Varthur Santhosh:ಬಿಗ್ ಬಾಸ್ ಖ್ಯಾತ ಸಂತೋಷ್ ರವರಿಗೆ ಮತ್ತೊಂದು ಶಾಕ್- ಒಳ್ಳೆಯದು ಮಾಡುತ್ತಿದ್ದರೂ ಯಾಕೆ ಹೀಗೆ? ಅಸಲಿ ಕಾರಣವೇನು ಗೊತ್ತೇ??

Varthur Santhosh: ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ರವರ ಬಗ್ಗೆ ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಈಗ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಅಂತ ಹೇಳಬಹುದಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗೆ ಕೂಡ ಅವರು ಹುಲಿಯ ಉಗುರಿನ ಪೆಂಡೆಂಟ್ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಾದ ನಂತರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಇವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಆದರೆ ಈಗ ಮತ್ತೊಮ್ಮೆ ಅದೇ ರೀತಿಯ ಕಾನೂನು ಪ್ರಕರಣದ ವಿಚಾರದಲ್ಲಿ ವರ್ತೂರು ಸಂತೋಷ್ ರವರು ಸುದ್ದಿ ಆಗ್ತಿದ್ದಾರೆ ಅದೇನು ಎನ್ನುವುದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಮತ್ತೊಂದು ಪ್ರಕರಣದಲ್ಲಿ ವರ್ತೂರು ಸಂತೋಷ್ ರವರ ಹೆಸರು!

ವರ್ತೂರು ಪೊಲೀಸ್ ಸ್ಟೇಷನ್ ನಲ್ಲಿ ಈಗಾಗಲೇ ಒಂದು ಸುತ್ತಿನ ವಿಚಾರಣೆಯನ್ನು ವರ್ತೂರು ಸಂತೋಷ್ ರವರು ಎದುರಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕೆ ಇರುವಂತಹ ಕಾರಣ ಪ್ರಾಣಿಗಳ ಸಾಗಾಣಿಕೆಯ ವಿಚಾರದಲ್ಲಿ ನಿಯಮಗಳನ್ನ ಮೀರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಳ್ಳಿ ಕಾರ್ ರೇಸ್ ಪ್ರಾರಂಭ ಆಗುತ್ತಿರುವಂತಹ ಬೆನ್ನಲ್ಲಿ ವರ್ತೂರು ಸಂತೋಷ್ ರವರು ಒಂದು ಟ್ರಕ್ ನಲ್ಲಿ 9 ಹೋರಿಗಳನ್ನು ಸಾಗಿಸಿದ್ದರು ಎಂಬುದಾಗಿ ತಿಳಿದು ಬಂದಿದ್ದು ಇದು ನಿಯಮಗಳ ಪ್ರಕಾರ ಅಪರಾಧದ ಪರಿಧಿಯಲ್ಲಿ ಕಾಣಿಸಿಕೊಳ್ಳುವಂತಹ ಕೆಲಸವಾಗಿದೆ. ಇದೇ ಕಾರಣಕ್ಕಾಗಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂಬಂತಹ ಮಾಹಿತಿ ಇದೆ.

ಪ್ರಾಣಿಗಳ ವಿಚಾರದಲ್ಲಿ ಇದು ನಿಯಮಗಳನ್ನು ಮೀರಿರುವಂತಹ ಕೆಲಸ ಅನ್ನೋದಾಗಿ ಪ್ರಾಣಿಗಳ ಹಿತಾಸಕ್ತಿಯ ಇಲಾಖೆಯ ಅಧಿಕಾರಿ ಆಗಿರುವಂತಹ ಹರೀಶ್ ರವರು ವರ್ತೂರು ಸಂತೋಷ್ ರವರ ವಿರುದ್ಧ ಈ ವಿಚಾರದಲ್ಲಿ ದೂರು ನೀಡಿದ್ದರು ಎಂಬುದಾಗಿ ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಪೊಲೀಸರು ವರ್ತೂರು ಸಂತೋಷ್ ರವರನ್ನ ವಿಚಾರಣೆಗೆ ಕರೆದಿದ್ದು, ವರ್ತೂರು ಸಂತೋಷ್ ರವರು ಕೂಡ ವಿಚಾರಣೆಗೆ ಹಾಜರಾಗಿ ಈ ಘಟನೆಯ ಬಗ್ಗೆ ಪೊಲೀಸರು ಕೇಳಿರುವಂತಹ ಮಾಹಿತಿಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ ಆದರೆ ದೂರು ನೀಡಿರುವಂತಹ ಹರೀಶ್ ಅವರು ಕೇವಲ ಎನ್ ಸಿ ಆರ್ ಮಾಡೋದು ಬೇಡ ಎಫ್ಐಆರ್ ದಾಖಲಿಸಿ ಕೋರ್ಟಿಗೆ ಈ ಪ್ರಕರಣವನ್ನು ತರಬೇಕು ಎಂಬುದಾಗಿ ಬೇಡಿಕೆ ಇಟ್ಟಿದ್ದಾರೆ.

ಪ್ರಾಣಿಗಳ ವಿಚಾರದಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿರುವಂತಹ ವರ್ತೂರು ಸಂತೋಷ್ ರವರ ಅಪರಾಧ ಸಾಬೀದಾದರೆ ಅವರು ಕಾನೂನು ಅಡಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಕಷ್ಟವನ್ನು ಎದುರಿಸಬೇಕಾಗಿ ಬರಬಹುದೇ ಎನ್ನುವುದಾಗಿ ಕೂಡ ಕೆಲವೊಂದು ಮೂಲಗಳು ತಿಳಿಸುತ್ತಿವೆ. ಈ ರೀತಿ ಹಳ್ಳಿಕಾರ್ ರೇಸ್ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ವರ್ತೂರು ಸಂತೋಷ್ ಅವರು ಒಂದಲ್ಲ ಒಂದು ವಿವಾ-ದಗಳಲ್ಲಿ ಕಂಡುಬರುತ್ತಿದ್ದಾರೆ.

Comments are closed.