Lucky Zodiac Signs:ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಸಿಹಿ ಸುದ್ದಿ- ಈ 6 ರಾಶಿಗಳನ್ನು ತಡೆಯೋರು ಇಲ್ಲ. ಆಡಿದ್ದೇ ಆಟ, ಕೂತಲ್ಲೇ ದುಡ್ಡು

Lucky Zodiac Signs: ನಮ್ಮ ಸನಾತನ ಹಿಂದೂ ಶಾಸ್ತ್ರಗಳ ಪ್ರಕಾರ ಜೂನ್ 23 ರಿಂದ ಜುಲೈ 21 ರವರೆಗೆ ಇರುವಂತಹ ಆಷಾಡ ಮಾಸ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಇದೇ ತಿಂಗಳ ಏಕಾದಶಿಯಿಂದ ಭಗವಾನ್ ಮಹಾವಿಷ್ಣು ತನ್ನ ಯೋಗ ನಿದ್ರೆಗೆ ನಾಲ್ಕು ತಿಂಗಳುಗಳ ಕಾಲ ಜಾರಲಿದ್ದಾನೆ. ಇದನ್ನ ದೇವಷಣೆ ಏಕಾದಶಿ ಅಥವಾ ಆಶಾಡ ಏಕಾದಶಿ ಎಂಬುದಾಗಿ ಕರೆಯಲಾಗುತ್ತದೆ. ಇದರಿಂದಾಗಿ ಲಾಭವನ್ನು ಪಡೆದುಕೊಳ್ಳಲು ಇರುವಂತಹ ರಾಶಿಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಕನ್ಯಾ ರಾಶಿ

ಉದ್ಯೋಗಾಕಾಂಕ್ಷಿಗಳಿಗೆ ಕೈತುಂಬಾ ಸಂಬಳ ಸಿಗುವಂತಹ ದೊಡ್ಡ ಕೆಲಸದ ಆಫರ್ ಸಿಗಬಹುದು ಹಾಗೂ ಈ ಸಂದರ್ಭದಲ್ಲಿ ಆದಾಯದ ಹೆಚ್ಚಳದಿಂದಾಗಿ ಕನ್ಯಾ ರಾಶಿ ಅವರು ಪ್ರಾಪರ್ಟಿ ಹಾಗೂ ಹೊಸ ವಾಹನವನ್ನು ಖರೀದಿ ಮಾಡುವಂತಹ ಸಾಧ್ಯತೆ ಇದೆ. ವ್ಯಾಪಾರ ಮಾಡುವಂತಹ ವ್ಯಾಪಾರಿಗಳು ಕೂಡ ಈ ಸಂದರ್ಭದಲ್ಲಿ ಒಳ್ಳೆಯ ಲಾಭವನ್ನು ನಿರೀಕ್ಷಿಸಬಹುದಾಗಿದೆ.

ವೃಷಭ ರಾಶಿ

ವೃಷಭ ರಾಶಿ ಅವರು ತಮ್ಮ ಹದಗೆಟ್ಟಿರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಅವರಿಗೆ ಹೊಸ ಕೆಲಸ ಸಿಗಲಿದೆ ಹಾಗೂ ಅದರಿಂದ ಅವರು ಕೈತುಂಬ ಸಂಪಾದನೆ ಮಾಡಲಿದ್ದಾರೆ. ದೂರ ಪ್ರದೇಶಗಳಿಗೆ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗುವಂತಹ ಸಾಧ್ಯತೆ ಇದೆ ಹಾಗೂ ಹೊಸದಾಗಿ ಮದುವೆಯಾಗಿದ್ದು ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅದರಿಂದಲೂ ಕೂಡ ಮುಕ್ತಿ ಹೊಂದುವಂತಹ ಅವಕಾಶವಿದೆ.

ತುಲಾ ರಾಶಿ

ಅನಿರೀಕ್ಷಿತವಾಗಿ ತುಲಾ ರಾಶಿಯವರು ಕೈತುಂಬ ಹಣವನ್ನು ಸಂಪಾದನೆ ಮಾಡಲಿದ್ದಾರೆ ಹಾಗೂ ಅವರ ಆದಾಯದಲ್ಲಿ ಗಣನೀಯವಾದ ಹೆಚ್ಚಳ ಕಂಡು ಬರಲಿದೆ. ಮದುವೆ ಆಗದೆ ಇರುವಂತಹ ಜನರಿಗೆ ಸಂಬಂಧಗಳು ಹುಡುಕಿಕೊಂಡು ಬರುತ್ತವೆ ಹಾಗೂ ಕಂಕಣವಾಗಿ ಕೂಡ ಕೂಡಿ ಬಂದಿದೆ. ಆದಾಯದ ಹೆಚ್ಚಳದಿಂದಾಗಿ ಆಸ್ತಿಯನ್ನು ಖರೀದಿಸುವಂತಹ ಸಾಧ್ಯತೆ ಕೂಡ ಇದೆ. ಸಮಾಜದಲ್ಲಿ ನಿಮ್ಮ ಮೇಲೆ ಇರುವಂತಹ ಗೌರವ ಜನರಲ್ಲಿ ಹೆಚ್ಚಾಗಲಿದೆ.

ಸಿಂಹ ರಾಶಿ

ಹಳೆಯ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಲಿದೆ ಹಾಗೂ ನಿಮ್ಮ ದಾಂಪತ್ಯ ಜೀವನ ಸಾಕಷ್ಟು ಸಂತೋಷವಾಗಿ ಕಾಣಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮನ್ನ ಆಧ್ಯಾತ್ಮಿಕ ಹಾಗೂ ಧಾರ್ಮಿಕತೆಯ ಕಡೆಗೆ ಹೆಚ್ಚಾಗಿ ವಾಲಿಸಿಕೊಳ್ಳುತ್ತೀರಿ. ಕೈತುಂಬ ಹಣವನ್ನು ಸಂಪಾದನೆ ಮಾಡುವಂತಹ ಯೋಗವನ ಸಿಂಹ ರಾಶಿಯವರು ಪಡೆದುಕೊಳ್ಳಲಿದ್ದಾರೆ.

ಮಕರ ರಾಶಿ

ಈ ಸಂದರ್ಭದಲ್ಲಿ ಇರುವಂತಹ ಅದೃಷ್ಟದಿಂದಾಗಿ ಮಕರ ರಾಶಿಯವರು ಕೈತುಂಬ ಸಂಪಾದನೆ ಮಾಡುವಂತಹ ಅವಕಾಶವನ್ನು ಬೇರೆ ಬೇರೆ ಮೂಲಗಳಿಂದ ಪಡೆದುಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೆಲಸ ಹಾಗೂ ವ್ಯಾಪಾರ ಮಾಡುವಂತಹ ಎರಡು ವರ್ಗದ ಜನರಿಗೂ ಕೂಡ ಕೈ ತುಂಬಾ ಹಣವನ್ನು ಗಳಿಸುವಂತಹ ಲಾಭದ ಸಮಯ ಸಿದ್ಧವಾಗಿವೆ. ಜೀವನದಲ್ಲಿ ಸಂತೋಷ ತುಂಬಿ ತುಳುಕಾಡಲಿದೆ.

Comments are closed.