Astrology: ಬುಧಾದಿತ್ಯ ರಾಜಯೋಗದಿಂದಾಗಿ ಈ ಐದು ರಾಶಿಯವರಿಗೆ ಜುಲೈ ತಿಂಗಳಲ್ಲಿ ಲಾಭವೋ ಲಾಭ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ಜೂನ್ 29ರಂದು ತನ್ನ ಮಿಥುನ ರಾಶಿಯಿಂದ ಹೊರಬಂದು ಕರ್ಕ ರಾಶಿಗೆ ಕಾಲಿಡಲಿದ್ದಾನೆ. ಜುಲೈ 19ರ ವರೆಗೂ ಕೂಡ ಇದೇ ರಾಶಿಯಲ್ಲಿ ಇರುವಂತಹ ಬುಧ ಸೂರ್ಯನ ಜೊತೆಗೆ ಸಂಯೋಗವನ್ನು ಕೂಡ ಹೊಂದಿರುತ್ತಾನೆ. ಬುಧ ಹಾಗೂ ಆದಿತ್ಯರ ಈ ಸಂಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಐದು ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಾಡುವಂತಹ ಕೆಲಸಗಳಲ್ಲಿ ಹಾಗೂ ಜೀವನದ ಬೇರೆ ಬೇರೆ ವಿಭಾಗಗಳಲ್ಲಿ ಗೆಲುವನ್ನು ಸಾಧಿಸುವಂತಹ ಅವಕಾಶವಿದೆ.

ಮೇಷ ರಾಶಿ

ಬುಧಾದಿತ್ಯ ಯೋಗ ಅನ್ನೋದು ಮೇಷ ರಾಶಿಯವರಿಗೆ ಸಂಪೂರ್ಣವಾಗಿ ಗೆಲುವಿನ ಲಾಭ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಒಂದು ಹಂತದವರೆಗೆ ಅವರು ತಮ್ಮ ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ಎದುರಾಳಿಗಳನ್ನು ಸೋಲಿಸಬಹುದಾಗಿದೆ. ನಿಮ್ಮ ಆಪ್ತರಿಂದ ಗುಡ್ ನ್ಯೂಸ್ ಪಡೆಯುವಂತಹ ಸಮಯ ಇದಾಗಿದೆ. ಸಾಕಷ್ಟು ಸಮಯಗಳಿಂದ ನೀವು ಅಂದುಕೊಂಡಿರುವಂತಹ ಮನೆ ಅಥವಾ ಹೊಸ ವಾಹನವನ್ನು ಖರೀದಿ ಮಾಡುವಂತಹ ಆಸೆ ಕೊನೆಗೂ ಕೂಡ ಈ ಸಂದರ್ಭದಲ್ಲಿ ಈಡೇರಲಿದೆ. ಮಾನಸಿಕ ಅಡಚಣೆಗಳು ಬರಬಹುದು ಆದರೆ ಅವುಗಳನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ನಿಮ್ಮ ಬಳಿ ಇದೆ.

ವೃಷಭ ರಾಶಿ

ಈ ಸಂದರ್ಭದಲ್ಲಿ ವೃಷಭ ರಾಶಿಯವರು ತಮ್ಮ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಆಧಾರದಲ್ಲಿ ತಮಗೆ ವಹಿಸುವಂತಹ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸಲಿದ್ದಾರೆ. ಎಂತಹುದೇ ಕಷ್ಟಕರ ಪರಿಸ್ಥಿತಿಯಲ್ಲಿ ಕೂಡ ನಿಮಗೆ ನೀಡಿರುವಂತಹ ಕೆಲಸವನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸುತ್ತೀರಾ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಹೆಚ್ಚಾಗಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ.

ಕನ್ಯಾ ರಾಶಿ

ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ಎಲ್ಲಾ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಲಿವೆ ಯಾಕೆಂದರೆ ಆದಾಯ ಗಳಿಸೋದಕ್ಕೆ ಒಂದಕ್ಕಿಂತ ಹೆಚ್ಚಿನ ಆದಾಯದ ಮೂಲಗಳು ತಮ್ಮ ಬಾಗಿಲನ್ನು ತೆರೆಯಲಿವೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತುಕೊಂಡಿರುವಂತಹ ಕೆಲಸಗಳು ಪೂರ್ಣವಾಗುತ್ತವೆ ಅದರಲ್ಲೂ ವಿಶೇಷವಾಗಿ ಸರ್ಕಾರಿ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಈ ಸಂದರ್ಭ ಅತ್ಯಂತ ಶುಭವಾಗಿದೆ ಎಂದು ಹೇಳಬಹುದಾಗಿದೆ.

ತುಲಾ ರಾಶಿ

ಈ ಸಂದರ್ಭದಲ್ಲಿ ನೀವು ಪ್ರಾರಂಭ ಮಾಡಿರುವಂತಹ ದೊಡ್ಡ ಕೆಲಸಗಳು ಕೂಡ ಯಶಸ್ವಿಯಾಗಿ ಸಂಪೂರ್ಣಗೊಳ್ಳಲಿವೆ. ಆದರೆ ಈ ಕೆಲಸದಲ್ಲಿ ನೀವು ಯಾವುದೇ ರೀತಿಯಲ್ಲಿ ಕೂಡ ತಡ ಮಾಡುವುದು ಸರಿಯಲ್ಲ. ಉದ್ಯೋಗದಲ್ಲಿ ಇರುವವರಿಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಸಿಗಲಿದೆ ಮತ್ತು ಸಮಾಜದಲ್ಲಿ ಕೂಡ ನಿಮ್ಮ ಗೌರವ ಹೆಚ್ಚಾಗಲಿದೆ. ವಾಹನ ಹಾಗೂ ಪ್ರಾಪರ್ಟಿ ಖರೀದಿ ಮಾಡುವಂತಹ ಅದೃಷ್ಟ ಕೂಡ ಇದೆ.

ಮೀನ ರಾಶಿ

ಈ ಸಂದರ್ಭದಲ್ಲಿ ಮೀನ ರಾಶಿಯವರು ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸಿನ ಸಿಹಿಯನ್ನು ಸವಿಯಲಿದ್ದಾರೆ. ಧಾರ್ಮಿಕ ಕೆಲಸಗಳ ಬಗ್ಗೆ ಮೀನ ರಾಶಿಯವರ ಆಸಕ್ತಿ ಈ ಸಂದರ್ಭದಲ್ಲಿ ಹೆಚ್ಚಾಗಲಿದೆ ಇದರಿಂದಾಗಿ ಪುಣ್ಯ ಸಂಪಾದನೆ ಕೂಡ ಏರಿಕೆಯಾಗಲಿದೆ. ಉದ್ಯೋಗ ಜೀವನ ಸಾಕಷ್ಟು ಗೆಲುವನ್ನು ನೀಡಲಿದೆ ಹಾಗೂ ನೀವು ಈ ಸಂದರ್ಭದಲ್ಲಿ ಪ್ರೇಮ ಸಂಬಂಧದಲ್ಲಿ ಇದ್ದರೆ ನಿಮ್ಮ ಮದುವೆಗೆ ನಿಮ್ಮ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಗಲಿದೆ.

Comments are closed.