Bank Loan: ಈ ಬ್ಯಾಂಕ್ನಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಸಿಕ್ತಾ ಇದೆ ನೋಡಿ 10 ಲಕ್ಷ ರೂಪಾಯಿಗಳವರೆಗೆ ಲೋನ್! ಇವತ್ತೇ ಅರ್ಜಿ ಸಲ್ಲಿಸಿ!

Bank Loan:ನರೇಂದ್ರ ಮೋದಿ ರವರ ಸರ್ಕಾರ ತಮ್ಮದೇ ಸ್ವಂತ ಕಾಲಿನ ಮೇಲೆ ನಿಂತು ವ್ಯಾಪಾರವನ್ನು ಪ್ರಾರಂಭ ಮಾಡ್ತೀವಿ ಅಂತ ಹೇಳೋರಿಗೆ ಹಣ ಸಹಾಯವನ್ನು ಮಾಡುವಂತಹ ಕೆಲಸವನ್ನು ಮುದ್ರ ಲೋನ್ ಯೋಜನೆಯ ಮೂಲಕ ಮಾಡಿಕೊಂಡು ಬರುತ್ತಿದೆ. ಇದೇ ಕಾರಣಕ್ಕಾಗಿ ತಮ್ಮದೇ ಆದಂತಹ ವ್ಯಾಪಾರವನ್ನು ಮಾಡಬೇಕು ಅಂತ ಅಂದುಕೊಂಡಿರುವವರಿಗೆ ಬೆಳವಣಿಗೆಯನ್ನು ಹೊಂದಲು ಕೇಂದ್ರ ಸರ್ಕಾರ ಬೇಕಾಗಿರುವಂತಹ ಪ್ರತಿಯೊಂದು ಸಹಾಯಗಳನ್ನು ಮಾಡಿಕೊಂಡು ಬರ್ತಾ ಇದೆ ಅಂತ ಹೇಳಬಹುದು. ಹಾಗಿದ್ರೆ ಬನ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಸಾಲ ಪಡೆದುಕೊಳ್ಳಬಹುದು ಹಾಗೂ ಏನೆಲ್ಲಾ ಪ್ರಕ್ರಿಯೆಗಳು ಇವೆ ಅನ್ನೋದನ್ನ ತಿಳಿಯೋಣ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುದ್ರಾ ಲೋನ್ ಯೋಜನೆ!

ಭಾರತದಲ್ಲಿ ಇರುವಂತಹ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಇನ್ನಷ್ಟು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ರವರಿಂದ ಪ್ರಾರಂಭವಾಗಿರುವಂತಹ ಮುದ್ರಾ ಲೋನ್ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ನೀಡುವುದಕ್ಕೆ ಹೊರಟಿದೆ. 10 ಲಕ್ಷ ರೂಪಾಯಿಗಳವರೆಗೆ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಪ್ರಕ್ರಿಯೆಗಳು ಏನು ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಇ-ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಕರೆಂಟ್ ಅಥವಾ ಸೇವಿಂಗ್ ಅಕೌಂಟ್ ಕನಿಷ್ಠಪಕ್ಷ ಆರು ತಿಂಗಳುಗಳ ಕಾಲ ಹಳೆಯದಾಗಿರಬೇಕಾಗಿರುತ್ತದೆ. ಆನ್ಲೈನ್ ಮೂಲಕವೇ ಸಾಲವನ್ನು ಪಡೆದುಕೊಳ್ಳುವುದಕ್ಕೆ 50,000 ಗರಿಷ್ಟ ಮೊತ್ತವಾಗಿರುತ್ತದೆ ಹಾಗೂ ಹೆಚ್ಚಿನ ಸಾಲಕ್ಕಾಗಿ ನೀವು ನೇರವಾಗಿ ಬ್ಯಾಂಕಿನ ಬ್ರಾಂಚಿಗೆ ಭೇಟಿ ನೀಡಬೇಕಾಗಿರುತ್ತದೆ. ಈಗಾಗಲೇ ಚಿಕ್ಕಪುಟ್ಟ ವ್ಯಾಪಾರವನ್ನು ಹೊಂದಿದ್ದು ಅದನ್ನು ವಿಸ್ತರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನೀವು ಈ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಹೊಸ ವ್ಯಾಪಾರಕ್ಕೆ ಮಾಲೀಕರಾಗಿದ್ದು ಸೂಕ್ಷ್ಮ ವ್ಯಾಪಾರವನ್ನು ನಡೆಸುತ್ತಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇ-ಮುದ್ರಾ ಯೋಜನೆ ಅಡಿಯಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ.

