Insurance: ಇನ್ಸೂರೆನ್ಸ್ ಮಾಡಿದವರಿಗೆಲ್ಲ ಬಾಯಿಗೆ ಸಿಹಿ ಹಾಕೋ ಗುಡ್ ನ್ಯೂಸ್; ನೀವು ಇನ್ಶೂರೆನ್ಸ್ ಮಾಡಿದರೆ ತಪ್ಪದೇ ಓದಲೇಬೇಕು!

Insurance:ಇನ್ಮುಂದೆ ಲೈಫ್ ಇನ್ಶೂರೆನ್ಸ್ ಕೇವಲ ಮೆಚುರಿಟಿ ಆದ ನಂತರ ಮಾತ್ರ ಅಲ್ಲ ನಿಮ್ಮ ಕಷ್ಟಕಾಲಕ್ಕೆ ಕೂಡ ಸಹಾಯ ಮಾಡುವುದಕ್ಕೆ ಸಿದ್ಧವಾಗಿದೆ ಅನ್ನೋದನ್ನ IRDAI ಇಲಾಖೆ ಸ್ಪಷ್ಟಪಡಿಸಿದೆ. ಇನ್ಮುಂದೆ ನೀವು ನಿಮ್ಮ ಇನ್ಶೂರೆನ್ಸ್ ನಲ್ಲಿ ಲೋನ್ ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನ ಹೊಂದಿದ್ದೀರಿ. ಇನ್ನು ಪ್ರೀ ಲುಕ್ ಅವಧಿಯನ್ನು ಕೂಡ 15 ದಿನಗಳಿಂದ 30 ದಿನಗಳಿಗೆ ಏರಿಸಲಾಗಿದೆ. IRDAI ಈ ನಿಯಮಗಳನ್ನ ಇನ್ಸೂರೆನ್ಸ್ ಪಡೆದುಕೊಳ್ಳುವಂತಹ ಗ್ರಾಹಕರಿಗೆ ಉತ್ತಮವಾದಂತಹ ವಾತಾವರಣ ನಿರ್ಮಿಸುವ ಕಾರಣಕ್ಕಾಗಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಕೆಲವೊಂದು ಸಂದರ್ಭದಲ್ಲಿ ಪಾಲಿಸಿದಾರರಿಗೆ ಉನ್ನತ ವ್ಯಾಸಂಗ ಅಥವಾ ಮಕ್ಕಳ ಮದುವೆ ಈ ರೀತಿಯ ಪ್ರಮುಖ ದೊಡ್ಡ ಮಟ್ಟದ ಖರ್ಚುಗಳು ಕಂಡುಬರುತ್ತವೆ ಆ ಸಂದರ್ಭದಲ್ಲಿ ತಾವು ಮಾಡಿರುವಂತಹ ಇನ್ಸೂರೆನ್ಸ್ ಪಾಲಿಸಿಯ ಮೂಲಕ ಲೋನ್ ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಈ ಸಂದರ್ಭದಲ್ಲಿ ಹೊಂದಬಹುದಾಗಿದೆ ಎಂಬುದಾಗಿ IRDAI ಈ ಸಂದರ್ಭದಲ್ಲಿ ಹೇಳಿಕೊಂಡಿದೆ. ಇನ್ನು ಈ ಪ್ರಕ್ರಿಯೆಗಳಲ್ಲಿ ಇನ್ಸೂರೆನ್ಸ್ ಕಂಪನಿ 30 ದಿನಗಳ ಒಳಗಾಗಿ ಹಣವನ್ನ ವರ್ಗಾವಣೆ ಮಾಡದೆ ಹೋದಲ್ಲಿ 5000 ರೂಪಾಯಿಗಳಂತೆ ಪ್ರತಿದಿನ ಹಣವನ್ನು ಗ್ರಾಹಕರಿಗೆ ಪಾವತಿ ಮಾಡಬೇಕಾಗಿರುತ್ತದೆ ಎನ್ನುವಂತಹ ನಿಯಮವನ್ನು ಕೂಡ ಜಾರಿಗೆ ತರಲಾಗಿದೆ. IRDAI ಸಂಸ್ಥೆ ಇನ್ಸೂರೆನ್ಸ್ ಕಂಪನಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತಹ ಶಿಸ್ತುಬದ್ಧ ನಿಯಮಗಳನ್ನು ಕೂಡ ಜಾರಿಗೆ ತರುವಂತಹ ಯೋಚನೆಯನ್ನು ನಡೆಸಿದ್ದು ಇದರಿಂದಾಗಿ ಗ್ರಾಹಕರಿಗೆ ಇನ್ನಷ್ಟು ಉತ್ತಮವಾದಂತಹ ವಾತಾವರಣ ನಿರ್ಮಾಣವಾಗಲಿದೆ ಎನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಗಳು