Gold Purchase Tips: ಚಿನ್ನ ಖರೀದಿ ಮಾಡುವಾಗ ಈ ವಿಷಯಗಳನ್ನು ಗಮನಿಸಿ- ದುಡ್ಡು ಸುಮ್ಮನೆ ಬರಲ್ಲ, ಚಿನ್ನ ಕೂಡ!

Gold Purchase Tips: ಹಳದಿ ಲೋಹ ಆಗಿರುವಂತಹ ಚಿನ್ನ ಪ್ರತಿಯೊಬ್ಬರಿಗೂ ಕೂಡ ಅತ್ಯಂತ ಮೌಲ್ಯಯುತ ವಸ್ತು ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಸಮಯದಿಂದ ಸಮಯಕ್ಕೆ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಿಗೆ ಆಗುತ್ತದೆ. ಹಾಗೂ ಚಿನ್ನದ ಮೇಲಿನ ಹೂಡಿಕೆ ಮೇಲೆ ಗ್ಯಾರಂಟಿ ಲಾಭವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಂಡಿದ್ದಾರೆ. ಶ್ರೀಮಂತರು ಪ್ರತಿಷ್ಠೆಯ ರೂಪದಲ್ಲಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಿ ಚಿನ್ನವನ್ನು ಅಲಂಕಾರಿಕ ವಸ್ತುವಿನ ರೂಪದಲ್ಲಿ ನೋಡುತ್ತಾರೆ. ಆದರೆ ಮಧ್ಯಮ ಹಾಗೂ ಬಡವರ್ಗದ ಕುಟುಂಬದವರು ಕಷ್ಟಕಾಲದಲ್ಲಿ ನಮ್ಮ ಅಗತ್ಯಕ್ಕೆ ಚಿನ್ನ ಬರುತ್ತೆ ಅನ್ನೋ ಕಾರಣಕ್ಕಾಗಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುತ್ತಾರೆ ಹೀಗಾಗಿ ಈ ವಿಚಾರದಲ್ಲಿ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಅಗತ್ಯವಾಗಿರುತ್ತದೆ.

ಚಿನ್ನವನ್ನು ಮಧ್ಯಮ ವರ್ಗದ ಕುಟುಂಬದವರು ಖರೀದಿಸುವ ಸಂದರ್ಭದಲ್ಲಿ ಸಾಕಷ್ಟು ಯೋಚನೆ ಮಾಡಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಹೀಗಾಗಿ ಅವರು ಚಿನ್ನ ಖರೀದಿಸುವ ಸಂದರ್ಭದಲ್ಲಿ ಈ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಗಮನವಹಿಸುವುದು ಅತ್ಯಂತ ಪ್ರಮುಖವಾಗಿದ್ದು ಆ ವಿಚಾರಗಳು ಯಾವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಚಿನ್ನ ಖರೀದಿಸುವ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಮುಖವಾಗಿ ತಿಳಿದುಕೊಳ್ಳಿ!

  • ನೀವು ಯಾವ ಚಿನ್ನವನ್ನ ಖರೀದಿಸುತ್ತಿದ್ದೀರೋ ಅದರ ಬಿಲ್ ಅನ್ನು ಯಾವುದೇ ಕಾರಣಕ್ಕೂ ತಪ್ಪದೆ ಪಡೆದುಕೊಳ್ಳಿ. ಯಾಕೆಂದ್ರೆ ಮುಂದಿನ ದಿನಗಳಲ್ಲಿ ಕೆಲವೊಮ್ಮೆ ಇದು ಸಮಸ್ಯೆಗಳನ್ನು ಉಂಟುಮಾಡುವಂತಹ ಸಾಧ್ಯತೆ ಕೂಡ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇದನ್ನ ತಪ್ಪದೆ ಪಡೆದುಕೊಳ್ಳಿ.
  • ಇನ್ನು ಯಾವುದೇ ಕಾರಣಕ್ಕೂ ಕೂಡ ಆದಷ್ಟು ಹೊರಗಿನ ಅಂಗಡಿಗಳಲ್ಲಿ ಚಿನ್ನವನ್ನು ಖರೀದಿಸುವುದನ್ನ ತಪ್ಪಿಸಿ ಹಾಗೂ ನಿಮಗೆ ನಂಬಿಕೆ ಇರುವಂತಹ ಹಾಗೂ ಪರಿಚಯ ಇರುವಂತಹ ಚಿನ್ನದ ಮಳಿಗೆಗಳಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮ ಎಂಬುದಾಗಿ ಪರಿಗಣಿಸಬಹುದಾಗಿದೆ.
  • ಇನ್ನು ನೀವು ಖರೀದಿ ಮಾಡುತ್ತಿರುವಂತಹ ಚಿನ್ನದಲ್ಲಿ ಹಾಲ್ ಮಾರ್ಕ್ ಸಿಂಬಲ್ ಇದಿಯೋ ಇಲ್ಲವೋ ಅನ್ನೋದನ್ನ ಚೆಕ್ ಮಾಡಿ ಖರೀದಿ ಮಾಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದು ನಿಮಗೆ ಸಮಸ್ಯೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದಾಗಿದೆ ಯಾಕೆಂದರೆ ಹಾಲ್ ಮಾರ್ಕ್ ಇರುವಂತಹ ಚಿನ್ನವನ್ನು ಮಾತ್ರ ಅಧಿಕೃತ ಎಂಬುದಾಗಿ ಪರಿಗಣಿಸಲಾಗುತ್ತದೆ.
  • ಇನ್ನು ನೀವು ಖರೀದಿ ಮಾಡುತ್ತಿರುವಂತಹ ಚಿನ್ನ ಒಂದು ವೇಳೆ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ಅಥವಾ ವೆಬ್ಸೈಟ್ ಮೂಲಕ ಬರ್ತಾ ಇದೆ ಅಂತ ಅಂದ್ರೆ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಿಂದ ಬರುತ್ತಿರುವಂತಹ ಚಿನ್ನದ ಬಗ್ಗೆ ಬೇರೆ ಗ್ರಾಹಕರು ನೀಡಿರುವಂತಹ ವಿಮರ್ಶೆಗಳು ಅಥವಾ ಅದರ ಬಗ್ಗೆ ಇರುವಂತಹ ಲೆಜಿಟ್ ಮಾಹಿತಿಗಳು ಈ ಎಲ್ಲ ವಿಚಾರಗಳನ್ನು ಕೂಡ ನೀವು ಚಿನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ತಿಳಿದುಕೊಳ್ಳ ಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನಲ್ಲಿ ಎಷ್ಟು ಮೋಸಗಳು ನಡೆಯುತ್ತಿವೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಹೀಗಾಗಿ ಚಿನ್ನವನ್ನು ಆನ್ಲೈನ್ ಮೂಲಕ ತರಿಸುವುದಕ್ಕಿಂತ ಮುಂಚೆ ಅದನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ನಂತರ ದೃಢೀಕರಿಸಿ.

Comments are closed.