Puneet rajkumar: ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟುವುದು ಫಿಕ್ಸ್ ಆಯ್ತಾ? ಯಾರ ಹೊಟ್ಟೆಯಲ್ಲಿ ಹುಟ್ಟುತ್ತಾರಂತೆ ಗೊತ್ತೇ?

Puneet rajkumar: ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸದ್ದು ಮಾಡುತ್ತಿರುವಂತಹ ನಾಯಕ ನಟ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅದರ ಕಾರಣ ಏನು ಅಂತ ಕೂಡ ನಿಮಗೆಲ್ಲರಿಗೂ ತಿಳಿದಿದ್ದು ನಾವು ವಿಶೇಷವಾಗಿ ವಿವರಿಸಿ ಹೇಳಬೇಕಾಗಿರುವಂತಹ ಅಗತ್ಯವಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿ ಸಾಕಷ್ಟು ಸಮಯಗಳೇ ಕಳೆದಿದ್ದರೂ ಕೂಡ ಈಗ ಮತ್ತೆ ಅವರು ಸುದ್ದಿಯಲ್ಲಿ ಬಂದಿದ್ದಾರೆ. ಹೌದು ಅವರ ಪುನರ್ಜನ್ಮದ ವಿಚಾರದ ಬಗ್ಗೆ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಒಂದು ಸಂದರ್ಶನ ವೈರಲ್ ಆಗುತ್ತಿದೆ. ಬನ್ನಿ ನಿಮಗೆ ವಿಚಾರ ತಿಳಿದಿಲ್ಲ ಅಂತ ಅಂದ್ರೆ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ವೈರಲ್ ಆಗ್ತಿದೆ ಅಪ್ಪು ಪುನರ್ಜನ್ಮದ ವಿಚಾರ!

ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವಂತಹ ಪುನರ್ಜನ್ಮತಜ್ಞ ಆಗಿರುವಂತಹ ರಾಮಚಂದ್ರ ಗುರೂಜಿ ಅವರು ಇಂಟರ್ವ್ಯೂನಲ್ಲಿ ಮಾತನಾಡುತ್ತಾ ಈ ವಿಚಾರದ ಬಗ್ಗೆ ಹೇಳಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣ ನಂತರ ನಾನು ಅವರ ಆತ್ಮದ ಜೊತೆಗೆ ಮಾತನಾಡಿದೆ ಎಂಬುದಾಗಿ ಇತ್ತೀಚಿಗಷ್ಟೇ ನಡೆದಿರುವಂತಹ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆಗೆ ಮಾತನಾಡಿರುವಂತಹ ಸಂದರ್ಶನದ ವಿವರಗಳನ್ನು ಕೂಡ ಇಂಟರ್ವ್ಯೂನಲ್ಲಿ ನೀಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2021ರ ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಈ ಲೋಕದ ಯಾತ್ರೆಯನ್ನ ಮುಗಿಸಿ ಪರಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ದೈಹಿಕವಾಗಿ ಸದೃಢರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನೆಲ್ಲ ಬಿಟ್ಟು ಹೋಗುತ್ತಾರೆ ಅನ್ನೋದನ್ನ ಇವತ್ತಿಗೂ ಕೂಡ ನಂಬುವುದಕ್ಕೆ ಸಾಧ್ಯವಾಗ್ತಿಲ್ಲ. ಇದೇ ಕಾರಣಕ್ಕಾಗಿ ಗುರೂಜಿಯವರು ಅಪ್ಪು ಅವರ ಆತ್ಮದ ಜೊತೆಗೆ ಮಾತನಾಡುವಾಗ ನಿಮ್ಮ ಮರಣದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ ಅದು ನಿಜಾನೆ ಎನ್ನುವುದಾಗಿ ಪ್ರಶ್ನೆ ಕೇಳಿದಾಗ ಇಲ್ಲ ನಾನು ಸಹಜವಾಗಿ ಹೃದಯ ಸಂಬಂಧ ಪಟ್ಟಂತಹ ಸಮಸ್ಯೆಯಿಂದ ಮರಣ ಹೊಂದಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಅಪ್ಪು ಅವರ ಪುನರ್ಜನ್ಮದ ರಹಸ್ಯ ಹೊರಬಂತು ನೋಡಿ!

ದೇಹದಿಂದ ಹೊರ ಹೋದ ನಂತರ ಈಗ ಎಲ್ಲಿದ್ದೀರಿ ಎಂಬುದಾಗಿ ಕೇಳಿರುವ ಪ್ರಶ್ನೆಗೆ ಅಪ್ಪ ಅಮ್ಮನನ್ನ ಹುಡುಕ್ತಾ ಇದ್ದೇನೆ ಅನ್ನೋದಾಗಿ ಪುನೀತ್ ರಾಜಕುಮಾರ್ ರವರು ಹೇಳಿಕೊಂಡಿದ್ರಂತೆ. ಇದು ಮರಣ ಹೊಂದಿದ ಸಂದರ್ಭದಲ್ಲಿ ಮಾಡಿರುವಂತಹ ಸಂಭಾಷಣೆಯಾಗಿತ್ತು ಅನ್ನೋದನ್ನ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗುತ್ತದೆ. ಕೊನೆದಾಗಿ ಗುರೂಜಿಯವರು ಅಪ್ಪು ಅವರಿಗೆ ಪುನರ್ಜನ್ಮದ ಬಗ್ಗೆ ಕೇಳಿದಾಗ ಸದ್ಯಕ್ಕೆ ಆ ಯೋಚನೆ ಇಲ್ಲ ಹುಟ್ಟಿದರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುತ್ತೇನೆ ಎಂಬುದಾಗಿ ಹೇಳುವ ಮೂಲಕ ತಮ್ಮ ಪುನರ್ಜನ್ಮದ ರಹಸ್ಯವನ್ನು ಹೇಳಿಕೊಂಡಿದ್ರಂತೆ.

Comments are closed.