Shani:ಶನಿವಕ್ರಿಯಿಂದಾಗಿ ಕೈತುಂಬ ಹಣವನ್ನು ಸಂಪಾದನೆ ಮಾಡಲಿದ್ದಾರೆ ಈ ಜನ್ಮ ರಾಶಿಗಳು!

Shani: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮದಾತ ಆಗಿರುವಂತಹ ಶನಿ ಗ್ರಹ ಜೂನ್ 30 ರಿಂದ ಕುಂಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆಯನ್ನು ಪ್ರಾರಂಭಿಸಲಿದ್ದಾನೆ ಹಾಗೂ ನವೆಂಬರ್ 15ರವರೆಗೆ ಕೂಡ ಇದೇ ರೀತಿಯಲ್ಲಿ ಚಲನೆಯಲ್ಲಿ ಇರುತ್ತಾನೆ. ಇದರಿಂದಾಗಿ ಕೆಲವು ನಿರ್ದಿಷ್ಟವಾಗಿ ಲಾಭ ಉಂಟಾಗಲಿದ್ದು ಯಾರು ಅನ್ನೋದನ್ನು ತಿಳಿದುಕೊಳ್ಳೋಣ ಬನ್ನಿ.

ಧನು ರಾಶಿ

ಉದ್ಯೋಗದಲ್ಲಿರುವಂತಹ ಧನುರಾಶಿಯವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳವನ್ನು ಕೂಡ ಈ ಸಂದರ್ಭದಲ್ಲಿ ಕಾಣಲಿದ್ದಾರೆ. ಜೀವನದಲ್ಲಿ ಧನು ರಾಶಿಯವರು ಸಾಕಷ್ಟು ಅನಿರೀಕ್ಷಿತ ಸಕಾರಾತ್ಮಕ ಬದಲಾವಣೆಗಳನ್ನು ಕಾಣಲಿದ್ದಾರೆ. ದಾಂಪತ್ಯ ಜೀವನ ನಡೆಸುತ್ತಿರುವವರಿಗೆ ಯಾವುದೇ ಸಮಸ್ಯೆಗಳಲ್ಲಿ ದಾಂಪತ್ಯ ಜೀವನವನ್ನು ನಡೆಸಿಕೊಂಡು ಹೋಗುವಂತಹ ಸಮಯ ಇದಾಗಿದೆ. ಜೀವನ ಯಾವುದೇ ಸಮಸ್ಯೆ ಇಲ್ಲದೆ ಚಿಂತೆ ಇಲ್ಲದೆ ನಡೆಯಲಿದೆ.

ಮಕರ ರಾಶಿ

ಈ ಸಂದರ್ಭದಲ್ಲಿ ಮಕರ ರಾಶಿಯವರಿಗೆ ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ ಹಾಗೂ ಕೈತುಂಬ ಆದಾಯ ಹರಿದು ಬರಲಿದ್ದು ಹಣಕಾಸಿನ ವಿಚಾರದಲ್ಲಿ ಮಕರ ರಾಶಿಯವರು ಈ ಸಂದರ್ಭದಲ್ಲಿ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನೀವು ಈಗ ಅದರ ಬಗ್ಗೆ ಯೋಚನೆ ಮಾಡಬಹುದಾಗಿದೆ. ಖಂಡಿತವಾಗಿ ಈಗ ನೀವು ತೆಗೆದುಕೊಳ್ಳುವಂತಹ ಇದೊಂದು ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಿ ಅಥವಾ ಕೆಲಸ ವ್ಯಾಪಾರವನ್ನು ಮಾಡಿ ಖಂಡಿತವಾಗಿ ನಿಮ್ಮ ಮನೆಯವರು ಪೋಷಕರು ಖಂಡಿತವಾಗಿ ಈ ಸಂದರ್ಭದಲ್ಲಿ ನಿಮ್ಮ ಬೆಂಬಲವಾಗಿ ನಿಲ್ಲಲಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮೇಷ ರಾಶಿ

ಹಣಕಾಸಿನ ವಿಚಾರದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಮೇಷ ರಾಶಿಯವರು ಈ ಸಂದರ್ಭದಲ್ಲಿ ನಿವಾರಣೆ ಮಾಡಿಕೊಳ್ಳಲಿದ್ದಾರೆ ಹಾಗೂ ತೀರಿಸಬೇಕಾಗಿರುವಂತಹ ಸಾಲವನ್ನು ಕೂಡ ತೀರಿಸಲಿದ್ದಾರೆ‌. ಆದಾಯದ ಮೂಲಗಳು ಒಂದಕ್ಕಿಂತ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದಾಗಿ ಆದಾಯ ಗಣನೀಯವಾಗಿ ಹೆಚ್ಚಾಗಲಿ ಹಾಗೂ ಅದನ್ನ ನೀವು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡಿ ಭವಿಷ್ಯಕ್ಕಾಗಿ, ಹೂಡಿಕೆ ಮಾಡಬೇಕಾಗಿರುತ್ತದೆ. ನೀವು ಮಾಡುವಂತ ಒಳ್ಳೆಯ ಕೆಲಸಗಳಿಗಾಗಿ ಸಮಾಜದಲ್ಲಿ ನಿಮ್ಮ ಪ್ರತಿಷ್ಠ ಹಾಗೂ ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಬಹುದಾಗಿದೆ.

Comments are closed.