Savings: ಮಹಿಳೆಯರಿಗೆ ಮಾತ್ರ: ಈ ಚಿಕ್ಕ ತಂತ್ರ ಬಳಸಿದರೆ ಮಹಿಳೆಯರು ಶ್ರೀಮಾನರಾಗಿ ಹಣ ತುಂಬಿ ತುಳುಕುತ್ತದೆ!

Savings: ಒಂದು ಮನೆ ಬೆಳಗಬೇಕು ಅಂದ್ರೆ ಆ ಮನೆಯ ಹೆಣ್ಣು ಮಗಳು ಬುದ್ಧಿವಂತೆ ಆಗಿರಬೇಕು ಹಾಗೂ ಮನೆಯ ಅಭಿವೃದ್ಧಿಯ ಕಡೆಗೆ ಸ್ವಲ್ಪಮಟ್ಟಿಗೆ ಹೆಚ್ಚಿನ ಗಮನವಹಿಸಿ ಆಕೆಯೇ ಎಲ್ಲವನ್ನು ನೋಡಿಕೊಳ್ಳಬೇಕು. ಇನ್ನು ಈ ರೀತಿಯ ಕೆಲವೊಂದು ವಿಧಾನಗಳನ್ನು ಪಾಲಿಸಿದರೆ ಮನೆಯನ್ನು ಅಥವಾ ಆಕೆ ಶ್ರೀಮಂತಳಾಗುವಂತಹ ಕನಸನ್ನ ಮಹಿಳೆ ಪೂರೈಸಿಕೊಳ್ಳಬಹುದಾಗಿದೆ.

ಈ ತಂತ್ರದಿಂದ ನೀವು ಶ್ರೀಮಂತರಾಗಬಹುದು!

