Cricket News: ಗೌತಮ್ ಗಂಭೀರ್ ಟೀಮ್ ಇಂಡಿಯಾದ ಒಳಗೆ ಬಂದರೆ ಹೊರಗೆ ಹೋಗ್ತಾರೆ ಈ ಐದು ಆಟಗಾರರು?

Cricket News: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗುವ ಮೂಲಕ ಈ ಬಾರಿಯ ಐಪಿಎಲ್ ಚಾಂಪಿಯನ್ ತಂಡ ಆಗೋದಕ್ಕೆ ಗೌತಮ್ ಗಂಭೀರ್ ರವರು ಪ್ರಮುಖವಾದ ಕಾರಣವಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿ ರಾಹುಲ್ ದ್ರಾವಿಡ್ ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕೋಚ್ ಅವರೇ ಆಗ್ತಾರೆ ಅನ್ನೋದಾಗಿ ಎಲ್ಲಾ ಕಡೆ ಸುದ್ದಿ ಕೇಳಿ ಬರ್ತಾ ಇದೆ. ಸದ್ಯದ ಮಟ್ಟಿಗೆ ಅವರು ಕೋಚ್ ಆದರೆ 2025 ರಲ್ಲಿ ಕಂಡುಬರುವಂತಹ ಮೊದಲ ಐಸಿಸಿ ಟೂರ್ನಮೆಂಟ್ ಆಗಿರುವಂತಹ ಚಾಂಪಿಯನ್ಸ್ ಟ್ರೋಫಿ ಅವರಿಗೆ ಪ್ರಮುಖವಾದ ಟಾರ್ಗೆಟ್ ಆಗಿರಲಿದೆ. ಪ್ರತಿಯೊಂದು ಹಂತದಲ್ಲೂ ಕೂಡ ತಂಡದಿಂದ ಉತ್ತಮ ಪರ್ಫಾರ್ಮೆನ್ಸ್ ಹೊರತೆಗೆಯುವಂತಹ ಒತ್ತಡ ಗೌತಮ್ ಗಂಭೀರ್ ಅವರ ಮೇಲೆ ಇರುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಗೌತಮ ಗಂಭೀರ್ ಅವರು ಕೋಚ್ ಆಗಿ ತಂಡದ ಒಳಗೆ ಬಂದರೆ ಈ ಸಂದರ್ಭದಲ್ಲಿ ಆಟಗಾರರಾಗಿ ಈ ಐದು ಆಟಗಾರರು ಹೊರಹೋಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಐದು ಆಟಗಾರರು ಹೊರ ಹೋಗಬಹುದು!

  • ಮೊದಲನೇದಾಗಿ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಆಗಿರುವಂತಹ ರೋಹಿತ್ ಶರ್ಮ ಅವರಿಗೆ ಈಗಾಗಲೇ 37 ವರ್ಷ ವಯಸ್ಸಾಗಿದೆ ಆದರೂ ಕೂಡ ಅವರು 2025ರ ಚಾಂಪಿಯನ್ ಟ್ರೋಫಿಯ ವರೆಗೆ ತಂಡದ ನಾಯಕನಾಗಿ ಮುಂದುವರೆಯುವಂತಹ ಸಾಧ್ಯತೆ ಇದೆ. ಆದರೆ ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಅವರು ಇನ್ಮುಂದೆ ಆಡೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ಹೆಚ್ಚೆಂದರೆ ಏಕದಿನ ಕ್ರಿಕೆಟ್ ನಲ್ಲಿ 2025ರ ವರೆಗೆ ರೋಹಿತ್ ಶರ್ಮ ಮುಂದುವರೆಯಬಹುದು ಆದರೆ ಟಿ ಟ್ವೆಂಟಿಯಲ್ಲಿ ಗಂಭೀರ್ ಬಂದ ತಕ್ಷಣ ನಿವೃತ್ತಿ ಪಡೆದುಕೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ.
  • ಇನ್ನು ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡುವುದಾದರೆ ಏಕದಿನ ಕ್ರಿಕೆಟ್ನಲ್ಲಿ ಅವರ ಬಗ್ಗೆ ಮಾತನಾಡುವ ಅಂತಹ ಅಧಿಕಾರ ಯಾರಿಗೂ ಇಲ್ಲ ಆದರೆ ಟಿ ಟ್ವೆಂಟಿ ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ ಮಾತ್ರ ಸಾಕಷ್ಟು ಮಂಕಾಗಿ ಕಾಣಿಸಿಕೊಳ್ಳುತ್ತಾರೆ ಅದರಲ್ಲೂ ವಿಶೇಷವಾಗಿ ಈ ಬಾರಿಯ t20 ವಿಶ್ವಕಪ್ ನಲ್ಲಿ ಅವರ ಪರ್ಫಾರ್ಮೆನ್ಸ್ ನೋಡಿದ್ರೆ ನಿಜಕ್ಕೂ ಕೂಡ ಅವರೇನಾ ಕಿಂಗ್ ಕೊಹ್ಲಿ ಅನ್ನೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.
  • ಸದ್ಯಕ್ಕೆ ಯುವ ಆಟಗಾರರಿಂದ ಆಲ್ರೌಂಡರ್ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇದ್ದು ರವೀಂದ್ರ ಜಡೇಜಾ ಅವರು ಕೂಡ ನಿಗದಿತ ಓವರ್ ಗಳ ಫಾರ್ಮೆಟ್ ನಿಂದ ಹೊರಹೋಗಿ ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗುವಂತಹ ಸಾಧ್ಯತೆ ಗೌತಮ್ ಗಂಭೀರ್ ಅವರು ತಂಡಕ್ಕೆ ಒಳಕ್ಕೆ ಬಂದರೆ ಇದೆ ಅನ್ನೊದಾಗಿ ಹೇಳಬಹುದಾಗಿದೆ.
  • ಶಮಿ ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ದೀರ್ಘಕಾಲದ ವರೆಗೆ ತಂಡದ ಸೇವೆಗೆ ಅವರು ಸಿಗುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದ್ದು ಗೌತಮ್ ಗಂಭೀರ ಅವರು ಕೋಚ್ ಆಗಿ ಬಂದ್ರೆ ಶಮಿ ಅವರಿಗೂ ಕೂಡ ಗೇಟ್ ಪಾಸ್ ಸಿಗೋದು ಬಹುತೇಕ ಖಚಿತ ಎಂದು ಹೇಳಬಹುದು.
  • ಮೊಹಮ್ಮದ್ ಸಿರಾಜ್ ಭಾರತೀಯ ಕ್ರಿಕೆಟ್ ತಂಡದ ಸಾಕಷ್ಟು ಅನುಭವಿ ಬೌಲರ್ಗಳ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿರುವಂತಹ ಅತ್ಯುತ್ತಮ ಬೌಲರ್ ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಗೆ ತಂಡ ಬೇರೇನೇ ಬೇಕು ಅನ್ನೋ ಬೇಡಿಕೆಯನ್ನು ಗೌತಮ್ ಗಂಭೀರ್ ಸಲ್ಲಿಸಿದ್ದಾರಂತೆ. ಹೀಗಾಗಿ ಸಿರಾಜ್ ಅವರನ್ನು ಕೇವಲ ಟೆಸ್ಟ್ ಪಂದ್ಯಕ್ಕೆ ಮಾತ್ರ ಆಯ್ಕೆ ಮಾಡುವಂತ ಸಾಧ್ಯತೆ ಹೆಚ್ಚಾಗಿದೆ.

Comments are closed.