Traffic Rules: ವಾಹನಗಳಲ್ಲಿ ಇನ್ಮುಂದೆ ಈ ವಸ್ತು ಇರೋ ಹಾಗಿಲ್ಲ; ಜುಲೈ 1 ರಿಂದ ಟ್ರಾಫಿಕ್ ಪೊಲೀಸರಿಂದ ಬೀಳುತ್ತೆ ಜಬರ್ದಸ್ತ್ ದಂಡ!

Traffic Rules: ಇತ್ತೀಚಿನ ದಿನಗಳಲ್ಲಿ ವಾಹನಗಳ ವಿಚಾರದಲ್ಲಿ ಸಾರಿಗೆ ಇಲಾಖೆ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಅದರಲ್ಲೂ ವಿಶೇಷವಾಗಿ ಇನ್ನು ಮುಂದೆ ಎಲ್ಇಡಿ ಹೆಡ್ ಲೈಟ್ ಗಳನ್ನ ವಾಹನದಲ್ಲಿ ಅಳವಡಿಸುವ ಹಾಗಿಲ್ಲ ಆ ನಿಯಮವನ್ನು ಉಲ್ಲಂಘನೆ ಮಾಡಿದರೆ ಜಬರ್ದಸ್ತ್ ಆಗಿ ಟ್ರಾಫಿಕ್ ಪೊಲೀಸರು ದಂಡ ವಸೂಲು ಮಾಡುತ್ತಾರೆ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಜುಲೈ 1 ರಿಂದ ಒಂದು ವೇಳೆ ನೀವು ಈ ನಿಯಮವನ್ನ ಉಲ್ಲಂಘನೆ ಮಾಡುವುದಕ್ಕೆ ಹೊರಟರೆ ಖಂಡಿತವಾಗಿ ಟ್ರಾಫಿಕ್ ಪೊಲೀಸರು ನಿಮ್ಮ ವಿರುದ್ಧ ಫೈನ್ ಹಾಕೋದು ನಿಶ್ಚಿತವಾಗಿ.

ಈ ರೀತಿ ಎಲ್ಇಡಿ ಹೆಡ್ಲೈಟ್ ಗಳನ್ನ ಅಳವಡಿಸಿಕೊಳ್ಳುವುದರಿಂದಾಗಿ ಎದುರುಗಡೆ ಬರುವಂತಹ ವಾಹನದವರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿರುವಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವಂತಹ ಬೆನ್ನಲ್ಲೆ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಅದರಲ್ಲೂ ವಿಶೇಷವಾಗಿ ಲಾರಿ ಬಸ್ಸುಗಳಂತಹ ದೊಡ್ಡ ಪ್ರಮಾಣದ ವಾಹನಗಳು ಎಲ್ಇಡಿ ಹೆಡ್ ಲೈಟ್ ಗಳನ್ನು ಹಾಕಿಕೊಳ್ಳುವುದರಿಂದಾಗಿ ಎದುರಿಗೆ ಬರುವಂತಹ ವಾಹನದವರಿಗೆ ರಸ್ತೆಯ ಮೇಲೆ ಸರಿಯಾದ ರೀತಿಯಲ್ಲಿ ಚಲಿಸುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಗಂಭೀರ ಕಾರಣಗಳಿಂದಾಗಿ ಅಪ-ಘಾತಗಳು ನಡೆದು ಜೀವ ಹಾನಿ ಆಗಿರುವಂತಹ ಪ್ರಕರಣಗಳು ಕೂಡ ಸಾಕಷ್ಟು ಕಂಡು ಬಂದಿವೆ. ಹೀಗಾಗಿ ಈ ರೀತಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ರೀತಿಯ ನಿಯಮಗಳನ್ನು ಜಾರಿಗೆ ತರುವಂತ ಪ್ರಯತ್ನವನ್ನ ನಡೆಸಲಾಗಿದೆ.

