Guru Krupa: ಗುರು ಕೃಪೆ ಆರಂಭ – ಬರೆದು ಇಟ್ಕೊಳಿ ಈ ರಾಶಿಗಳಿಗೆ ಮುಂದಿನ ವರ್ಷದ ವರೆಗೂ ಹಣವೊ ಹಣ!

Guru Krupa: ದೇವಗುರು ಬೃಹಸ್ಪತಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯಲ್ಲಿ ತನ್ನ ಸ್ಥಾನವನ್ನು ಪಳಟಗೊಳಿಸಲಿದ್ದಾನೆ ಹಾಗೂ 2025 ರ ತನಕ ಕೂಡ ಅಲ್ಲೇ ಇರಲಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಬುದ್ಧಿ ಹಾಗೂ ಜ್ಞಾನದ ಕಾರಕ ಆಗಿರುವಂತಹ ಗುರುವಿನ ಈ ಚಲನೆ ಕೆಲವು ರಾಶಿ ಅವರಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಅದೃಷ್ಟವಂತರು ಯಾರು ಎನ್ನುವಂತಹ ಮಾಹಿತಿ ಪಡೆದುಕೊಳ್ಳೋಣ.

ವೃಷಭ ರಾಶಿ

ಪ್ರಮುಖವಾಗಿ ಈ ಚಾಲನೆ ಅನ್ನೋದು ವೃಷಭ ರಾಶಿಯಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ವೃಷಭ ರಾಶಿಯವರಿಗೆ ಇದರ ಲಾಭ ಸ್ವಲ್ಪ ಮಟ್ಟಿಗೆ ಹೆಚ್ಚಾಗಿ ಸಿಗಬಹುದು ಎಂಬುದಾಗಿ ಅಂದಾಜಿಸಬಹುದಾಗಿದೆ. 2025ರ ಮಧ್ಯದವರೆಗೂ ಕೂಡ ಗುರು ಇದೇ ರಾಶಿಯಲ್ಲಿ ಇರುವ ಕಾರಣದಿಂದಾಗಿ ವೃಷಭ ರಾಶಿಯವರು ಬೇರೆ ಬೇರೆ ಕ್ಷೇತ್ರದಲ್ಲಿ ಸಮರ್ಪಕವಾದ ಯಶಸ್ಸನ್ನು ಪಡೆದುಕೊಳ್ಳಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಕೈತುಂಬ ಲಾಭವನ್ನು ಪಡೆದುಕೊಳ್ಳುವಂತಹ ನೀವು ಉದ್ಯೋಗ ಕ್ಷೇತ್ರದಲ್ಲಿ ಕೂಡ ಕೈ ತುಂಬಾ ಸಂಬಳವನ್ನು ಪಡೆದುಕೊಳ್ಳುವಂತಹ ಹಾಗೂ ಉನ್ನತ ಹಂತವನ್ನು ತಲುಪುವಂತಹ ಅವಕಾಶವನ್ನು ಹೊಂದಿದ್ದೀರಿ. ಹೊಸ ಹೊಸ ಡೀಲ್ ಗಳು ಕೂಡ ವೃಷಭ ರಾಶಿಯ ಉದ್ಯಮಿಗಳನ್ನ ಹುಡುಕಿಕೊಂಡು ಬರುತ್ತೆ. ಈಗಾಗಲೇ ಮದುವೆ ಆಗಿರುವಂತಹ ವಿವಾಹಿತ ಮಂದಿ ವೈವಾಹಿಕ ಜೀವನದಿಂದ ಸಾಕಷ್ಟು ಸುಖ ಹಾಗೂ ನೆಮ್ಮದಿಯನ್ನ ಈ ಸಂದರ್ಭದಲ್ಲಿ ಹೊಂದಲಿದ್ದಾರೆ.

ಸಿಂಹ ರಾಶಿ

ಹಣಗಳಿಸುವ ವಿಚಾರದಲ್ಲಿ ಸಿಂಹ ರಾಶಿಯವರು ಈ ಸಂದರ್ಭದಲ್ಲಿ ಸಂಪೂರ್ಣ ಬುದ್ಧಿವಂತರಾಗಿರುತ್ತಾರೆ ಅಂತ ಹೇಳಬಹುದು. ವಿಶೇಷವಾಗಿ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯ ಮೂಲಕ ವರಿಷ್ಠ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದುಕೊಳ್ಳಲಿದ್ದಾರೆ. ಪ್ರಮೋಷನ್ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ಕೂಡ ನಿಮಗೆ ದೊರೆಯುತ್ತದೆ. ಆಸ್ತಿ ಹಂಚಿಕೆಯ ವಿಚಾರದಲ್ಲಿ ನ್ಯಾಯ ನಿಮ್ಮ ಪರವಾಗಿರಲಿದೆ ಹಾಗೂ ತಂದೆಯ ಜೊತೆಗೆ ಕೂಡ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದೃಷ್ಟದ ಸಹಾಯದಿಂದಾಗಿ ಈ ಸಮಯದಲ್ಲಿ ಸಂಪೂರ್ಣವಾದ ಯಶಸ್ಸನ್ನು ಪಡೆದುಕೊಳ್ಳಲಿದ್ದಾರೆ. ಈ ಸಂದರ್ಭ ಅನ್ನೋದು ನಿಮ್ಮ ಹಾಗೂ ನಿಮ್ಮ ಜೀವನ ಸಂಗಾತಿಯ ನಡುವಿನ ಬಾಂಧವ್ಯ ಇನ್ನಷ್ಟು ಹತ್ತಿರವಾಗುವುದಕ್ಕೆ ಕೂಡ ಕಾರಣವಾಗಲಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ದೇವರ ಕಾರ್ಯಗಳಲ್ಲಿ ನೀವು ಹೆಚ್ಚಿನ ಹೊಲವನ್ನು ತೋರಿಸಲಿದ್ದೀರಿ ಹಾಗೂ ಇದರಿಂದಾಗಿ ನಿಮ್ಮ ಜೀವನದಲ್ಲಿ ಪುಣ್ಯ ಸಂಪಾದನೆ ಕೂಡ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗುಡ್ ನ್ಯೂಸ್ ದೊರಕಲಿದೆ. ಉನ್ನತ ವ್ಯಾಸಂಗಕ್ಕಾಗಿ ನೀವು ವಿದೇಶಕ್ಕೆ ಹೋಗುವಂತಹ ಅವಕಾಶವನ್ನು ಕೊಡು ಹೊಂದಿದ್ದೀರಿ ಅನ್ನೋದನ್ನ ಮರೆಯಬೇಡಿ.

Comments are closed.