ಕೂಡ ಇನ್ಮುಂದೆ ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವಂತಹ ಕಟ್ಟಾಜ್ಞೆಯನ್ನು IRDAI ಸಂಸ್ಥೆ ಜಾರಿಗೆ ತಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರು ಇನ್ಸೂರೆನ್ಸ್ ಕಂಪನಿಯಲ್ಲಿ ತಾವು ಮಾಡಿರುವಂತಹ ಪಾಲಿಸಿಯ ಪ್ರತಿಯಾಗಿ ಲೋನ್ ಪಡೆದುಕೊಳ್ಳುವುದಕ್ಕೆ ಸಂಪೂರ್ಣವಾಗಿ ಅರ್ಹರಾಗಿರುತ್ತಾರೆ ಹಾಗೂ ಇನ್ಸೂರೆನ್ಸ್ ಕಂಪನಿಯವರು ಕೂಡ ನಿಗದಿತ ಸಮಯಕ್ಕೆ ನಿಗದಿತ ಹಣವನ್ನು ಸರಿಯಾದ ರೀತಿಯಲ್ಲಿ ವರ್ಗಾವಣೆ ಮಾಡುವಂತಹ ಶಿಸ್ತುಪ್ರಜ್ಞೆಯನ್ನು ಹೊಂದಿರಬೇಕು. ಇಲ್ಲವಾದಲ್ಲಿ ದಂಡ ಕಟ್ಟೋದಕ್ಕೆ ಕಂಪನಿಯವರು ಸಿದ್ಧವಾಗಿರಬೇಕು ಅನ್ನೋದನ್ನ ಇಲ್ಲಿ ಸ್ಪಷ್ಟಪಡಿಸಲಾಗಿದೆ.

ತಮ್ಮ ಆಪತ್ಕಾಲದಲ್ಲಿ ತಾವು ಕಟ್ಟಿರುವಂತಹ ಇನ್ಸೂರೆನ್ಸ್ ಪಾಲಿಸಿಯ ಹಣ ಮೆಚುರಿಟಿ ಅವರಿಗೂ ಮುಂಚೆ ಸಾಲದ ರೂಪದಲ್ಲಿ ಕೂಡ ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಗ್ರಾಹಕರು ಇನ್ನು ಮುಂದಿನ ದಿನಗಳಲ್ಲಿ ಹೊಂದಲಿದ್ದಾರೆ ಹಾಗೂ ಸ ಇದು ಸಾಕಷ್ಟು ಪ್ರಮುಖವಾದಂತಹ ಕೆಲಸಗಳಲ್ಲಿ ಅಗತ್ಯ ರೂಪದಲ್ಲಿ ಸಹಾಯಕವಾಗುತ್ತದೆ ಅನ್ನೋದನ್ನ ಕೂಡ ಇಲ್ಲಿ ನಾವು ತಿಳಿದುಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ IRDAI ಸಂಸ್ಥೆ ಈ ವಿಚಾರದಲ್ಲಿ ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಗಳು ಕೂಡ ಗ್ರಾಹಕರಿಗೆ ಸಹಾಯಕ ಆಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿರುವುದು ಗ್ರಾಹಕರಿಗೆ ಮತ್ತಷ್ಟು ಲಾಭವನ್ನು ನೀಡುವಂತಹ ಸಾಧ್ಯತೆಯನ್ನ ಸ್ಪಷ್ಟಪಡಿಸಿದೆ. ಒಂದು ವೇಳೆ ನೀವು ಕೂಡ ಇನ್ಮುಂದೆ ದಿನಗಳಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ನೀವು ಮಾಡಿರುವಂತಹ ಪಾಲಿಸಿಯ ಪ್ರತಿಯಾಗಿ ಸಾಲವನ್ನು ಪಡೆದುಕೊಳ್ಳುವಂತಹ ಇಚ್ಛೆಯನ್ನು ಹೊಂದಿದ್ದರೆ ನಿಮ್ಮ ಏಜೆಂಟರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.