ಇ-ಮುದ್ರಾ ಲೋನ್ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ಡಾಕ್ಯುಮೆಂಟ್ಸ್!

  • ವ್ಯಾಪಾರದ ಡಾಕ್ಯುಮೆಂಟ್ಸ್
  • ಸೇವಿಂಗ್ ಅಥವಾ ಕರೆಂಟ್ ಅಕೌಂಟ್ ನ ಡೀಟೇಲ್ಸ್
  • ಸಮುದಾಯದ ವಿವರ ಹಾಗೂ ಆಧಾರ್ ಕಾರ್ಡ್ ನಂಬರ್
  • ಜಿಎಸ್‌ಟಿ ನಂಬರ್ ಹಾಗೂ ಉದ್ಯೋಗ್ ನ ಆಧಾರ್ ನಂಬರ್
  • ನಿಮ್ಮ ವ್ಯಾಪಾರದ ನೋಂದಾವಣೆಯ ಸರ್ಟಿಫಿಕೇಟ್ ಕೂಡ ಬೇಕಾಗಿರುತ್ತದೆ. ಇ-ಮುದ್ರಾ ಯೋಜನೆ ಅಡಿಯಲ್ಲಿ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇ-ಮುದ್ರಾ ಲೋನ್ ಯೋಜನೆ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿ ಪ್ರೋಸಿಡ್ ಎನ್ನುವಂತಹ ಆಯ್ಕೆಯನ್ನು ಕ್ಲಿಕ್ ಮಾಡಿ.
  • eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಹ ಪ್ರತಿಯೊಂದು ವಿಧಾನಗಳನ್ನು ನೀವು ಇಲ್ಲಿ ಕೇಳಿರುವ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ ಹಾಗೂ ನಂತರ ಕೊನೆಯಲ್ಲಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಈ ಸಂದರ್ಭದಲ್ಲಿ ಸಾಲ ಪ್ರಕ್ರಿಯೆಗಾಗಿ ನೀವು ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿಯನ್ನು ಕೂಡ ಅಲ್ಲಿ ನಮೂದಿಸ ಬೇಕಾಗಿರುತ್ತದೆ.
  • ಒಮ್ಮೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಮುಂದಿನ ಪ್ರಕ್ರಿಯೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಅಂತ ಮೆಸೇಜ್ ಅನ್ನೋ ಪಡೆದುಕೊಳ್ಳುತ್ತೀರಿ.
  • ಈ ಮೆಸೇಜ್ ಬಂದ ನಂತರ 30 ದಿನಗಳ ಒಳಗಾಗಿ ಯೋಜನೆಯ ಲೋನ್ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಬೇಕಾಗಿರುತ್ತದೆ.

ಒಂದು ವೇಳೆ ನೀವು ಕೂಡ ಈ ಕ್ಯಾಟಗರಿಯ ಸಾಲವನ್ನು ಪಡೆದುಕೊಳ್ಳುವಂತಹ ಆಸಕ್ತಿಯನ್ನು ಹೊಂದಿದ್ದರೆ ಈ ಮೇಲಿನ ಮಾಹಿತಿಗಳನ್ನು ಬಳಸಿಕೊಳ್ಳುವ ಮೂಲಕ ನೀವು ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Comments are closed.