Cricket News: ರೋಹಿತ್ ಕೊಹ್ಲಿ ಜಡೇಜಾ ಜೊತೆಗೆ ಈ ಆಟಗಾರರು ಕೂಡ ಟೀಮ್ ಇಂಡಿಯಾಗೆ ಬಾಯ್ ಹೇಳಲಿದ್ದಾರೆ; ಕೆಲವು ದಿನ ಬಾಕಿ ಅಷ್ಟೇ!

Cricket News: ಟೀ ಟ್ವೆಂಟಿ ವಿಶ್ವ ಕಪ್ ಗೆದ್ದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಟಿ20 ಫಾರ್ಮ್ಯಾಟ್ ನಿಂದ ಭಾರತ ಕಂಡದ ಶ್ರೇಷ್ಠ ಕ್ರಿಕೆಟಿಗರಲ್ಲಿ ಕಾಣಿಸಿಕೊಳ್ಳುವಂತಹ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ರವೀಂದ್ರ ಜಡೇಜಾ ಅವರು ನಿವೃತ್ತಿಯನ್ನು ಘೋಷಿಸಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ನಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನಿಜಕ್ಕೂ ಕೂಡ ಈ ಮೂರು ಕ್ರಿಕೆಟಿಗರು t20 ಫಾರ್ಮ್ಯಾಟ್ ನಲ್ಲಿ ಅತ್ಯಂತ ಉತ್ತಮ ಆಟಗಾರರು ಅನ್ನೋದ್ರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದಾಗಿದೆ. ಟಿ ಟ್ವೆಂಟಿ ಫಾರ್ಮಾಟ್ಗೆ ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಈ ಮೂರು ಆಟಗಾರರು ತಮ್ಮದೇ ಆಗಿರುವಂತಹ ಕೊಡುಗೆಯನ್ನು ನೀಡಿದ್ದಾರೆ.

ಟೀ ೨೦ ವಿಶ್ವಕಪ್ ಅನ್ನು ಗೆದ್ದಿರುವಂತಹ ಕೃಷಿ ಒಂದು ಕಡೆ ಇದ್ದರೆ ಇನ್ನೊಂದು ಕಡೆಯಲ್ಲಿ ಇಂತಹ ಮೂರು ರತ್ನಗಳಂತಹ ಕ್ರಿಕೆಟಿಗರನ್ನ ನಾವು ಈ ಫಾರ್ಮೆಟ್ ನಲ್ಲಿ ಕಳೆದುಕೊಂಡಿದ್ದೇವೆ ಎನ್ನುವಂತಹ ದುಃಖ ಅದಕ್ಕಿಂತ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಆದರೆ ಇವರು ಕೇವಲ ಪ್ರಾರಂಭ ಮಾತ್ರ ಇದಕ್ಕಿಂತಲೂ ಮಿಗಿಲಾಗಿ ಇನ್ನೂ ಕೆಲವು ಆಟಗಾರರು ಅತಿ ಶೀಘ್ರದಲ್ಲೇ ನಿವೃತ್ತಿಯನ್ನು ನೀಡುವುದಕ್ಕೆ ಸಿದ್ಧವಾಗಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಆಟಗಾರರು ಯಾರು ಅನ್ನೋದನ್ನ ತಿಳಿಯೋಣ ಬನ್ನಿ.

ಅತಿ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ನಿವೃತ್ತಿ ಘೋಷಿಸಲಿರುವ ಆಟಗಾರರು ಇವರೇ ನೋಡಿ!

ಐಸಿಸಿ ಇವೆಂಟ್ಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲಂತಹ ಆಟಗಾರ ಆಗಿರುವಂತಹ ಶಿಖರ ಧವನ್, ಸ್ವಿಂಗ್ ಕಿಂಗ್ ಆಗಿರುವಂತಹ ಭುವನೇಶ್ವರ್ ಕುಮಾರ್, ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್, ಟೆಸ್ಟ್ ಫಾರ್ಮೆಟ್ ನಲ್ಲಿ ತಂಡದ ಗೆಲುವಿನ ದಿಕ್ಕನ್ನೇ ಬದಲಾಯಿಸಬಲ್ಲಂತಹ ಆಟಗಾರ ಅಜಿಂಕ್ಯ ರಹನೆ ಕೂಡ ಟೀಮ್ ಇಂಡಿಯಾಗೆ ಅತಿ ಶೀಘ್ರದಲ್ಲಿ ನಿವೃತ್ತಿಯನ್ನು ಘೋಷಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರು ನಿವೃತ್ತಿಯ ಮೂಲಕ ಭಾರತೀಯ ಕ್ರಿಕೆಟ್ ತಂಡದ ಒಂದು ಯುಗ ಅಂತ್ಯ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದ್ದು ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಇವರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಇನ್ನು ಮುಂದಿನ ಒಂದರಿಂದ ಎರಡು ವರ್ಷಗಳ ನಡುವೆ ಭಾರತೀಯ ಕ್ರಿಕೆಟ್ ತಂಡ ಸಂಪೂರ್ಣವಾಗಿ ಯುವ ಆಟಗಾರರಿಂದ ಕೂಡಿಕೊಳ್ಳಲಿದೆ ಎಂದು ಹೇಳಬಹುದಾಗಿದ್ದು, ಇದು ಯಾವ ರೀತಿಯಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಉತ್ತಮವಾಗಿ ಪರ್ಫಾರ್ಮೆನ್ಸ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಅದರಲ್ಲಿ ವಿಶೇಷವಾಗಿ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಐಸಿಸಿ ಇವೆಂಟ್ ರೂಪದಲ್ಲಿ ಕಾಣಿಸಿಕೊಳ್ಳಲಿ ಎಂದು ಯಾವ ರೀತಿಯಲ್ಲಿ ನಿರ್ಮಾಣವಾಗಲಿದೆ ಅನ್ನೋದನ್ನ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಕಾತರದಿಂದ ಕಾಯುತ್ತಿದ್ದಾನೆ.

Comments are closed.