Ration card: ರೇಷನ್ ಕಾರ್ಡ್ ಬಳಕೆದಾರಿರಗೆ ಶಾಕ್ ಕೊಟ್ಟ ಸಿದ್ದು ಸರ್ಕಾರ – ಇಂತವರ ಕಾರ್ಡ್ ಮುಂದಿನ ತಿಂಗಳು ಕ್ಯಾನ್ಸಲ್;ಯಾರದ್ದು ಗೊತ್ತೇ?

Ration card: ಸರ್ಕಾರ ತನ ಯೋಜನೆಗಳನ್ನು ಹಾಗೂ ಉಚಿತ ಪಡಿತರವನ್ನು ಜನರಿಗೆ ತಲುಪಿಸುವುದಕ್ಕಾಗಿ ರೇಷನ್ ಕಾರ್ಡ್ ಅನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತದೆ. ಇನ್ನು ರೇಷನ್ ಕಾರ್ಡ್ ನಲ್ಲಿ ಕೂಡ ನೀವು ಗಮನಿಸಿರಬಹುದು ಜನರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಅದನ್ನು ಕೂಡ ವಿಂಗಡಿಸಲಾಗುತ್ತದೆ. ಬಡತನದ ರೇಖೆಗಿಂತ ಮೇಲೆ ಇರುವವರಿಗೆ ಎಪಿಎಲ್ ಕಾರ್ಡ್ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಒದಗಿಸುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಕೂಡ ಜನರು ಅದರಲ್ಲಿ ವಿಶೇಷವಾಗಿ ಹೇಳ್ತಿರೋದು ಆರ್ಥಿಕವಾಗಿ ಹಿಂದುಳಿದಿರುವಂತಹ ಜನರು ಸಾಕಷ್ಟು ಲಾಭಗಳನ್ನು ಸರ್ಕಾರದಿಂದ ಪಡೆದುಕೊಳ್ಳಲಿದ್ದಾರೆ. ಆದರೆ ಒಂದು ವೇಳೆ ನೀವು ಸೆಪ್ಟೆಂಬರ್ 30ನೇ ತಾರೀಖಿನ ಒಳಗೆ ಈ ಕೆಲಸವನ್ನು ಮಾಡದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ಹಾಗಿದ್ರೆ ಬನ್ನಿ ಆ ಪ್ರಕ್ರಿಯೆ ಏನು ಅನ್ನೋದನ್ನ ತಿಳಿಯೋಣ.

ಈ ಕೆಲಸ ಮಾಡದೆ ಇದ್ರೆ ನಿಮ್ಮ ರೇಷನ್ ಕಾರ್ಡ್ ಆಗುತ್ತೆ ಕ್ಯಾನ್ಸಲ್!

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆಹಾರ ಇಲಾಖೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಸೇರಿದಂತೆ ಪ್ರತಿಯೊಂದು ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಹ ಆಗಿರುವಂತಹ ಸೌಲಭ್ಯಗಳನ್ನ ಒದಗಿಸುವಂತಹ ಕೆಲಸವನ್ನು ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಇಲ್ಲಿ ಬಿಪಿಎಲ್ ರೇಷನ್ ಕಾರ್ಡ್ ವಿಚಾರಕ್ಕೆ ಬರೋದಾದ್ರೆ ಇದಕ್ಕೆ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡ್ತಾರೆ. ಈ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಆರ್ಥಿಕವಾಗಿ ಹಿಂದುಳಿಯದೇ ಇದ್ದರೂ ಕೂಡ ನಕಲಿ ದಾಖಲೆ ಪತ್ರಗಳನ್ನು ನೀಡಿ ಈ ರೀತಿಯ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಂಡಿರುವಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊರಬಂದಿದೆ. ಇದನ್ನು ಮೀರಿ ಮತ್ತೊಂದು ವಿಚಾರ ಏನು ಅಂತ ಅಂದ್ರೆ ಒಂದೇ ಕುಟುಂಬದಲ್ಲಿ ಇರುವಂತಹ ಬೇರೆ ಬೇರೆ ಕುಟುಂಬದ ಸದಸ್ಯರು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿವೆ. ಈ ಪ್ರಕರಣದ ಅಡಿಯಲ್ಲಿಯೇ ಈಗ ರೇಷನ್ ಕಾರ್ಡ್ ಬಗ್ಗೆ ಅಧಿಕಾರಿಗಳು ಹೊಸ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ.

ಈ ರೀತಿಯ ಹಗರಣವನ್ನು ತಡೆಯುವ ಕಾರಣಕ್ಕಾಗಿಯೇ 2024ರ ಸೆಪ್ಟೆಂಬರ್ 30ರ ಒಳಗೆ ರೇಷನ್ ಕಾರ್ಡ್ ಅನ್ನು ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಈಗ ಜಾರಿಗೆ ತರಲಾಗಿದೆ.

ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್!

  • ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆದ ನಂತರ ಅಲ್ಲಿ ಕೆವೈಸಿ ಆಪ್ಷನ್ ಅನ್ನು ನೀವು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಅಲ್ಲಿ ಕೇಳಿದಾಗ ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಬೇಕಾಗುತ್ತದೆ. ಇದಾದ ನಂತರ ಓಟಿಪಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಇದಾದ ಮೇಲೆ ನೀವು ಸರಿಯಾದ ರೀತಿಯಲ್ಲಿ ಪ್ರಕ್ರಿಯೆಯನ್ನು ಪಾಲಿಸಿದ್ದೀರಿ ಅನ್ನುವಂತಹ ನೋಟಿಫಿಕೇಶನ್ ನಿಮ್ಮ ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಗೆ ಬರಲಿದೆ.

Comments are closed.