Darshan case: ಕೊನೆಗೂ ದರ್ಶನ್ ಸಿಕ್ತು ನಟಿಯ ಬೆಂಬಲ, ಅದ್ಬುತ ರೀತಿಯಲ್ಲಿ ಹೇಮಲತಾ ರವರು ಹೇಳಿದ್ದೇನು ಗೊತ್ತೇ??

darshan case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರಕರಣ ಈಗ ಇಡೀ ದೇಶದ ಗಮನವನ್ನು ಸೆಳೆದಿದ್ದು ಪ್ರತಿಯೊಂದು ಭಾಷೆಯ ಪ್ರೇಕ್ಷಕರು ಕೂಡ ತಮ್ಮ ಪರ ವಿರೋಧವಾದಗಳನ್ನು ಈ ವಿಚಾರದಲ್ಲಿ ಮಂಡಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಅದೇನೇ ಇರಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತ್ರ ಈ ವಿಚಾರದಲ್ಲಿ ಈಗ ಜೈಲುವಾಸವನ್ನ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಂಗಡಿಗರು ಜುಲೈ 4ರ ವರೆಗೆ ನ್ಯಾಯಾಂಗ ಬಂದನವನ್ನ ಎದುರಿಸಬೇಕಾಗಿರುವಂತಹ ಅಗತ್ಯತೆ ಇದೆ. ಇನ್ನು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರು ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಈ ಪ್ರಕರಣದ ಬಗ್ಗೆ ರೇಣುಕಾ ಸ್ವಾಮಿ ಹಾಗೂ ದರ್ಶನ್ ಅವರಿಗೆ ತಮ್ಮ ಬೆಂಬಲವನ್ನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವಂತಹ ಭಾವನ ರಾಮಣ್ಣ ಅವರು ಈ ವಿಚಾರದ ಬಗ್ಗೆ ದರ್ಶನ್ ರವರಿಗೆ ಇತ್ತೀಚಿನ ದಿನಗಳಲ್ಲಿ ಬೆಂಬಲ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದರ ನಡುವೆ ಮತ್ತೊಬ್ರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ಅವರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ದರ್ಶನ್ ರವರಿಗೆ ಸಪೋರ್ಟ್ ಮಾಡಿದ ವಿಜೆ ಹೇಮಲತಾ!

ತಮ್ಮ instagram ಖಾತೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತಾ ಹೇಮಲತಾ ಅವರು ರೇಣುಕಾ ಸ್ವಾಮಿ ಅವರನ್ನು ನೀವು ಈ ಪ್ರಕರಣದಲ್ಲಿ ಹೀರೋ ಮಾಡುವುದಕ್ಕೆ ಹೋಗಬೇಡಿ ಅನ್ನೋದಾಗಿ ಮಾತನಾಡಿದ್ದಾರೆ. ಸಾವಿರ ಜನ ಸಾವಿರ ಮಾತನಾಡಲಿ ದರ್ಶನ್ ರವರ ಮೇಲಿನ ಗೌರವ ಕಡಿಮೆಯಾಗುವುದಿಲ್ಲ ಅನ್ನುವ ರೀತಿಯಲ್ಲಿ ಕೂಡ ಈ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಕಾನೂನಿನ ಮುಖಾಂತರ ಈ ಪ್ರಕರಣಕ್ಕೆ ಅಂತ್ಯವನ್ನು ಹಾಡಿ ಕಳಂಕವನ್ನು ತೊಳೆದುಕೊಂಡು ಹೊರಬನ್ನಿ ಎನ್ನುವುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಹೇಮಲತಾ ಬೆಂಬಲ ಸೂಚಿಸುವ ರೀತಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಈ ಪೋಸ್ಟ್ ನಲ್ಲಿ ಹೇಮಲತಾ ಅವರು ರೇಣುಕಾ ಸ್ವಾಮಿ ಅವರನ್ನ ಹೀರೋ ಅಂತ ಬಿಂಬಿಸುವುದನ್ನು ನಿಲ್ಲಿಸಿ ಅನ್ನೋದಾಗಿ ಹೇಳುತ್ತಾ ದರ್ಶನ್ ರವರನ್ನು ನೇರವಾಗಿಯೇ ಈ ಪ್ರಕರಣದಲ್ಲಿ ಬೆಂಬಲಿಸುತ್ತೇನೆ ಎಂಬ ರೀತಿಯಲ್ಲಿ ಬರೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಜುಲೈ 4ಕ್ಕೆ ಈ ಪ್ರಕರಣದಲ್ಲಿ ಏನಾದರೂ ಒಂದು ಸಕಾರಾತ್ಮಕ ಬೆಳವಣಿಗೆ ಅಥವಾ ತಾರ್ಕಿಕ ಅಂತ್ಯವನ್ನು ಕಾಣುವಂತಹ ಬೆಳವಣಿಗೆಗಳು ಕಂಡು ಬರಬಹುದು ಎನ್ನುವುದಾಗಿ ಇಡೀ ಕರ್ನಾಟಕ ರಾಜ್ಯವೇ ಈ ಪ್ರಕರಣದ ಕಡೆಗೆ ತನ್ನ ನೋಟವನ್ನು ನೆಟ್ಟಿದೆ ಎಂದು ಹೇಳಬಹುದಾಗಿದೆ. ಆದರೆ ಈ ಪ್ರಕರಣದಿಂದಾಗಿ ಕನ್ನಡ ಚಿತ್ರರಂಗ ಸ್ವಲ್ಪಮಟ್ಟಿಗೆ ಕುಗ್ಗಿ ಹೋಗಿರುವುದಂತೂ ಸುಳ್ಳಲ್ಲ. ಕನ್ನಡ ಚಿತ್ರರಂಗದ ಒಬ್ಬ ಟಾಪ್ ನಾಯಕ ನಟನಾಗಿ ದರ್ಶನ್ ರವರು ಈ ರೀತಿಯ ಸಮಸ್ಯೆಗಳಲ್ಲಿ ಎಲ್ಲಾ ಕಡೆ ಸುದ್ದಿ ಆಗ್ತಾರೆ ಅಂದ್ರೆ ನಿಜಕ್ಕೂ ಕೂಡ ಚಿತ್ರರಂಗ ತಲೆತಗ್ಗಿಸುವ ವಿಚಾರ ಎಂದು ಹೇಳಬಹುದಾಗಿದೆ.

Comments are closed.