Aishwarya Rai:1500 ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದ ಈ ನಟಿಗೀಗ ಕೋಟಿ ಕೋಟಿ ಸಂಪಾದನೆ; ಕನ್ನಡದವಳೇ ಆಗಿದ್ರು ಕನ್ನಡದಲ್ಲಿ ನಟಿಸಿಲ್ಲ ಯಾರು ಗೊತ್ತಾ?

Aishwarya Rai: ನಮ್ಮ ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ನಟಿಯರನ್ನು ನಾವು ಹೊಸದಾಗಿ ನೋಡಿದ್ದೇವೆ. ನಟರಿಗೆ ಹೋಲಿಸಿದರೆ ನಟಿಯರ ಸಿನಿಮಾದಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಯ ಅವಧಿ ಅತ್ಯಂತ ಕಡಿಮೆ ಆಗಿರುತ್ತದೆ ಹೀಗಾಗಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಅವರಿಗೆ ಬೇಕಾಗಿರುವಂತಹ ಸಿನಿಮಾಗಳಲ್ಲಿ ನಟಿಸೋದು ಹಾಗೂ ಬರುವಂತಹ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದರಿಂದ ಆದಷ್ಟು ಜನಪ್ರಿಯ ರಾಗಬಹುದಾದಂತಹ ಅವಕಾಶವನ್ನು ಹೊಂದಿರುತ್ತಾರೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವಂತಹ ನಟಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವಂತಹ ಕೆಲಸವನ್ನು ಮಾಡಿಕೊಂಡು ಬರ್ತಾ ಇದ್ದಾರೆ ಹಾಗೂ ವಯಸ್ಸಾಗಿದ್ರೂ ಕೂಡ ಅವರ ನಾಯಕನಟಿಯ ಪಾತ್ರದ ಬೇಡಿಕೆ ಅನ್ನೋದು ಇವತ್ತಿಗೂ ಕೂಡ ಕಡಿಮೆಯಾಗಿಲ್ಲ.

ಕನ್ನಡದ ಈ ನಟಿ ಇದುವರೆಗೂ ಕನ್ನಡದಲ್ಲಿ ನಟಿಸಿಲ್ಲ ಆದರು ಕೂಡ ಭಾರತದಲ್ಲಿ ಸೂಪರ್ ಸ್ಟಾರ್!

ಹೌದು ನಾವ್ ಮಾತಾಡ್ತಿರೋದು ಕರಾವಳಿಯ ಬೆಡಗಿ ಆಗಿರುವಂತಹ ಐಶ್ವರ್ಯ ರೈ ಅವರ ಬಗ್ಗೆ. 92ನೇ ಇಸ್ವಿಯಲ್ಲಿ ಅವರು ಮೊದಲ ಬಾರಿಗೆ ಮಾಡಲಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಇಲ್ಲಿ ಅವರು 1500 ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ನಂತರ ಎರಡು ವರ್ಷ ಆದ್ಮೇಲೆ ವಿಶ್ವ ಸುಂದರಿಯಾಗಿ ಭಾರತದ ಕೀರ್ತಿಯನ್ನು ಇಡೀ ವಿಶ್ವದ ಉದ್ದಗಲಕ್ಕೂ ಕೂಡ ಸಾರುತ್ತಾರೆ. ಇವತ್ತು ಬಾಲಿವುಡ್ ಚಿತ್ರರಂಗದ ರಾಣಿಯ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ಐಶ್ವರ್ಯ ರೈ ನಿಜಕ್ಕೂ ಹೇಳಬೇಕೆಂದರೆ ಮೊದಲ ಬಾರಿಗೆ ಸಿನೆಮಾ ರಂಗದಲ್ಲಿ ಕಾಣಿಸಿಕೊಂಡಿದ್ದು ಮಣಿರತ್ನಂ ನಿರ್ದೇಶನದ ಇರುವರ್ ಎನ್ನುವಂತಹ ತಮಿಳು ಸಿನಿಮಾದ ಮೂಲಕ. ಇತ್ತೀಚಿಗಷ್ಟೇ ಪೊನಿಯನ್ ಸೆಲ್ವನ್ ಎನ್ನುವಂತಹ ತಮಿಳು ಚಿತ್ರದಲ್ಲಿ ಮತ್ತೆ ನಾಯಕಿಯಾಗಿ ಕಂಬ್ಯಾಕ್ ಮಾಡಿರುವುದನ್ನು ಕೂಡ ನೀವು ನೋಡಿರಬಹುದು.

ಅದಾದ ಮೇಲೆ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದ ಐಶ್ವರ್ಯ ರೈ ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಹೋದರು. ಇವತ್ತಿಗೂ ಕೂಡ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ 12 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಳ್ಳುವಂತಹ ನಟಿ ಐಶ್ವರ್ಯ ರೈ ವಯಸ್ಸು 50 ಆಗಿದ್ದರೂ ಕೂಡ ಇವತ್ತಿನ ಸ್ಟಾರ್ ನಟಿಯರಿಗೂ ಕಾಂಪಿಟೇಶನ್ ನೀಡೋ ರೀತಿಯಲ್ಲಿ ಜನರ ನಡುವೆ ಜನಪ್ರಿಯತೆಯನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಇವತ್ತಿಗೂ ಕೂಡ ಹಾಲಿವುಡ್ ನಲ್ಲಿ ನಡೆಯುವಂತಹ ಸಾಕಷ್ಟು ಫ್ಯಾಷನ್ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುವಂತಹ ಇವರು ಭಾರತದ ಆಚೆಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಸೆಲೆಬ್ರಿಟಿಗಳ ಸ್ನೇಹವನ್ನು ಸಂಪಾದಿಸಿದ್ದಾರೆ. ಅಮಿತಾಬ್ ಬಚ್ಚನ್ ರವರ ಮಗ ಅಭಿಷೇಕ್ ಬಚ್ಚನ್ ರವರನ್ನು ಮದುವೆ ಆಗಿರುವಂತಹ ಇವರು ಆರಾಧ್ಯ ಎನ್ನುವಂತಹ ಮಗಳನ್ನು ಕೂಡ ಹೊಂದಿದ್ದಾರೆ.

Comments are closed.