Darshan case: ಖಡಕ್ ಆದ ದರ್ಶನ್- ಸೈಲೆಂಟ್ ಆಗಿದ್ದ ದರ್ಶನ್ ಕೊನೆಗೂ ಆಡಿದ ಒಂದೇ ಒಂದು ಮಾತು ಏನು ಗೊತ್ತೇ??

Darshan case: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯ ಪ್ರಕರಣದ ಕಾರಣದಿಂದಾಗಿ ಈಗ ದರ್ಶನ್ ಹಾಗೂ ದರ್ಶನ್ ರವರ ಸಹಚರರು ಪರಪ್ಪನ ಅಗ್ರಹಾರದ ಜೈಲುವಾಸವನ್ನು ಅನುಭವಿಸಬೇಕಾಗಿರುವಂತಹ ಪರಿಸ್ಥಿತಿಯನ್ನು ಕಾಣುತ್ತಿದ್ದಾರೆ. ಸದ್ಯಕ್ಕೆ ದರ್ಶನ್ ಹಾಗೂ ಅವರ ಸಹಚರರನ್ನು ಜುಲೈ ನಾಲ್ಕರವರೆಗೆ ಕೂಡ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗುತ್ತದೆ ಎನ್ನುವಂತಹ ಮಾಹಿತಿ ನಿಮಗೆಲ್ಲರಿಗೂ ತಿಳಿದಿರುವಂಥದ್ದಾಗಿದೆ. ಇನ್ನು ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ವಿನೋದ್ ಪ್ರಭಾಕರ್ ರವರು ಭೇಟಿಯಾಗಿ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಾಧ್ಯಮದ ಎದುರಿಗೆ ಕೂಡ ವಿನೋದ್ ಪ್ರಭಾಕರ್ ರವರು ಪ್ರತಿಕ್ರಿಯಿಸಿದ್ದಾರೆ.

ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಭೇಟಿ ಮಾಡಿ ಬಂದಿರುವಂತಹ ವಿನೋದ್ ಪ್ರಭಾಕರ್ ರವರು ಕಳೆದ ನಾಲ್ಕು ಐದು ತಿಂಗಳಿಂದ ನಾನು ಅವರನ್ನು ಭೇಟಿ ಆಗಿರ್ಲಿಲ್ಲ ಇದೇ ಮೊದಲ ಬಾರಿ ನಾನು ಭೇಟಿ ಆಗ್ತಾ ಇರೋದು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಮಾತನಾಡುತ್ತಾ ನನಗೂ ಕೂಡ ಟಿವಿ ಮಾಧ್ಯಮಗಳ ಮುಖಾಂತರವೇ ಈ ಪ್ರಕರಣದ ಬಗ್ಗೆ ತಿಳಿದು ಬಂದಿರುವುದು ನಾನು ಅವರನ್ನ ಪೊಲೀಸ್ ಸ್ಟೇಷನ್ ಬಳಿಯ ಭೇಟಿಯಾಗುವಂತಹ ಪ್ರಯತ್ನವನ್ನ ಮಾಡಿದ್ದೆ ಆದರೆ ಅಲ್ಲಿ ಭೇಟಿಯಾಗಲು ಸಾಧ್ಯವಾಗಿಲ್ಲ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ರವರು ಹೇಳಿದ್ದಾರೆ. ದರ್ಶನ್ ರವರನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದ ಸಂದರ್ಭದಲ್ಲಿ ದರ್ಶನ್ ಏನಂದ್ರು ಅಂತ ತಿಳಿದುಕೊಳ್ಳೋಣ ಬನ್ನಿ.

ವಿನೋದ್ ಪ್ರಭಾಕರ್ ಅವರನ್ನು ಭೇಟಿಯಾಗಿ ದರ್ಶನ್ ಹೇಳಿದ್ದೇನು?

ನಿಮಗೆಲ್ಲರಿಗೂ ತಿಳಿದಿರಬಹುದು ಮಾಧ್ಯಮಗಳಲ್ಲಿ ಕೇಳಿ ಬಂದಿರುವಂತಹ ಸುದ್ದಿಯ ಪ್ರಕಾರ ಜೈಲಿಗೆ ಹೋದ ನಂತರದಿಂದಲೂ ಕೂಡ ದರ್ಶನ್ ರವರು ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ವಿನೋದ್ ಪ್ರಭಾಕರ್ ರವರು ದರ್ಶನ್ ರವರನ್ನು ಭೇಟಿಯಾಗಲು ಒಳಕ್ಕೆ ಹೋದಾಗ “ಏನ್ ಟೈಗರ್” ಅಂತ ಹೇಳಿದ್ದು ಬಿಟ್ಟರೆ ಮತ್ತೆ ಯಾವುದೇ ಮಾತಾಡಿಲ್ಲ ಅನ್ನೋದಾಗಿ ವಿನೋದ್ ಪ್ರಭಾಕರ್ ಅವರು ಹೇಳಿಕೊಂಡಿದ್ದಾರೆ. ಶೇಕ್ ಹ್ಯಾಂಡ್ ಮಾಡಿದ ನಂತರ ಸಂಪೂರ್ಣವಾಗಿ ದರ್ಶನ್ ರವರು ಮೌನಕ್ಕೆ ಶರಣಾಗಿದ್ದರು ಅನ್ನೋದನ್ನ ಕೂಡ ಅವರಿಗೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ನ್ಯಾಯ ಕೂಡ ಸಿಗಲಿ ಅನ್ನೋದಾಗಿ ಈ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ರವರು ಹೇಳಿರುವುದು ಕೂಡ ಪ್ರಮುಖ ಹೈಲೈಟ್ ಆಗಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ನ್ಯಾಯ ಖಂಡಿತವಾಗಿ ಸಿಗಲಿದೆ ಅನ್ನೋದಾಗಿ ಕೂಡ ಈ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.