Post office Scheme: ಮನೆಯಲ್ಲಿ ಮಗು ಇರುವವರು ತಪ್ಪದೆ ಪೋಸ್ಟ್ ಆಫೀಸ್ನ ಈ ಜನಪ್ರಿಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ!

Post office Scheme: ಸರ್ಕಾರ ಸಾಮಾನ್ಯ ಹಾಗೂ ಮಾಧ್ಯಮ ವರ್ಗದ ಕುಟುಂಬದ ಹಿತಾಸಕ್ತಿಯ ದೃಷ್ಟಿಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿದ್ದು ಅದೇ ರೀತಿಯಲ್ಲಿ ಜಾರಿಗೆ ತಂದಿರುವಂತಹ ಇದೊಂದು ವಿಶೇಷವಾದ ಪೋಸ್ಟ್ ಆಫೀಸ್ ಯೋಜನೆ ಬಗ್ಗೆ ನಾನು ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಹೌದು ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಬಾಲ ಜೀವನ ಭೀಮಾ ಯೋಜನೆ.

ಬಾಲ ಜೀವನ್ ಭೀಮಾ ಯೋಜನೆ!

ಈ ಯೋಜನೆಯಲ್ಲೇ ಅತ್ಯಂತ ಸಣ್ಣ ಹೂಡಿಕೆಯಿಂದ ಪ್ರಾರಂಭಿಸಿ, ದೊಡ್ಡ ರಿಟರ್ನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದ್ದು ನಿಮ್ಮ ಮಗುವಿನ ಉನ್ನತ ವ್ಯಾಸಂಗ ಹಾಗೂ ಮದುವೆ ವಿಚಾರದಲ್ಲಿ ಕೂಡ ಈ ಹಣವನ್ನು ವಿನಿಯೋಗ ಮಾಡಿಕೊಳ್ಳಬಹುದಾಗಿದ್ದು, ದಿನಕ್ಕೆ ಕೇವಲ ಆರು ರೂಪಾಯಿಗಳ ಹೂಡಿಕೆ ಮಾಡುವಂತಹ ಪ್ರೀಮಿಯಂ ಗಳು ಕೂಡ ಈ ಯೋಜನೆ ಅಡಿಯಲ್ಲಿ ನಿಮಗೆ ಸಿಗಲಿವೆ. ಈ ಯೋಜನೆಯಲಿ ಒಂದು ಕುಟುಂಬದಿಂದ ಕೇವಲ ಇಬ್ಬರು ಮಕ್ಕಳಿಗೆ ಮಾತ್ರ ಹೂಡಿಕೆ ಮಾಡುವಂತಹ ಅವಕಾಶ ಇರುತ್ತೆ. 5 ರಿಂದ 20 ವರ್ಷ ವಯಸ್ಸಿನ ಮಕ್ಕಳು ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಅಥವಾ ಮಾಡಿಸಿಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ. ಮ್ಯಾಕ್ಸಿಮಮ್ 1 ಲಕ್ಷಗಳ ವಿಮೆಯನ್ನು ನೀವು ಇಲ್ಲಿ ಮಾಡಿಸಬಹುದಾಗಿದೆ. ಪೋಷಕರ ವಯಸ್ಸು 45 ವರ್ಷ ಮೀರಿರಬಾರದು. ಪೋಷಕರ ಮರಣ ನಂತರ ಈ ವಿಮೆಯ ಪ್ರೀಮಿಯಂ ಅನ್ನು ಕಟ್ಟಬೇಕಾಗಿಲ್ಲ.

ಈ ಹೂಡಿಕೆಯಿಂದ ಸಿಗುವ ಪ್ರಯೋಜನಗಳು!

ಒಂದು ವೇಳೆ ಆ ಮಗು ಅನಿರೀಕ್ಷಿತವಾಗಿ ಮರಣ ಹೊಂದಿದ್ದರೆ ಅದು ಈ ಯೋಜನೆಯ ಮೂಲಕ ಮನೆಯವರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಕೆಲಸ ಮಾಡುತ್ತದೆ. ಮಗುವಿನ ಶಿಕ್ಷಣ ಸೇರಿದಂತೆ ಮದುವೆ ಹಾಗೂ ಇನ್ನಿತರ ಪ್ರಮುಖ ಕಾರ್ಯಗಳಿಗೆ ಖರ್ಚಾಗುವಂತಹ ಹಣಕ್ಕೆ ಇದು ಆಧಾರ ಸ್ತಂಭವಾಗಿ ನಿಲ್ಲಲಿದೆ ಎಂದು ಹೇಳಬಹುದಾಗಿದೆ.

ಬೇಕಾಗುವ ಡಾಕ್ಯುಮೆಂಟ್ಸ್ ಗಳು!

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್ (ಪೋಷಕರ ಆಧಾರ್ ಕಾರ್ಡ್ ಕೂಡ ಬೇಕಾಗಿರುತ್ತದೆ)
  • ಪಾಸ್ಪೋರ್ಟ್ ಸೈಜ್ ಫೋಟೋ
  • ಅಡ್ರೆಸ್ ಪ್ರೂಫ್
  • ವಯಸ್ಸಿನ ಪತ್ರ

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಅಲ್ಲಿ ಅಧಿಕಾರಿಗಳಿಂದ ಬಾಲ ಜೀವನ ಭೀಮ ಯೋಜನೆ ನಮೂನೆಯನ್ನು ಪಡೆದುಕೊಳ್ಳಿ.
  • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ. ಇನ್ನು ಇದನ್ನು ಕೇಳಲಾಗುವಂತಹ ದಾಖಲೆಗಳ ಜೊತೆಗೆ ಅಟ್ಯಾಚ್ ಮಾಡಿ ಅಧಿಕಾರಿಗಳಿಗೆ ನೀಡಿದರೆ ಸಾಕು ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ. ಈ ಮೂಲಕ ನೀವು ನಿಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿ ಸುವಂತಹ ದಿಕ್ಕಿನ ಕಡೆಗೆ ಒಂದು ಒಳ್ಳೆ ಹೆಜ್ಜೆ ಇಟ್ಟಂತಾಗುತ್ತದೆ.

Comments are closed.