ಕೇಂದ್ರ ಮೋಟಾರ್ ವಾಹನ ಜಾರಿಗೆ ತಂದಿರುವಂತಹ ಕಾಯ್ದೆಯ ಅಡಿಯಲ್ಲಿರುವಂತಹ ಈ ನಿಯಮವನ್ನು ಪ್ರತಿಯೊಬ್ಬ ವಾಹನ ಮಾಲೀಕರು ಕೂಡ ಪರಿಪಾಲಿಸಲೇಬೇಕು ಎನ್ನುವುದಾಗಿ ಕಡ್ಡಾಯವಾಗಿ ಸೂಚಿಸಲಾಗಿದೆ. ಒಂದು ವೇಳೆ ಇದಕ್ಕೂ ಮೀರಿ ನಿಯಮ ಉಲ್ಲಂಘನೆ ಮಾಡಿದರೆ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 177 ರ ಅಡಿಯಲ್ಲಿ ಆ ವಾಹನದ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುತ್ತದೆ ಎನ್ನುವಂತಹ ಎಚ್ಚರಿಕೆಯನ್ನು ಕೂಡ ಈಗಾಗಲೇ ನೀಡಲಾಗಿದೆ. ಇನ್ನು ಜುಲೈ ತಿಂಗಳಿನಿಂದ ಈ ರೀತಿ ವಾಹನಗಳಿಗೆ ಎಲ್ಇಡಿ ಲೈಟ್ ಗಳನ್ನು ಅಳವಡಿಸುವ ಪ್ರಕ್ರಿಯೆ ಬಗ್ಗೆ ಕೂಡ ವಿಚಾರಣೆ ನಡೆಸುವಂತಹ ತಂಡವನ್ನು ರಚಿಸಲಾಗಿದೆ. ತಿಂಗಳ ಅಂತ್ಯಕ್ಕೆ ಅದರ ರಿಪೋರ್ಟ್ ಕೂಡ ವಾಹನ ಇಲಾಖೆಗೆ ಹೋಗಲಿದೆ ಎನ್ನುವುದಾಗಿ ಇಲಾಖೆಯ ವರಿಷ್ಠರು ಹೇಳಿಕೊಂಡಿದ್ದಾರೆ. ಹೀಗಾಗಿ ಒಂದು ವೇಳೆ ನಿಮಗೆ ನಿಮ್ಮ ಹಣ ಇಷ್ಟ ಅಂತ ಅಂದ್ರೆ ನಿಮ್ಮ ವಾಹನಗಳಿಗೆ ಒಂದು ವೇಳೆ ನೀವು ಹೆಚ್ಚುವರಿಯಾಗಿ ಎಲ್ಇಡಿ ಲೈಟ್ಗಳನ್ನ ಅಳವಡಿಸಿಕೊಂಡಿದ್ದರೆ ಅದನ್ನ ತೆಗೆಯುವಂತಹ ಕೆಲಸವನ್ನು ಇವತ್ತೇ ಮಾಡಿ ಇಲ್ಲವಾದರೆ ಕೈ ತುಂಬಾ ಹಣವನ್ನು ಟ್ರಾಫಿಕ್ ಪೊಲೀಸರಿಗೆ ಫೈನ್ ರೂಪದಲ್ಲಿ ಕಟ್ಟಿ ಬನ್ನಿ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕೇವಲ ಹಣವನ್ನು ದಂಡ ರೂಪದಲ್ಲಿ ಕಟ್ಟುವುದು ಮಾತ್ರವಲ್ಲದೆ ನಿಮ್ಮ ಗಾಡಿಯ ರಿಜಿಸ್ಟ್ರೇಷನ್ ಹಾಗೂ ಕೆಲವೊಮ್ಮೆ ಲೈಸೆನ್ಸ್ ಕೂಡ ರದ್ದಾಗುವಂತಹ ಸಾಧ್ಯತೆ ಇರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ.

Comments are closed.