಿ ಕೂಡ ಕೆಲವೊಂದು ಗೊಂದಲಗಳು ಇಂದಿಗೂ ಕೂಡ ಜನರನ್ನ ಕಾಡುತ್ತಿದೆ ಎಂದು ಹೇಳಬಹುದು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಆಸ್ತಿಯ ಪಾಲಿನ ವಿಚಾರದ ಬಗ್ಗೆ ನಾವು ಮಾತನಾಡೋಕೆ ಹೊರಟಿರೋದು.

ನಂತರದ ದಿನಗಳಲ್ಲಿ ಕಂಡು ಬಂದಿರುವಂತಹ ನಿಯಮಗಳಿಂದಾಗಿ ಗಂಡು ಮಕ್ಕಳ ರೀತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಹಕ್ಕು ಇರಬಹುದು ನಿಜ ಆದರೆ ಕೆಲವೊಂದು ಪರಿಸ್ಥಿತಿಗಳಲ್ಲಿ ಅದರಲ್ಲೂ ಕೆಲವೊಂದು ವಿಶೇಷವಾದ ಕ್ಯಾಟಗರಿಯಲ್ಲಿ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಪಡೆದುಕೊಳ್ಳುವಂತಹ ಅಧಿಕಾರವನ್ನು ಹೊಂದಿರುವುದಿಲ್ಲ ಅನ್ನೋದನ್ನ ಕೂಡ ತಿಳಿದುಕೊಳ್ಳಬೇಕಾಗುತ್ತದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಕೂಡ ಇದೇ ವಿಚಾರದ ಬಗ್ಗೆ.

ಕೆಲವೊಂದು ಪರಿಸ್ಥಿತಿಗಳಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಸಿಗೋದಿಲ್ಲ!

  • ತಂದೆ ಸ್ವಂತವಾಗಿ ದುಡಿದು ಸಂಪಾದನೆ ಮಾಡಿರುವಂತಹ ಆಸ್ತಿಯನ್ನು ಯಾರಿಗೆ ಬೇಕಾದರೂ ಕೂಡ ದಾನ ಮಾಡುವಂತಹ ಅಥವಾ ಬರೆದುಕೊಡುವಂತಹ ಅಧಿಕಾರವನ್ನು ಅವರು ಖುದ್ದಾಗಿ ಹೊಂದಿರುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಯಾರೂ ಕೂಡ ಅಂದರೆ ಗಂಡು ಮಕ್ಕಳಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ಈ ಆಸ್ತಿಯಲ್ಲಿ ಪಾಲನ್ನು ಪಡೆಯಲೇಬೇಕು ಎನ್ನುವಂತಹ ಯಾವುದೇ ಸಂಪೂರ್ಣ ಅಧಿಕಾರವನ್ನು ಹೊಂದಿರುವುದಿಲ್ಲ. ಯಾಕೆಂದ್ರೆ ಸಹಜವಾಗಿ ತಂದೆಯ ಮರಣ ನಂತರ ಆ ಆಸ್ತಿ ಮಕ್ಕಳಿಗೆ ಸಮಪಾಲು ಹಂಚಿಕೆ ಆಗಬಹುದು ಆದರೆ ಒಂದು ವೇಳೆ ತಂದೆ, ಆ ಆಸ್ತಿಯನ್ನು ಬೇರೆಯವರಿಗೆ ನೀಡಬೇಕು ಎಂಬುದಾಗಿ ವಿಲ್ ಬರೆದಿಟ್ಟರೆ ಅದನ್ನ ಬೇರೆಯವರು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ ಆ ವಿಲ್ ನಲ್ಲಿ ಇರುವಂತಹ ವ್ಯಕ್ತಿಗಳು ಮಾತ್ರ ಆಸ್ತಿಗೆ ಅಧಿಕಾರವನ್ನು ಹೊಂದಿರುತ್ತಾರೆ.
  • ಇನ್ನು ಸಾಕಷ್ಟು ಸಂದರ್ಭದಲ್ಲಿ ಹೆಣ್ಣು ಮಕ್ಕಳು ಆಸ್ತಿಯ ಬದಲಾಗಿ ಹಣವನ್ನು ಪಡೆದುಕೊಂಡಿರುತ್ತಾರೆ ಹಾಗೂ ಹಕ್ಕು ಬಿಡುಗಡೆಯ ಪತ್ರಕ್ಕೆ ಸಹಿ ಹಾಕಿರುತ್ತಾರೆ. ಮತ್ತೆ ಆಸ್ತಿಯ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ ಎನ್ನುವ ಕಾರಣಕ್ಕಾಗಿ ಬಂದು ಕೇಳಿದರೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಅನ್ನುವುದನ್ನು ಅವರು ಮೊದಲೇ ತಿಳಿದುಕೊಳ್ಳಬೇಕಾಗಿರುತ್ತದೆ.
  • ಮೊದಲಿಗೆ ಬೈ ಮಾತಿನಲ್ಲಿ ಆಸ್ತಿ ಬೇಡ ಅಂತ ಹೇಳಿ ನಂತರ ಅದರ ವ್ಯಾಲ್ಯೂ ಹೆಚ್ಚಾದಾಗ ಮತ್ತೆ ಆಸ್ತಿಯನ್ನು ಕೇಳುವುದಕ್ಕೆ ಕೂಡ ಸಾಧ್ಯ ಇರುವುದಿಲ್ಲ ಕಾನೂನಾತ್ಮಕ ಹೋರಾಟವನ್ನು ಮಾಡಿ ಆಸ್ತಿಯನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಮಾಡಬಹುದಾಗಿದೆ. ಸಾಕಷ್ಟು ಬಾರಿ ಮದುವೆ ಮಾಡಿಕೊಟ್ಟ ಸಂದರ್ಭದಲ್ಲಿ ಆಸ್ತಿಗೆ ಸರಿಹೊಂದುವ ಖರ್ಚನ್ನ ಮನೆಯವರು ಮಾಡಿರುತ್ತಾರೆ ಹಾಗೂ ಆ ಸಂದರ್ಭದಲ್ಲಿ ಕೂಡ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋದ ಮೇಲೂ ಕೂಡ ಆಸ್ತಿ ಬೇಕು ಅಂತ ಆದರೆ ಆ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ನೋಡಿಕೊಳ್ಳುವುದಕ್ಕಿಂತ ಮನೆಯಲ್ಲಿ ಕುಳಿತು ರಾಜಿ ಪಂಚಾಯಿತಿಯ ಮೂಲಕ ಆಸ್ತಿಯನ್ನು ಪಡೆಯುವುದು ಉತ್ತಮ ಎಂದು ಭಾವಿಸಬಹುದಾಗಿದೆ.
  • ಇನ್ನು ಗಂಡನ ಮನೆಯಲ್ಲಿ ಯಾವುದೇ ರೀತಿಯ ಆಸ್ತಿಗಳು ಗಂಡ ಬದುಕಿರುವವರೆಗೂ ಕೂಡ ಹೆಂಡತಿಗೆ ದೊರಕುವುದಿಲ್ಲ. ಗಂಡನ ಮರಣ ನಂತರ ಆತನ ಉತ್ತರಾಧಿಕಾರಿಗಳಾಗಿರುವಂತಹ ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾದ ರೀತಿಯಲ್ಲಿ ಆಸ್ತಿಯನ್ನು ಹಂಚಿಕೆ ಮಾಡಲಾಗುತ್ತದೆ.

Comments are closed.