HSRP: HSRP ನಂಬರ್ ಪ್ಲೇಟ್ ಅಳವಡಿಕೆಯ ಬಗ್ಗೆ ಜಾರಿ ಆಯ್ತು ನೋಡಿ ಹೊಸ ದಿನಾಂಕ!

HSRP: ಸಾರಿಗೆ ಇಲಾಖೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದ ಪ್ರತಿಯೊಬ್ಬ ವಾಹನ ಸವಾರರಿಗೂ ಕೂಡ HSRP ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ನಿಗದಿತ ದಿನಾಂಕದ ಒಳಗೆ ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಅದಾಗಲೇ ಘೋಷಣೆಯನ್ನು ಮಾಡಿದ್ದು ಆದರೆ ಮೇ 31ರ ಒಳಗೆ ಮಾಡಬೇಕಾಗಿದ್ದ ಈ ಕೆಲಸವನ್ನ ರಾಜ್ಯದ ಬಹುತೇಕ ಎಲ್ಲಾ ವಾಹನದ ಮಾಲೀಕರು ಕೂಡ ಮಾಡಿಲ್ಲ ಅಂತ ಹೇಳಬಹುದಾಗಿದೆ ಯಾಕೆಂದರೆ ಇರುವಂತಹ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ ರಿಜಿಸ್ಟರ್ ಮಾಡಿಕೊಂಡಿರುವುದು ಕೇವಲ 20 ಪ್ರತಿಶತದ ಆಸು ಪಾಸಿನಲ್ಲಿ ಅನ್ನೋದು ಬೇಸರದ ವಿಚಾರವಾಗಿದೆ.

HSRP ನಂಬರ್ ಪ್ಲೇಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸೂಚನೆ ನೀಡಿರುವ ಪ್ರೀತಿಯಲ್ಲಿ 2019 ಕ್ಕಿಂತ ಮುಂಚೆ ಖರೀದಿ ಮಾಡಲಾಗಿರುವಂತಹ ಪ್ರತಿಯೊಂದು ವಾಹನಗಳ ಮೇಲೆ ಕೂಡ HSRP ನಂಬರ್ ಪ್ಲೇಟ್ ಇರೋದು ಅತ್ಯಂತ ಕಡ್ಡಾಯವಾಗಿದೆ ಎಂಬುದಾಗಿ ಹೇಳಿತ್ತು. ಇನ್ನು ಮೇ 31 ಎನ್ನುವಂತಹ ದಿನಾಂಕವನ್ನು ಎರಡು ಬಾರಿ ದಿನಾಂಕವನ್ನು ಮುಂದುವರಿದ ಮೇಲೆ ಕೊನೆಯ ದಿನಾಂಕ ವನ್ನಾಗಿ ಆಯ್ಕೆ ಮಾಡಿತ್ತು. ಆದರೆ ರಿಜಿಸ್ಟರ್ ಆಗಬೇಕಾಗಿದ್ದ ಎರಡು ಕೋಟಿ ವಾಹನಗಳಲ್ಲಿ ಕೇವಲ ರಿಜಿಸ್ಟರ್ ಆಗಿದ್ದು 35 ರಿಂದ 40 ಲಕ್ಷ ವಾಹನಗಳು ಮಾತ್ರ. ಸರ್ಕಾರದ ನಿಯಮಗಳನ್ನು ಜನರು ಯಾವ ರೀತಿಯಲ್ಲಿ ಪಾಲಿಸುತ್ತಿದ್ದಾರೆ ಅನ್ನೋದಕ್ಕೆ ಇದೇ ಒಂದು ಜೀವಂತ ಸಾಕ್ಷಿ ಎಂದು ಹೇಳಬಹುದು.

ಕೆಲವು ಹಳೆಯ ವಾಹನಗಳ HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಸಮಸ್ಯೆಗಳು ಬಂದಿದ್ದ ಕಾರಣದಿಂದಾಗಿ ಹೈಕೋರ್ಟ್ ನಲ್ಲಿ ಇದರ ವಿರುದ್ಧವಾಗಿ ಸ್ಟೇ ಆರ್ಡರ್ ಅನ್ನು ತರಲಾಗಿತ್ತು. ಅದಾದ ನಂತರ ಈಗ ಜುಲೈ 4ರ ವರೆಗೆ ಯಾವುದೇ ಕಾರಣಕ್ಕೂ ಟ್ರಾಫಿಕ್ ಪೊಲೀಸ್ರು HSRP ನಂಬರ್ ಪ್ಲೇಟ್ ಇಲ್ಲದೇ ಇರುವಂತಹ ವಾಹನಗಳ ಮೇಲೆ ದಂಡವನ್ನು ವಿಧಿಸುವ ಹಾಗಿಲ್ಲ ಎನ್ನುವುದಾಗಿ ಹೇಳಲಾಗಿತ್ತು ಆದರೆ ಈಗ ತಿಳಿದು ಬಂದಿರುವಂತಹ ಮಾಹಿತಿಯ ಪ್ರಕಾರ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಂತಹ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ದಿನಾಂಕದ ಒಳಗಾಗಿ ಪ್ರತಿಯೊಬ್ಬರು 2019 ಕ್ಕಿಂತ ಮುಂಚೆ ಖರೀದಿಸಿರುವಂತಹ ವಾಹನಗಳನ್ನು ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ತಮ್ಮ ಶೋ ರೂಂ ಗೆ ಹೋಗಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎಂಬುದಾಗಿ ಸೂಚಿಸಲಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದ ಬಗ್ಗೆ ತಿಳಿದು ಬಂದಿರುವಂತಹ ಅಂಕಿ ಅಂಶಗಳ ಪ್ರಕಾರ ಇನ್ನೂ 1.5 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳ ಬೇಕಾಗಿರುವುದು ಬಾಕಿ ಇದೆ. ಹೀಗಾಗಿ ಸೆಪ್ಟೆಂಬರ್ 15 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇಂತಹ ವಾಹನಗಳು ಸಿಕ್ಕಿ ಬಿದ್ರೆ ದೊಡ್ಡ ಮಟ್ಟದ ಫೈನ್ ವಿಧಿಸುವಂತಹ ಸಾಧ್ಯತೆ ಇದೆ.

Comments are closed.