  • ಮಹಿಳೆಯರು ಶ್ರೀಮಂತರಾಗೋದಕ್ಕೆ ಸರಿಯಾದ ರೀತಿಯಲ್ಲಿ ಫೈನಾನ್ಸಿಯಲ್ ಗೋಲ್ ಹೊಂದಿರಬೇಕು. ರಿಟೈರ್ಮೆಂಟ್ ಪ್ಲಾನಿಂಗ್, ಮನೆ ಖರೀದಿಸುವುದು ಸೇರಿದಂತೆ ಯಾವುದೇ ರೀತಿಯ ಹೂಡಿಕೆ ಮಾಡೋದಕ್ಕೂ ಕೂಡ ಸರಿಯಾದ ರೀತಿಯಲ್ಲಿ ಯೋಚನೆಯನ್ನು ಪೂರ್ವಭಾವಿಯಾಗಿ ತಯಾರಿಸಿಕೊಂಡಿರಬೇಕು.
  • ಕೇವಲ ಸಮಾಜದಲ್ಲಿ ತೋರಿಕೆಗಾಗಿ ಜೀವನವನ್ನು ಮಾಡುವ ಬದಲು ಉಳಿತಾಯ ಮಾಡುವ ಮೂಲಕ ಅಥವಾ ಅನಗತ್ಯ ಖರ್ಚುಗಳಿಗೆ ಅಂಕುಶವನ್ನು ಹಾಕುವ ಮೂಲಕ ಹಣವನ್ನ ಇನ್ನಷ್ಟು ಹೆಚ್ಚಾಗಿ ನಿಮ್ಮ ಹತ್ತಿರ ಇರುವ ಹಾಗೆ ಮಾಡಿ ನಿಜವಾಗಿಯೂ ಶ್ರೀಮಂತರಾಗುವಂತಹ ಕೆಲಸವನ್ನು ನೀವು ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಅಂದುಕೊಂಡಿರುವಂತಹ ಗುರಿಯ ಮೇಲೆ ಹಣವನ್ನು ಹೆಚ್ಚು ಖರ್ಚು ಮಾಡಿ ಖಂಡಿತವಾಗಿ ಲಾಭ ರೂಪದಲ್ಲಿ ಹಣ ರಿಟರ್ನ್ ಬರುತ್ತದೆ.
  • ಉಳಿತಾಯ ಮತ್ತು ಹೂಡಿಕೆ ಎರಡು ವಿಚಾರದಲ್ಲಿ ಕೂಡ ಹಣವನ್ನು ನಿಯಮಿತವಾಗಿ ಆಟೋಮೆಟಿಕ್ ಆಗಿ ಹಣ ಈ ಯೋಜನೆಗಳಿಗೆ ಖಂಡಿತ ಗೊಳ್ಳುವ ರೀತಿಯಲ್ಲಿ ನೀವು ಉಪಾಯವನ್ನು ಮಾಡಿಕೊಳ್ಳಬೇಕು ಹಾಗೂ ಇದು ಒಂದು ಕಾಲದ ನಂತರ ನಿಮಗೆ ದೊಡ್ಡ ಮೊತ್ತದ ಹಣವನ್ನು ವಾಪಸ್ ಕೊಡುತ್ತದೆ. ಸ್ವಯಂ ಚಾಲಿತವಾಗಿ ಹಣ ಈ ಯೋಜನೆಗಳಿಗೆ ಕಡಿತುಕೊಳ್ಳುವುದು ನಿಮಗೆ ಲಾಭದಾಯಕವಾದ ಹೂಡಿಕೆಗೆ ಒಂದು ಉತ್ತಮವಾದ ಹೆಜ್ಜೆ ಎಂದು ಹೇಳಬಹುದಾಗಿದೆ.
  • ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಇರುವಂತಹ ಟ್ರೆಂಡ್ ಯಾವ ರೀತಿಯಲ್ಲಿದೆ ಹಾಗೂ ಟ್ಯಾಕ್ಸ್ ವಿನಾಯಿತಿಯನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಜ್ಞಾನವನ್ನು ಸಂಪಾದಿಸ ಬೇಕಾಗಿರುವುದು ನಿಮ್ಮಲ್ಲಿ ಪ್ರಮುಖವಾಗಿರುತ್ತದೆ. ಇದರಿಂದಲೇ ನಿಮಗೆ ಆರ್ಥಿಕವಾದ ಸ್ವಾತಂತ್ರ್ಯವನ್ನು ಸಂಪಾದನೆ ಮಾಡಲು ಸಾಧ್ಯವಿದೆ.
  • ಹೂಡಿಕೆಯ ಮೇಲಿನ ಅಪಾಯವನ್ನು ಹೆಚ್ಚಿಸುವುದಕ್ಕಾಗಿ ಮಹಿಳೆಯರು ಒಂದೇ ಕಡೆಯಲ್ಲಿ ಹಣವನ್ನ ಹೂಡಿಕೆ ಮಾಡಬಾರದು ಬೇರೆ ಬೇರೆ ಕಡೆಯಲ್ಲಿ ಹಣವನ್ನ ಹೂಡಿಕೆ ಮಾಡಬೇಕು ಹಾಗೂ ಇದರಿಂದ ರಿಸ್ಕ್ ಕೂಡ ಕಡಿಮೆ ಮತ್ತು ಕೆಲವು ವಿಶಿಷ್ಟ ಯೋಜನೆಗಳ ಕಾರಣದಿಂದಾಗಿ ಹೂಡಿಕೆ ಮಾಡುವಂತಹ ಕೆಲವೊಂದು ನಿರ್ದಿಷ್ಟ ಯೋಜನೆಗಳಲ್ಲಿ ಹಣ ಹೆಚ್ಚಾಗಿ ಸಿಗುವಂತಹ ಸಾಧ್ಯತೆ ಕೂಡ ಇರುತ್ತೆ.
  • ಇನ್ನು ಅನಿರೀಕ್ಷಿತವಾಗಿ ಕೆಲವೊಂದು ಆರ್ಥಿಕ ಸಂಕಷ್ಟಗಳು ಕಂಡು ಬರಬಹುದು ಅದಕ್ಕಾಗಿ ಅಂತಾನೇ ಪ್ರತ್ಯೇಕವಾಗಿ ಮಹಿಳೆಯರು ಹಣವನ್ನು ಎತ್ತಿಡಬೇಕಾಗಿರುತ್ತದೆ. ಆ ಹಣದಿಂದಲೇ ಆ ಆರ್ಥಿಕ ಸಂಕಷ್ಟವನ್ನು ನಿರ್ಮೂಲನೆ ಮಾಡುವಂತಹ ಅವಕಾಶವನ್ನು ನೀವು ಹೊಂದಿರಬಹುದಾಗಿದೆ.

Comments are closed.