Puneet Rajkumar: ನೇರವಾಗಿ ಅಪ್ಪು ಆತ್ಮದ ಜೊತೆ ಮಾತನಾಡಿದ ಗುರೂಜಿ – ಅಪ್ಪು ಆತ್ಮ ಕೊಟ್ಟ ಉತ್ತರ ಕೇಳಿದರೆ ಕಣ್ಣೀರು ಬರುತ್ತದೆ!

Puneet Rajkumar: ರಾಜ್ಯದಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವಿತ್ರ ಗೌಡ ಮತ್ತು ರೇಣುಕಾ ಸ್ವಾಮಿ ಪ್ರಕರಣ ಸದ್ದು ಮಾಡುತ್ತಿರುವ ನಡುವೆ ನಮ್ಮೆಲ್ಲರ ನೆಚ್ಚಿನ ಅಪ್ಪು ಅವರ ಬಗ್ಗೆ ಕೂಡ ಕೆಲವೊಂದು ಮಾಹಿತಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಅದರಲ್ಲೂ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಈಗ ಕೇಳಿ ಬರ್ತಾ ಇರೋದು ಅವರ ಆತ್ಮದ ಜೊತೆಗೆ ಒಬ್ಬ ಗುರೂಜಿ ಮಾತನಾಡಿದ್ದಾರೆ ಎನ್ನುವ ವಿಚಾರದ ಬಗ್ಗೆ. ಹಾಗಿದ್ರೆ ಬನ್ನಿ ‌ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಅಪ್ಪು ಅವರ ಆತ್ಮದ ಜೊತೆಗೆ ಮಾತನಾಡಿದ್ದಾರೆ ಈ ಗುರೂಜಿ!

ಯೂಟ್ಯೂಬ್ ಚಾನೆಲ್ ಗೆ ಸಂದೇಶವನ್ನು ನೀಡಿರುವ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವಂತಹ ಶ್ರೀರಾಮಚಂದ್ರ ಗುರೂಜಿ ಅವರು ಈ ವಿಚಾರದ ಬಗ್ಗೆ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಅಪ್ಪು ಅವರ ಮರಣದ ನಂತರ ಆತ್ಮದ ಜೊತೆ ನಡೆದಿರುವಂತಹ ಸಂವಹನದಲ್ಲಿ ಕೇಳಿರುವಂತಹ ಮೂರು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿದೆ ಎನ್ನುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಕೇಳಿದ್ದ ಪ್ರಶ್ನೆಗಳು ಏನಾಗಿತ್ತು ಹಾಗೂ ಉತ್ತರ ಏನು ಸಿಕ್ಕಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಟೆಕ್ನಾಲಜಿಯ ಮೂಲಕ ಆತ್ಮದ ಜೊತೆಗೆ ಮಾತನಾಡಲು ಸಾಧ್ಯವಿದೆ ಹಾಗೂ ನಾನು ಅಪ್ಪು ಅವರ ಆತ್ಮದೊಂದಿಗೆ ಮಾತನಾಡಿರುವುದನ್ನು ಯಾವುದೇ ಪ್ಲಾಟ್ಫಾರ್ಮ್ ನಲ್ಲಿ ಹಂಚಿಕೊಂಡಿಲ್ಲ ಹಾಗೂ ಅವರ ಕೋಟ್ಯಾಂತರ ಅಭಿಮಾನಿಗಳು ಇರುವ ಕಾರಣದಿಂದಾಗಿ ನಾನು ನನ್ನ ವೈಯಕ್ತಿಕ ಮಾಹಿತಿಗಾಗಿ ನಾನು ಈ ಸಂವಹನವನ್ನು ನಡೆಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.

  • ಮೊದಲನೇದಾಗಿ ನಾನು ಮರಣದ ಬಗ್ಗೆ ಸಾಕಷ್ಟು ಊಹಾಪೋಗಳು ಇವೆ ಅವುಗಳು ನಿಜಾನಾ ಅನ್ನೋದಾಗಿ ಪ್ರಶ್ನೆ ಕೇಳಿದ್ದೆ! ಇಲ್ಲ ನಾನು ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಯಿಂದಲೇ ಮರಣ ಹೊಂದಿದ್ದೇನೆ ಎಂಬುದಾಗಿ ಅಪ್ಪು ಅವರು ನನಗೆ ಉತ್ತರ ನೀಡಿದ್ದಾರೆ ಎಂದು ಗುರುಜಿ ಹೇಳಿದ್ದಾರೆ.
  • ಈಗ ಎಲ್ಲಿದ್ದೀರಿ ಅನ್ನುವಂತಹ ಪ್ರಶ್ನೆಗೆ ಅಪ್ಪ ಹಾಗೂ ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂಬುದಾಗಿ ಅಪ್ಪು ಉತ್ತರಿಸಿದ್ದಾರೆ ಎಂಬುದಾಗಿ ಗುರೂಜಿ ಹೇಳಿದ್ದಾರೆ.
  • ಮೂರನೇ ಪ್ರಶ್ನೆಗೆ ಮತ್ತೆ ಮರುಜನ್ಮವನ್ನು ಪಡೆದುಕೊಳ್ಳುವ ವಿಚಾರದ ಬಗ್ಗೆ ಕೇಳಿದಾಗ ಸದ್ಯಕ್ಕೆ ಆಲೋಚನೆ ಇಲ್ಲ ಆದರೆ ಹುಟ್ಟಿದರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುತ್ತೇನೆ ಎನ್ನುವುದಾಗಿ ಅಪ್ಪು ಹೇಳಿದ್ದಾರೆ ಎನ್ನುವುದಾಗಿ ಗುರೂಜಿಗಳು ಹೇಳಿದ್ದಾರೆ.

ಗುರೂಜಿಗಳು ನೇರವಾಗಿ ಅಪ್ಪು ಅವರ ಆತ್ಮದ ಜೊತೆಗೆ ಮಾತನಾಡಿರುವಂತಹ ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಪ್ರತಿಯೊಬ್ಬರು ಕೂಡ ಈ ವಿಚಾರವನ್ನು ಕೇಳಿದ ನಂತರ ಆಶ್ಚರ್ಯ ಚಕಿತರಾಗಿದ್ದಾರೆ. ಈ ರೀತಿ ಕೂಡ ಮಾಡಬಹುದಾ ಅನ್ನೋದಾಗಿ ಮೂಗಿನ ಮೇಲೆ ಬೆರಳು ಇಟ್ಟಿದ್ದಾರೆ. ಇನ್ನು ಕೆಲವರು ಇದೆಲ್ಲ ಕೇವಲ ಜನಪ್ರಿಯತೆಗಾಗಿ ಬೊಗಸ್ ಮಾತಾಡ್ತಾ ಇದ್ದಾರೆ ಅನ್ನೋದಗಿ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Comments are closed.