Tirupati: ತಿರುಪತಿಗೆ ಹೋಗುವ ಭಕ್ತಾಧಿಗಳಿಗೆ ಚಂದ್ರಬಾಬು ನಾಯ್ಡು ಕೊಟ್ರು ಗುಡ್ ನ್ಯೂಸ್; ಇಂತವರಿಗೆ ಉಚಿತ ದರ್ಶನ!

Tirupati: ನಮಗೂ ಭಾರತ ದೇಶದಿಂದ ಮೂಲೆ ಮೂಲೆಗಳಿಂದ ನಿಮಗೆಲ್ಲರಿಗೂ ತಿಳಿದಿರಬಹುದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಸಾವಿರಾರು ಲಕ್ಷಾಂತರ ಭಕ್ತಾಭಿಮಾನಿಗಳು ಬರುತ್ತಾರೆ. ತಿರುಪತಿ ತಿಮ್ಮಪ್ಪನ ದೇವಸ್ಥಾನ ಇವತ್ತಿನ ದಿನಗಳಲ್ಲಿ ಭಾರತ ದೇಶದಲ್ಲಿ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಅಂದರೆ ಅಲ್ಲಿಗೆ ಬರುವಂತಹ ಭಕ್ತಾಭಿಮಾನಿಗಳೇ ಕಾರಣ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಿಕೊಳ್ಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಚಂದ್ರ ಬಾಬು ನಾಯ್ಡು ಹೊಸದಾಗಿ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರವನ್ನು ಪಡೆದುಕೊಂಡಿದ್ದು ಅಧಿಕಾರಕ್ಕೆ ಬಂದ ಕೂಡಲೇ ಈಗ ತಿರುಪತಿಯಲ್ಲಿ ಕೂಡ ಕೆಲವೊಂದು ಸಕಾರಾತ್ಮಕ ಬದಲಾವಣೆಗಳನ್ನು ಮಾಡುವುದಕ್ಕೆ ಹೊರಟಿರೋದು ಎಲ್ಲರ ಕಣ್ಣ ಮುಂದೆ ಕಾಣುತ್ತಿದೆ.

ತಿರುಪತಿಯ ತಿಮ್ಮಪ್ಪನ ಭಕ್ತಾಭಿಮಾನಿಗಳಿಗೆ ಗುಡ್ ನ್ಯೂಸ್!

65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ತಿರುಪತಿ ದರ್ಶನ ಸಂಪೂರ್ಣವಾಗಿ ಉಚಿತ ಮಾಡಲಾಗುತ್ತಿದೆ ಎಂಬುದಾಗಿ ಕೂಡ ಇತ್ತೀಚಿನ ದಿನಗಳಲ್ಲಿ ಅಧಿಕೃತವಾಗಿ ಸುದ್ದಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಿಂದ ಕೇಳಿ ಬರ್ತಾ ಇದೆ. ಚಂದ್ರಬಾಬು ನಾಯ್ಡು ರವರು ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಂತೆ ತಿರುಪತಿ ದೇವಸ್ಥಾನದಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ. ಇನ್ನು 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಉಚಿತ ಸ್ಲಾಟ್ ಅನ್ನು ದಿನಕ್ಕೆ ಎರಡು ಬಾರಿ ನಿಗದಿಪಡಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಮೊದಲನೇದಾಗಿ ಬೆಳಗ್ಗೆ 10 ಗಂಟೆಗೆ ಹಾಗೂ ಎರಡನೇದಾಗಿ ಮಧ್ಯಾಹ್ನ 3 ಗಂಟೆಗೆ ಎಂಬುದಾಗಿ ತಿಳಿದು ಬಂದಿದೆ. ಎರಡು ಸಮಯದಲ್ಲಿ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವೆಂಕಟೇಶ್ವರನ ಉಚಿತ ದರ್ಶನವನ್ನು ತಿರುಪತಿಯಲ್ಲಿ ಮಾಡಬಹುದಾಗಿದೆ. S1 ಕೌಂಟರ್ ನಲ್ಲಿ ಇದಕ್ಕಾಗಿ ನೀವು ನಿಮ್ಮ ವಯಸ್ಸಿನ ಪ್ರೂಫ್ ನೀಡುವಂತಹ ಡಾಕ್ಯುಮೆಂಟ್ಸ್ ಹಾಗೂ ನಿಮ್ಮ ಫೋಟೋ ಐಡಿಯನ್ನು ನೀಡಬೇಕಾಗಿರುತ್ತದೆ.

ನೀವು ಮೆಟ್ಟಿಲನ್ನು ಹತ್ತಿಕೊಂಡು ಕಷ್ಟಪಡಬೇಕಾದಂತಹ ಅಗತ್ಯ ಕೂಡ ಇರುವುದಿಲ್ಲ ನಿಮಗಾಗಿ ಉತ್ತಮವಾದ ಸೀಟ್ಗಳು ಕೂಡ ಲಭ್ಯ ಇದೆ. ಒಮ್ಮೆ ನೀವು ಕುಳಿತ ತಕ್ಷಣ ಅನ್ನ ಸಾರು ಮೊಸರು ಬಿಸಿ ಹಾಲು ಸೇರಿದಂತೆ ಪ್ರತಿಯೊಂದು ಅವಶ್ಯಕ ಆಹಾರ ವಸ್ತುಗಳು ಉಚಿತವಾಗಿ ದೊರಕುತ್ತವೆ. ನಿಮಗೆ ಕೌಂಟರ್ ಗೆ ತಂದು ಬಿಡುವುದಕ್ಕೆ ಮುಖ್ಯವಾದ ದಿಂದ ಹಿಡಿದು ಎಕ್ಸಿಟ್ ಗೇಟ್ ವರೆಗೂ ಕೂಡ ಬ್ಯಾಟರಿ ಕಾರ್ ಸದಾ ಲಭ್ಯ ಇರುತ್ತವೆ ಅನ್ನೋದು ಕೂಡ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿದೆ. ಇದನ್ನು ಕೇವಲ ಹಿರಿಯ ನಾಗರಿಕರಿಗಾಗಿ ಮಾತ್ರ ಜಾರಿಗೆ ತಂದಿರುವಂತಹ ವ್ಯವಸ್ಥೆಯಾಗಿದ್ದು ದರ್ಶನ ಪಡೆದ 30 ನಿಮಿಷಗಳ ನಂತರ ನೀವು ಸರದಿ ಸಾಲನ್ನು ತೊರೆಯಬಹುದಾಗಿದೆ. 08772277777 ಈ ನಂಬರ್ಗೆ ಕರೆ ಮಾಡುವ ಮೂಲಕ ನೀವು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಇನ್ನಷ್ಟು ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಇನ್ಮುಂದೆ ತಿರುಪತಿ ದೇವಸ್ಥಾನದ ದರ್ಶನ ಅನ್ನೋದು ಹಿರಿಯ ನಾಗರಿಕರಿಗೆ ಅಷ್ಟೊಂದು ಕಷ್ಟದಾಯಕವಾಗಿರುವುದಿಲ್ಲ ಅನ್ನೋದನ್ನ ದೇವಸ್ಥಾನದ ಆಡಳಿತ ಮಂಡಳಿ ಖಚಿತ ಪಡಿಸಿಕೊಂಡಿದೆ.

Comments are closed.