Darshan Case: ಅಂದು ಕರ್ನಾಟಕ ಇಂದು ಡೆಲ್ಲಿ, ದೇಶವನ್ನೇ ನಡುಗಿಸುವ ನಟನಿಗೆ ಮತ್ತೊಂದು ಬಾರಿ ಶಾಕ್!

Darshan Case; ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಂಡಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ಕಳೆದ ಸಾಕಷ್ಟು ದಿನಗಳಿಂದ ಪೊಲೀಸ್ ಕಸ್ಟಡಿಯನ್ನು ಎದುರಿಸುತ್ತಿದ್ದಾರೆ. ಇದರಿಂದ ಈಗ ಹೊರ ಬರುವುದಕ್ಕಿಂತ ಮುಂಚೇನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇನ್ನಷ್ಟು ದೊಡ್ಡ ಮಟ್ಟದ ಸಮಸ್ಯೆಯನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ 70 ಲಕ್ಷ ರೂಪಾಯಿಗಳ ಹಣ ಸಿಕ್ಕಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ಐಟಿ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿಂದೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯಲ್ಲಿ ಐಟಿ ರೈಡ್ ಆಗಿರೋದನ್ನ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣ ದೊರಕಿದರೆ ಆ ಹಣದ ಮೂಲದ ಬಗ್ಗೆ ಖಂಡಿತವಾಗಿ ಐಟಿ ಇಲಾಖೆ ಆ ವ್ಯಕ್ತಿಯ ವಿರುದ್ಧವಾಗಿ ಪ್ರಶ್ನಾವಳಿಗಳನ್ನು ಪ್ರಾರಂಭ ಮಾಡುತ್ತಿದೆ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ ಆಗಿದ್ದು ಇಲ್ಲಿ ಕೂಡ ಅದೇ ಘಟನೆ ನಡಿತಾ ಇದೆ.

ದರ್ಶನ್ ರವರಿಗೆ ಐಟಿ ಇಲಾಖೆಯಿಂದ ಕುಣಿಕೆ!

ದರ್ಶನ್ ರವರ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಒಟ್ಟಾರೆಯಾಗಿ 70 ಲಕ್ಷ ರೂಪಾಯಿ ಹಣ ಕಂಡುಬಂದಿದ್ದು ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮೊತ್ತ ಕಂಡು ಬಂದ್ರೆ ಅದನ್ನ ಐಟಿ ಇಲಾಖೆ ತಿಳಿಸಿ ಬೇಕಾಗಿರುತ್ತದೆ ಹಾಗೂ ಇಲ್ಲಿ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಇದನ್ನೇ ಮಾಡಿದ್ದಾರೆ. ಹೀಗಾಗಿ ಐಟಿ ಇಲಾಖೆ ಈ ವಿಚಾರದಲ್ಲಿ ಕೂಡ ದರ್ಶನ್ ರವರಿಗೆ ವಿಚಾರಣೆಯನ್ನು ನಡೆಸಬಹುದಾಗಿದೆ.

ಸದ್ಯಕ್ಕೆ ಆರೋಪಿಗಳಿಗೆ 30 ಲಕ್ಷ ರೂಪಾಯಿ ದರ್ಶನ್ ರವರು ನೀಡಿರುವುದು ಸಿಕ್ಕಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಪ್ರಕರಣದಲ್ಲಿ 70,40,000 ಹಣದ ಡೀಲ್ ನಡೆದರೆ ಎಂಬುದಾಗಿ ತಿಳಿದು ಬಂದಿದೆ. ಇದುವರೆಗೆ ಇಲ್ಲಿ 5.60 ಲಕ್ಷ ರೂಪಾಯಿ ಸಿಗುವುದು ಬಾಕಿ ಇದೆ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ ಒಬ್ಬ ಆರೋಪಿ ಕೊಟ್ಟಿರುವಂತಹ ಹಣದಲ್ಲಿ 60,000 ಖರ್ಚು ಮಾಡಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾನೆ.

ಸದ್ಯದ ಮಟ್ಟಿಗೆ ಈ ಪ್ರಕರಣದಲ್ಲಿ ಕಂಡು ಬಂದಿರುವಂತಹ ಬೆಳವಣಿಗೆಗಳ ಪ್ರಕಾರ ಪವಿತ್ರ ಗೌಡ ಅವರು ನ್ಯಾಯಾಂಗ ಬಂಧನಕ್ಕೆ ಪರಪನ ಅಗ್ರಹಾರಕ್ಕೆ ಜೈಲಿಗೆ ಹೋದರೆ ಈ ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ವಿಚಾರಣೆಯವರೆಗೂ ಕೂಡ ದರ್ಶನ್ ರವರು ಕಸ್ಟಡಿಯಲ್ಲಿ ಹಾಗೂ ಪವಿತ್ರ ಗೌಡ ಅವರು ಜೈಲಿನಲ್ಲಿ ತಮ್ಮ ಸಮಯವನ್ನು ಕಳೆಯ ಬೇಕಾಗುತ್ತದೆ.

Comments are closed.