Savings Scheme: ಶ್ರೀಮಂತರ ಸೀಕ್ರೆಟ್ : ಕೇವಲ ದಿನಕ್ಕೆ ಆರು ರೂಪಾಯಿಯಿಂದ 3 ಲಕ್ಷ ಲಾಭಗಳಿಸೋದು ಹೇಗೆ ಗೊತ್ತೇ??

Savings Scheme: ಪ್ರತಿಯೊಬ್ಬ ತಂದೆ ತಾಯಿಗೂ ಕೂಡ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಆರ್ಥಿಕ ವಿಚಾರದಲ್ಲಿ ಸಮಸ್ಯೆಗಳನ್ನು ಅನುಭವಿಸಬಾರದು ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಅವರು ತಮ್ಮ ಮುಂದಿನ ಜೀವನದಲ್ಲಿ ಎಲ್ಲಾ ಹಂತಗಳಲ್ಲಿ ಕೂಡ ಹೊಂದಿರಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಅದೇ ಕಾರಣಕ್ಕಾಗಿ ಅವರು ಕೆಲವೊಂದು ಯೋಜನೆಗಳಲ್ಲಿ ಕೂಡ ಹೂಡಿಕೆ ಮಾಡುವುದನ್ನ ಪ್ರಾರಂಭ ಮಾಡಿಕೊಂಡಿರುತ್ತಾರೆ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಪೋಸ್ಟ್ ಆಫೀಸ್ನಲ್ಲಿರುವಂತಹ ಇದೊಂದು ಲಾಭದಾಯಕ ಯೋಜನೆಯ ಬಗ್ಗೆ. ಕೇವಲ ಆರು ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಬೇಕಾಗುವ ರೀತಿಯಲ್ಲಿ ದೊಡ್ಡ ಮೊತ್ತದ ಉಳಿತಾಯವನ್ನು ಮಾಡಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಬಾಲ ಜೀವನ ಬಿಮಾ ಯೋಜನೆ!

ಈ ಯೋಜನೆಯಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಬಹುದಾಗಿದ್ದು ಆರು ರೂಪಾಯಿಗಳಿಂದ ಪ್ರಾರಂಭಿಸಿ ಮ್ಯಾಕ್ಸಿಮಾ ಮೂರು ಲಕ್ಷ ರೂಪಾಯಿಗಳವರೆಗು ಕೂಡ ಇಲ್ಲಿ ಹೂಡಿಕೆ ಮಾಡಬಹುದಾಗಿದೆ. ಕುಟುಂಬದಲ್ಲಿ ಇರುವಂತಹ ಇಬ್ಬರು ಮಕ್ಕಳಿಗೆ ಮಾತ್ರ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಮಗು ಹುಟ್ಟಿದ ಐದು ವರ್ಷದಿಂದ 20 ವರ್ಷಗಳ ನಡುವೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಹ ಅವಕಾಶವಿದೆ. ಐದು ವರ್ಷದ ಯೋಜನೆಗೆ ಪ್ರತಿದಿನ 18 ರೂಪಾಯಿಗಳ ಹೂಡಿಕೆಯನ್ನು ಮಾಡಬೇಕಾಗಿರುತ್ತದೆ ಹಾಗೂ 20 ವರ್ಷಗಳ ಯೋಜನೆಗೆ ನೀವು ಪ್ರತಿ ದಿನ ಆರು ರೂಪಾಯಿಗಳ ಹೂಡಿಕೆ ಮಾಡಬೇಕಾಗಿರುತ್ತದೆ.

ಇಲ್ಲಿ ವಿಮಾ ಮೊತ್ತ ಒಂದು ಲಕ್ಷದಿಂದ 3 ಲಕ್ಷ ರೂಪಾಯಿಗಳ ನಡುವೆ ಇರುತ್ತೆ ಹಾಗೂ ಮಕ್ಕಳು ಒಂದುವೇಳೆ ಮರಣ ಹೊಂದಿದ್ದಾರೆ ಅಂದ್ರೆ ಅದರ ನಂತರ ಹಣವನ್ನು ಕಟ್ಟುವ ಅಗತ್ಯ ಇರುವುದಿಲ್ಲ ಹಾಗೂ ಮೆಚುರಿಟಿ ನಂತರ ನಿಮ್ಮ ಕೈಗೆ ಹಣ ಸಿಗುತ್ತದೆ ಹಾಗೂ ಮಧ್ಯದಲ್ಲಿ ಹಣವನ್ನು ಪಡೆದುಕೊಳ್ಳಬೇಕು ಅಂತ ಅಂದರೆ ಕನಿಷ್ಠ ಪಕ್ಷ ಐದು ವರ್ಷಗಳ ಕಾಲ ಕಾಯಬೇಕಾಗುತ್ತೆ.

ಯೋಜನೆಗೆ ಇರಬೇಕಾಗಿರೋ ಅರ್ಹತೆ!

ಈ ಯೋಜನೆಗೆ ಅರ್ಜಿ ಸಲ್ಲಿಸಲು ಆ ಮಕ್ಕಳ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಮಕ್ಕಳ ವಯಸ್ಸು 5 ರಿಂದ 20 ವರ್ಷದ ನಡುವೆ ಇರಬೇಕು ಹಾಗೂ ಒಂದು ಕುಟುಂಬದಿಂದ ಕೇವಲ ಎರಡು ಮಕ್ಕಳಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವಂತಹ ಅವಕಾಶವಿದೆ.

ಬೇಕಾಗಿರುವ ಡಾಕ್ಯೂಮೆಂಟ್ಸ್

  • ಮಗುವಿನ ಬರ್ತ್ ಸರ್ಟಿಫಿಕೇಟ್
  • ಆಧಾರ್ ಕಾರ್ಡ್
  • ಅಡ್ರೆಸ್ ಪ್ರೂಫ್
  • ಪೋಷಕರ ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ!

  • ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪೋಷಕರು ಮೊದಲಿಗೆ ಪೋಸ್ಟ್ ಆಫೀಸ್ ಕಚೇರಿಗೆ ಭೇಟಿ ನೀಡಬೇಕಾಗಿರುತ್ತದೆ.
  • ಅರ್ಜಿಯನ್ನು ಪಡೆದು ಅಲ್ಲಿ ಕೇಳಿದ ಆಗುವಂತಹ ಪ್ರತಿಯೊಂದು ವಿವರಗಳಿಗೂ ಕೂಡ ಮಾಹಿತಿಯನ್ನು ಸಾಧ್ಯವಾದ ರೀತಿಯಲ್ಲಿ ತುಂಬಿಸಬೇಕು.
  • ಇದಾದ ನಂತರ ಅಲ್ಲಿ ಕೇಳಲಾಗಿರುವಂತಹ ಡಾಕ್ಯುಮೆಂಟ್ಸ್ ಗಳನ್ನು ಸರಿಯಾದ ರೀತಿಯಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಇದಾದ ನಂತರ ಪೋಸ್ಟ್ ಆಫೀಸ್ ಅಧಿಕಾರಿಗಳು ನೀವು ನೀಡಿರುವಂತಹ ಅರ್ಜಿಯಲ್ಲಿ ಇರುವಂತಹ ಮಾಹಿತಿಗಳನ್ನು ಹಾಗೂ ಅಟ್ಯಾಚ್ ಮಾಡಿರುವಂತಹ ಡಾಕ್ಯುಮೆಂಟ್ಸ್ ಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಮುಂದಿನ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಾರೆ.

Comments are closed.