Darshan Case: ದರ್ಶನ್ ಗೆ ಮತ್ತೊಂದು ಶಾಕ್ ಕೊಟ್ಟ ಖಡಕ್ ಪೊಲೀಸರು- ಈ ಬಾರಿ ನೇರವಾಗಿ ಡೆಲ್ಲಿಗೆ ಚೆಂಡು; ದರ್ಶನ್ ತಪ್ಪಿಸಿಕೊಳ್ಳೋಕೆ ಆಗಲ್ವ?

Darshan Case: ರೇಣುಕಾ ಸ್ವಾಮಿ ಪ್ರಕರಣ ಯಾವ ರೀತಿಯಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿದೆ ಅನ್ನೋದನ್ನ ವಿಶೇಷವಾಗಿ ನಿಮಗೆ ಹೇಳಬೇಕಾದ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ರೇಣುಕಾ ಸ್ವಾಮಿಯ ಮೊಬೈಲ್ ಅನ್ನು ದರ್ಶನ್ ಅಂಡ್ ಟೀಮ್ ನಾಶ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದ ಇನ್ನಷ್ಟು ಸಾಕ್ಷಾಧಾರಗಳನ್ನು ಪಡೆದುಕೊಳ್ಳುವುದಕ್ಕೆ ಪೊಲೀಸರು ಬೇರೆ ಬೇರೆ ಸಂಸ್ಥೆಗಳ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಪ್ರಕರಣದಲ್ಲಿ ಈಗಾಗಲೇ 160ಕ್ಕೂ ಹೆಚ್ಚಿನ ಸಾಕ್ಷಿಗಳು ಸಿಕ್ಕಿವೆ ಎಂಬುದಾಗಿ ತಿಳಿದು ಬಂದಿದೆ.

ಇಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ರೇಣುಕಸ್ವಾಮಿ ಪವಿತ್ರ ಗೌಡ ಅವರಿಗೆ ಕೆಟ್ಟ ಮೆಸೇಜ್ ಕಳಿಸಿದ್ದ ಎನ್ನುವ ಕಾರಣಕ್ಕಾಗಿಯೇ ಪ್ರಕರಣ ಪ್ರಾರಂಭವಾಗಿದ್ದು ಹೀಗಾಗಿ ಅದನ್ನ ತಿಳಿದುಕೊಳ್ಳುವುದು ಪ್ರಮುಖವಾಗಿದ್ದು ಇದೇ ಕಾರಣಕ್ಕಾಗಿ ಈ ಡೇಟಾ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಪೊಲೀಸರು ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಇದೇ ಕಾರಣಕ್ಕಾಗಿ ಪೊಲೀಸರು ಇನ್ಸ್ಟಾಗ್ರಾಮ್ ಸಂಸ್ಥೆಗೆ ಪತ್ರವನ್ನು ಬರೆದಿದ್ದು ಆ ಮೆಸೇಜ್ ಏನಾಗಿತ್ತು ಅನ್ನೋದನ್ನ ತಿಳಿದುಕೊಳ್ಳುವಂತಹ ಮಾಹಿತಿಯನ್ನು ನೀಡುವಂತೆ ಕೋರಿಕೊಳ್ಳಲಾಗಿದೆ. ಆದರೆ ಈ ಕೊ-ಲೆ ಪ್ರಕರಣದ ನಡುವೆ ಈಗ ಮತ್ತೊಂದು ಕುಣಿಕೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುತ್ತಿಗೆಗೆ ಬಿಗಿ ಆಗುವಂತಹ ಸಾಧ್ಯತೆ ಇದೆ.

ಇನ್ಕಮ್ ಟ್ಯಾಕ್ಸ್ ನಿಂದಲೂ ಕೂಡ ದರ್ಶನ್ ರವರಿಗೆ ಚಾರ್ಜ್ ಬೀಳುತ್ತಾ?

ಕಾನೂನು ನಿಯಮಗಳ ಪ್ರಕಾರ ಯಾವುದೇ ಪ್ರಕರಣದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಕಂಡುಬಂದಲ್ಲಿ ಅದನ್ನ ನೇರವಾಗಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗೆ ತಿಳಿಸಬೇಕಾಗಿರುತ್ತದೆ ಅನ್ನುವಂತಹ ನಿಯಮ ಇದೆ. ಈ ಪ್ರಕರಣವನ್ನು ಮುಚ್ಚಿ ಹಾಕಬೇಕು ಎನ್ನುವ ಕಾರಣಕ್ಕಾಗಿ ಕೆಲವು ಹುಡುಗರನ್ನು ಸರೆಂಡರ್ ಮಾಡಲು ಹೇಳಲಾಗಿದ್ದು ಅದಕ್ಕೆ 30 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ದರ್ಶನ್ ರವರ ಮನೆಯಲ್ಲಿ ಕೂಡ ಜಪ್ತಿ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂದರ್ಭದಲ್ಲಿ ದರ್ಶನ್ ರವರು ವಿಜಯಲಕ್ಷ್ಮಿ ಅವರಿಗೂ ಕೂಡ 3 ಲಕ್ಷ ರೂಪಾಯಿ ಹಣವನ್ನು ಸಹಾಯಕರ ಮೂಲಕ ಹೇಳಿ ಕಳಿಸಿದ್ರಂತೆ ಅದನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಇಲಾಖೆಯ ರೈಡ್ ಕೂಡ ಮುಂದಿನ ದಿನಗಳಲ್ಲಿ ದರ್ಶನ್ ರವರ ಮನೆ ಮೇಲೆ ಆದರೆ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.

ಕೇವಲ ರಾಜ್ಯದ ಇಲಾಖೆಯ ತನಿಖೆಯನ್ನು ಎದುರಿಸುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮುಂದಿನ ದಿನಗಳಲ್ಲಿ ದೆಹಲಿಯ ಇನ್ಕಮ್ ಟ್ಯಾಕ್ಸ್ ಇಲಾಖೆಯ ಆತಿಥ್ಯವನ್ನು ಸ್ವೀಕರಿಸಬಹುದಾದಂತಹ ಸಾಧ್ಯತೆ ಕೂಡ ಇದೆ ಎನ್ನುವುದಾಗಿ ಎಲ್ಲಾ ಕಡೆ ಸುದ್ದಿ ಕೇಳಿ ಬರುತ್ತಿದೆ. ಒಂದು ಪ್ರಕರಣದಿಂದ ಪ್ರಾರಂಭವಾದಂತಹ ಈ ತನಿಖೆ ಈಗ ಬೇರೆ ಬೇರೆ ಹಂತವನ್ನು ತಲುಪುತ್ತಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಾರ್ಕಿಕ ಅಂತ್ಯ ಕಂಡು ಬರಲಿದೆ ಎನ್ನುವುದೇ ಪ್ರತಿಯೊಬ್ಬರಿಗೂ ಕೂಡ ಕುತೂಹಲದಿಂದ ಕಾಯುತ್ತಿರುವ ವಿಚಾರವಾಗಿದೆ.

Comments are closed.