Kannada Film: ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಲು ವಿಷ್ಣು ರವರೆ ಒಪ್ಪಲಿಲ್ಲ, ಆದರೆ ದರ್ಶನ್ ಗೆ ಹೋಗಿದ್ದೆಗೆ??

Kannada Film: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐತಿಹಾಸಿಕ ಪಾತ್ರಗಳಲ್ಲಿ ತಮ್ಮನ್ನು ತಾವು ಪರಕಾಯ ಪ್ರವೇಶ ಮಾಡಿಸಿ ಪ್ರೇಕ್ಷಕರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗುತ್ತಾರೆ ಅನ್ನೋದನ್ನ ಈಗಾಗಲೇ ನಾವು ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ನೋಡಿದ್ದೇವೆ. ನಿಜಕ್ಕೂ ಕೂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಾಣಿಸಿಕೊಂಡಿದ್ದು ಇನ್ನು ಕಿಚ್ಚ ಸುದೀಪ್ ರವರ ವಾಯ್ಸ್ ಓವರ್ ಹಾಗೂ ನಾಗಣ್ಣ ಅವರ ನಿರ್ದೇಶನ ನಿಜಕ್ಕೂ ಕೂಡ ಆ ಸಿನಿಮಾ ಸೂಪರ್ ಹಿಟ್ ಆಗೋದಕ್ಕೆ ಇನ್ನೇನು ಬೇಕು ಎನ್ನುವ ರೀತಿಯಲ್ಲಿ ಯಶಸ್ವಿಯಾಗಿತ್ತು. ಕನ್ನಡ ಚಿತ್ರರಂಗದ ಒಂದು ಪರ್ಫೆಕ್ಟ್ ಸೂಪರ್ ಹಿಟ್ ಐತಿಹಾಸಿಕ ಸಿನಿಮ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ನಿಜಕ್ಕೂ ಹೇಳಬೇಕು ಅಂತ ಅಂದ್ರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ನಾಗಣ್ಣ ಅವರು ಅದಕ್ಕಿಂತಲೂ ಸಾಕಷ್ಟು ವರ್ಷಗಳ ಹಿಂದೇನೆ ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಆಗಿರುವಂತಹ ಸಾಹಸಸಿಂಹ ವಿಷ್ಣುವರ್ಧನ್ ರವರಿಗೆ ಹೇಳಿದ್ರಂತೆ. ನಾಗಣ್ಣ ತಲೆಯಲ್ಲಿ ವಿಷ್ಣುವರ್ಧನ್ ರವರನ್ನು ಇಟ್ಟುಕೊಂಡೆ ಸಂಗೋಳ್ಳಿ ರಾಯಣ್ಣ ಸಿನಿಮಾ ವನ್ನು ಬರೆದಿದ್ದರು. ಅದಾದ ನಂತರ ವಿಷ್ಣುವರ್ಧನ್ ರವರಿಗೂ ಕೂಡ ಅಪ್ರೋಚ್ ಮಾಡಿ ಸಿನಿಮಾದ ಬಗ್ಗೆ ಹಾಗೂ ಖಾತೆಯನ್ನು ಕೂಡ ಹೇಳಿ ಅವರನ್ನು ಒಪ್ಪಿಸುವುದಕ್ಕೆ ಕೂಡ ಯಶಸ್ವಿಯಾಗಿದ್ದರಂತೆ. ವಿಷ್ಣುವರ್ಧನ್ ರವರು ಈ ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ಕೂಡ ಸಾಕಷ್ಟು ಕುತೂಹಲದಿಂದ ಇದ್ದರೂ ಆದರೆ ಸಿನಿಮಾದ ಟೈಟಲ್ ಅನ್ನು ನಾಗಣ್ಣ ತಮ್ಮ ಬ್ಯಾನರ್ ಅಡಿಯಲ್ಲಿ ರಿಜಿಸ್ಟರ್ ಮಾಡೋದಕ್ಕೆ ವಾಣಿಜ್ಯ ಮಂಡಳಿಗೆ ಹೋದಾಗ ಅದಾಗಲೇ ಬೆಳಗಾವಿ ಮೂಲದ ನಿರ್ಮಾಪಕ ಆಗಿರುವಂತಹ ಆನಂದ್ ಅಪ್ಪುಗೋಳ್ ರವರು ಟೈಟಲ್ ಅನ್ನು ಅದಾಗಲೇ ರಿಜಿಸ್ಟರ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬರುತ್ತದೆ.

ಅದಾದ ನಂತರ ವಿಷ್ಣುವರ್ಧನ್ ರವರ ಬಳಿ ಹೇಳಿದಾಗ ಯಾರು ಆಸೆಪಟ್ಟು ಆ ಸಿನಿಮಾವನ್ನ ಮಾಡುತ್ತಿದ್ದಾರೆ ಹೀಗಾಗಿ ನಾನು ಆ ಸಿನಿಮಾ ಮಾಡುವುದಿಲ್ಲ ಅನ್ನೋದಾಗಿ ಹೇಳ್ತಾರೆ. ಇನ್ನು ಸಾಕಷ್ಟು ವರ್ಷಗಳ ನಂತರ ಮತ್ತೆ ಆ ಸಿನಿಮಾ ನಾಗಣ್ಣ ಅವರೇ ಮಾಡಬೇಕು ಅಂತ ನಿರ್ಮಾಪಕರು ಅವರನ್ನು ಹುಡುಕಿಕೊಂಡು ಬರುತ್ತಾರೆ. ಈ ಸಂದರ್ಭದಲ್ಲಿ ನಾಯಕನಾಗಿ ಆಯ್ಕೆ ಆಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಇದಾದ ನಂತರ ಈ ಸಿನಿಮಾದಲ್ಲಿ ಸಾಕಷ್ಟು ಬೇರೆ ಬೇರೆ ಕಲಾವಿದರು ಕೂಡ ಕಾಣಿಸಿಕೊಳ್ಳುತ್ತಾರೆ ಹಾಗೂ ನಂತರ ನಡೆದಿದ್ದು ಇತಿಹಾಸ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ವಿಷ್ಣುವರ್ಧನ್ ರವರು ಒಪ್ಪದ ಪಾತ್ರವನ್ನು ಅದಾದ ನಂತರ 15 ವರ್ಷಗಳು ಆದ್ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಾಡಿ ಯಾವ ರೀತಿಯಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಇವತ್ತಿಗೂ ಕೂಡ ಆ ಪಾತ್ರದ ಮೂಲಕ ಅಚ್ಚಳಿಯದ ರೀತಿಯಲ್ಲಿ ಉಳಿದುಕೊಂಡಿದ್ದಾರೆ ಅನ್ನೋದನ್ನ ನೀವೇ ಸಾಕ್ಷಿಕರಿಸಿದ್ದೀರಿ. ಅತ್ಯಂತ ಸರ್ವ ಶ್ರೇಷ್ಠ ಐತಿಹಾಸಿಕ ಸಿನಿಮಾಗಳಲ್ಲಿ ಇವತ್ತಿಗೂ ಕೂಡ ಸಂಗೊಳ್ಳಿ ರಾಯಣ್ಣ ಕಾಣಿಸಿಕೊಳ್ಳುತ್ತದೆ.

Comments are closed.