Darshan case: ಮೊದಲ ಬಾರಿಗೆ ದರ್ಶನ್ ಬೆಂಬಲಕ್ಕೆ ನಿಂತ ಏಕೈಕ ಕನ್ನಡದ ನಟಿ- ದರ್ಶನ್ ಗೆ ಕೊನೆಗೂ ಆನೆ ಬಲ!

Darshan case: ಕೋಪದ ಕೈಗೆ ಬುದ್ದಿ ಕೊಟ್ರೆ ಏನಾಗುತ್ತೆ ಅನ್ನೋದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗ ಇರುವಂತಹ ಪರಿಸ್ಥಿತಿಯ ಉದಾಹರಣೆ ಎನ್ನುವುದಾಗಿ ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಾಕಷ್ಟು ಜನ ಕಲಾವಿದರ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರು ಕೂಡ ಈಗ ದರ್ಶನ್ ರವರ ಪರವಾಗಿ ಒಬ್ಬರೇ ಒಬ್ರು ಕೂಡ ಮಾತನಾಡುತ್ತಿಲ್ಲ ಅನ್ನೋದು ನಿಜಕ್ಕೂ ಕೂಡ ಒಂದು ರೀತಿಯಲ್ಲಿ ಬೇಸರದ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಆದರೆ ಕೊನೆಗೂ ಈಗ ಒಬ್ಬ ನಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪರವಾಗಿ ತಮ್ಮ ಧ್ವನಿಯನ್ನು ಎತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಡಿ ಬಾಸ್ ಪರ ಧ್ವನಿಯೆತ್ತಿದ ಸೋನು ಗೌಡ!

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಪೋಸ್ಟ್ ಮಾಡುವ ಮೂಲಕ ಹಾಗೂ ತಮ್ಮ ಯುಟ್ಯೂಬ್ ಚಾನೆಲ್ನಿಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಫಾಲೋವರ್ಸ್ ಗಳನ್ನು ಹೊಂದಿರುವಂತಹ ಸೋನು ಗೌಡ ಇತ್ತೀಚಿಗಷ್ಟೇ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಕೂಡ ಇದೇ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿದ್ರೆ ನೀವು ಸುಮ್ಮನೆ ಇರ್ತೀರಾ ಅನ್ನೋದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ನೇರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಬೆಂಬಲವನ್ನು ವ್ಯಕ್ತಪಡಿಸುವಂತಹ ಕೆಲಸವನ್ನು ಸೋನು ಶ್ರೀನಿವಾಸ ಗೌಡ ಮಾಡಿದ್ದಾರೆ.

ಇನ್ನು ತಾನು ಕೂಡ ಹೆಮ್ಮೆಯಿಂದ ಡಿ ಬಾಸ್ ಅಭಿಮಾನಿ ಎಂಬುದಾಗಿ ಹೇಳಿಕೊಂಡಿರುವಂತಹ ಸೋನು ಗೌಡ ಅವರಿಂದ ಲಾಭವನ್ನು ಪಡೆದುಕೊಂಡಿರುವಂತಹ ಯಾರು ಕೂಡ ಈ ಸಂದರ್ಭದಲ್ಲಿ ಅವರ ಪರವಾಗಿ ಮಾತನಾಡುತ್ತಿಲ್ಲ ಎನ್ನುವಂತಹ ಬೇಸರವನ್ನು ಕೂಡ ಹೊರಹಾಕಿದ್ದಾರೆ. ತಾನು ಕೂಡ ಯಾವುದೇ ತಪ್ಪಿಲ್ಲದಿದ್ದರೂ ಜೈಲಿಗೆ ಹೋಗಿ ಬಂದಿರುವಂತಹ ಉದಾಹರಣೆಯನ್ನೇ ಡಿ ಬಾಸ್ ರವರಿಗೆ ಕೂಡ ಉದಾಹರಣೆ ರೂಪದಲ್ಲಿ ನೀಡಿದ್ದಾರೆ ಸೋನು ಗೌಡ. ಹೀಗಾಗಿ ಏನೇ ಆಗಲಿ ದರ್ಶನ್ ರವರ ಪರವಾಗಿ ಕೊನೆವರೆಗೆ ನಿಲ್ಲುತ್ತೇನೆ ಹಾಗೂ ತಪ್ಪು ಯಾರದ್ದೆ ಆಗಿರಲಿ ಅವರಿಗೆ ಶಿಕ್ಷೆ ಸಿಗಲೇಬೇಕು ಅಂತಾನೂ ಕೂಡ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ಒಳ್ಳೆದಾಗಲಿ ಅನ್ನುವಂತಹ ಮಾತನ್ನು ಕೂಡ ಸೋನು ಗೌಡ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ.

ಕೊನೆದಾಗಿ ಈ ಪ್ರಕರಣದ ಬಗ್ಗೆ ಮಾತನಾಡಿರುವಂತಹ ಸೋನು ಗೌಡ ದರ್ಶನ್ ರವರಿಗೆ ಅವರ ಒಳ್ಳೆಯತನವೇ ಅವರನ್ನು ಕಾಪಾಡುತ್ತೆ ಅನ್ನುವಂತಹ ಮಾತನ್ನು ಹೇಳುವ ಮೂಲಕ ದರ್ಶನ್ ರವರ ಅಭಿಮಾನಿಗಳ ಮನಸ್ಸಿನ ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ ಅಂತ ಹೇಳಬಹುದಾಗಿದೆ. ಕೆಲವರು ದರ್ಶನ್ ರವರ ಮೇಲಿನ ಅಭಿಮಾನಕ್ಕಾಗಿ ಈ ರೀತಿ ಸೋನು ಗೌಡ ಮಾತನಾಡಿದ್ದಾರೆ ಅಂತ ಹೇಳಿದ್ರೆ ಇನ್ನು ಕೆಲವರು ಕೇವಲ ದರ್ಶನ್ ಅಭಿಮಾನಿಗಳ ಮನವೊಲಿಸುವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸೋನು ಗೌಡ ಮಾತ್ರ ನಾನು ಯಾವುದಕ್ಕೂ ಕೂಡ ಕೇರ್ ಮಾಡಲ್ಲ ಅನ್ನೋದಾಗಿ ಹೇಳಿಕೊಂಡಿದ್ದಾರೆ.

Comments are closed.