Recipe: ಕೇವಲ ಐದು ನಿಮಿಷದಲ್ಲಿ ಸುಲಭವಾಗಿ ಮೊಟ್ಟೆ ಫ್ರೈ ಮಾಡೋದು ಹೇಗೆ ಗೊತ್ತೇ??

Recipe: ಒಬ್ಬರೇ ಇರುವವರು ಹಾಗೂ ವಿಶೇಷವಾಗಿ ಬ್ಯಾಚುಲರ್ಗಳಿಗೆ ಅಡುಗೆ ಮಾಡುವಂತಹ ಹವ್ಯಾಸ ಪ್ರಾರಂಭ ಆಗಬೇಕು ಅಂತ ಅಂದ್ರೆ ಯಾವ ರೀತಿಯಲ್ಲಿ ಅಡುಗೆ ಮಾಡಬೇಕು ಅನ್ನೋದನ್ನ ತಿಳಿದುಕೊಳ್ಳುವುದು ಕೂಡ ಪ್ರಮುಖವಾಗಿರುತ್ತದೆ. ಇನ್ನು ಕೆಲವು ಮಹಿಳೆಯರಿಗೆ ಕೂಡ ಕೆಲವೊಂದು ಹೊಸ ರೆಸಿಪಿಗಳನ್ನು ತಿಳಿದುಕೊಳ್ಳುವಂತಹ ಕುತೂಹಲವಿರುತ್ತದೆ ಅಂತವರಿಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಮೊಟ್ಟೆ ಮಸಾಲ ಫ್ರೈ ಬಗ್ಗೆ ಹೇಳಿಕೊಡುವುದಕ್ಕೆ ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಮನೆಯಲ್ಲಿ ಚಪಾತಿಯ ಜೊತೆಗೆ ಈ ರುಚಿಕರವಾದ ಮೊಟ್ಟೆ ಮಸಾಲಾ ಹಣ್ಣು ತಿನ್ನುವಂತಹ ಆಸಕ್ತಿ ಇದ್ರೆ ಖಂಡಿತವಾಗಿ ಈ ರೆಸಿಪಿಯನ್ನು ನೀವು ಕಲಿತುಕೊಳ್ಳಬಹುದಾಗಿದೆ.

ಮೊದಲಿಗೆ ಮೊಟ್ಟೆ ಮಸಾಲಾ ಫ್ರೈ ಮಾಡೋದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

  • ಆರು ಮೊಟ್ಟೆ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ನಾಲ್ಕು ಈರುಳ್ಳಿ
  • ಮೂರು ಟೊಮ್ಯಾಟೋ
  • ನಾಲ್ಕು ಹಸಿರು ಮೆಣಸಿನಕಾಯಿ
  • ಗರಂ ಮಸಾಲ
  • ಮೆಣಸಿನ ಪುಡಿ
  • ಧನಿಯಾ ಪುಡಿ
  • ಎಣ್ಣೆ
  • ಅರಿಶಿಣ ಪುಡಿ
  • ಕೊತ್ತಂಬರಿ ಸೊಪ್ಪು
  • ಜೀರಿಗೆ
  • ಕರಿಬೇವು
  • ಸ್ವಲ್ಪ ಉಪ್ಪು
    ಇವಿಷ್ಟು ವಸ್ತುಗಳನ್ನ ಸಿದ್ಧಪಡಿಸಿ ಇಟ್ಕೊಳ್ಳಿ.

ಮೊಟ್ಟೆ ಮಸಾಲ ಫ್ರೈ ಮಾಡುವ ವಿಧಾನ!

ಮೊದಲಿಗೆ ಪಾತ್ರೆ ಮೇಲೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತರ ಒಟ್ಟಿಗೆ ಅದರ ಮೇಲೆ ಸಾಸಿವೆ ಜೀರಿಗೆ ಕರಿಬೇವು ಹಾಗೂ ಈರುಳ್ಳಿಯನ್ನು ಹಾಕಿಕೊಂಡು ಸರಿಯಾದ ರೀತಿಯಲ್ಲಿ ಫ್ರೈ ಮಾಡಿಕೊಳ್ಳಬೇಕಾಗಿರುತ್ತದೆ. ಇದಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಟೊಮೆಟೊವನ್ನು ಮಿಶ್ರಣ ಮಾಡಿ ಅದನ್ನು ಕೂಡ ಸರಿಯಾದ ರೀತಿಯಲ್ಲಿ ಬೇಯಿಸಿಕೊಳ್ಳಬೇಕು. ಇದಾದ ನಂತರ ಉಪ್ಪು ಹಾಗೂ ಕಾರ ಪುಡಿಯನ್ನು ಅದರ ಜೊತೆಗೆ ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡಿಕೊಳ್ಳಬೇಕು ಹಾಗೂ ಅದಾದ ನಂತರ ನೀರು ಹೊರಬರುವ ರೀತಿಯಲ್ಲಿ ಸರಿಯಾಗಿ ಬೇಯಿಸಿಕೊಳ್ಳಬೇಕು. ಅರಿಶಿನ ಪುಡಿ, ಧನಿಯಾ ಪುಡಿ ಹಾಗೂ ಗರಂ ಮಸಾಲಾ ಅನ್ನು ಮಿಶ್ರಣ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಬೇಯಿಸಿಕೊಳ್ಳಿ. ಇದಕ್ಕೆ ಮೊಟ್ಟೆಯನ್ನು ಹೊಡೆದು ಹಾಕಿ ಆದರೆ ಇದನ್ನ ಕಲಸೋದಕ್ಕೆ ಹೋಗಬೇಡಿ. ಇದಾದಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಿ. ಮೊಟ್ಟೆ ಭಾಗವನ್ನು ಕ-ತ್ತರಿಸಿಕೊಂಡು ಅದರ ಮತ್ತೊಂದು ಭಾಗವನ್ನು ಬೇಯಿಸಿಕೊಳ್ಳಿ. ಇಷ್ಟೇ ನೋಡಿ ನಿಮ್ಮ ಮೊಟ್ಟೆ ಮಸಾಲ ರೆಡಿಯಾಗುತ್ತೆ ಹಾಗೂ ಇದನ್ನ ಚಪಾತಿಯ ಜೊತೆಗೆ ತಿನ್ನಲು ನೀವು ಸಿದ್ಧವಾಗಿ.

Comments are closed.