Tirupati: ತಿರುಪತಿಗೆ ಹೋಗುವ ಹೆಣ್ಣುಮಕ್ಕಳು ಹೂ ಮೂಡಿದುಕೊಂಡು ಹೋಗುವುದಿಲ್ಲ ಯಾಕೆ ಗೊತ್ತೇ??

Tirupati: ಹೆಣ್ಣು ಮಕ್ಕಳು ಸೀರೆ ಉಟ್ಟುಕೊಳ್ಳುವುದು ಹಾಗೂ ತಲೆಗೆ ಹೂ ಮುಟ್ಟುಕೊಂಡು ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿ ಎಂದು ಹೇಳಲಾಗುತ್ತದೆ ಹಾಗೂ ಹುಡುಗರು ಸಾಂಪ್ರದಾಯಿಕ ಉಡುಪು ಆಗಿರುವಂತಹ ಪಂಚ ಹಾಗೂ ಶರ್ಟ್ ಧರಿಸುವುದು ಕೂಡ ಅದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಆದರೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಿಳೆಯರು ತಲೆಗೆ ಹೂ ಮುರಿದುಕೊಳ್ಳಬಾರದು ಎನ್ನುವಂತಹ ನಿಯಮವಿದೆ. ಇದು ಯಾಕೆ ಅಂತ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ವಿವರಿಸಲು ಹೊರಟಿದ್ದೇವೆ.

ಏಳು ಮಲೆಯ ಒಡೆಯ ತಿರುಪತಿ ತಿಮ್ಮಪ್ಪನ ನೋಡೋದಕ್ಕಾಗಿ ವರ್ಷಂ ಪ್ರತಿ ಕೋಟ್ಯಂತರ ಭಾರತೀಯರು ಹಾಗೂ ವಿದೇಶಿಯರು ಕೂಡ ಆಗಮಿಸುತ್ತಾರೆ. ಆತನ ನಾಮಸ್ಮರಣೆಯಿಂದಲೇ ಪಾಪ ಕರ್ಮಗಳು ಕಳೆದುಹೋಗುತ್ತವೆ ಎನ್ನುವಂತಹ ನಂಬಿಕೆ ಭಕ್ತಾಭಿಮಾನಿಗಳಲ್ಲಿದೆ. ಇನ್ನು ಲಕ್ಷ್ಮಿಪತಿ ವೆಂಕಟೇಶ್ವರನಿಗೆ ಇಲ್ಲಿ ದಿನಪೂರ್ತಿ ಬೇರೆ ಬೇರೆ ರೀತಿಯ ವಿಶೇಷವಾದ ಪೂಜೆಗಳು ಕೂಡ ನಡೆಯುತ್ತದೆ. ಇನ್ನು ವೆಂಕಟೇಶ್ವರ ಪುಷ್ಪ ಪ್ರಿಯ ಎಂಬುದಾಗಿ ಕೂಡ ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಿದೆ. ಇದೇ ಕಾರಣಕ್ಕಾಗಿ ವಿಷ್ಣುವಿಗೆ ಬೇರೆ ಬೇರೆ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ.

ಇನ್ನು ತಿರುಮಲವನ್ನ ಹೂವಿನ ಮಂಟಪ ಎಂಬುದಾಗಿ ಪುರಾಣ ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ಪುಷ್ಪಪ್ರಿಯ ಆಗಿರುವಂತಹ ತಿರುಪತಿ ತಿಮ್ಮಪ್ಪನನ್ನು ಟನ್ ಗಟ್ಟಲೆ ಹೂವಿನ ಹಾರಗಳಿಂದ ಅಲಂಕರಿಸಲಾಗುತ್ತದೆ ಹಾಗೂ ಇದು ಆತನಿಗೆ ಇಷ್ಟ ಎಂಬುದಾಗಿ ಪರಿಗಣಿಸಲಾಗಿದೆ. ಇನ್ನು ಇಲ್ಲಿ ನಡೆಯುವಂತಹ ಬ್ರಹ್ಮೋತ್ಸವ ಸಂದರ್ಭದಲ್ಲಿ ಕೂಡ ಟನ್ ಗಟ್ಟಲೆ ಹೂವಿನ ಹಾರದ ಮೂಲಕ ವೆಂಕಟೇಶ್ವರನ ಅಲಂಕಾರಗೊಳಿಸಲಾಗುತ್ತದೆ ಹಾಗೂ ಅಲಂಕಾರ ಶೋಭಿತನಾಗಿ ವೆಂಕಟೇಶ್ವರ ಸ್ವಾಮಿ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾನೆ.

ಈ ಕಾರಣಕ್ಕಾಗಿ ತಿರುಪತಿಯಲ್ಲಿ ಹೂವನ್ನು ಮುಡಿಯಬಾರದು!

ತಿರುಮಲದಲ್ಲಿ ಇರುವಂತಹ ಪ್ರತಿಯೊಂದು ಹೂಗಳು ಕೂಡ ತಿಮ್ಮಪ್ಪನಿಗೆ ಅರ್ಪಿತ ಎಂಬುದಾಗಿ ತಿರುಪತಿಯ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಭಕ್ತರು ಯಾವುದೇ ಕಾರಣಕ್ಕೂ ಹೂ ಮುಡಿದುಕೊಂಡು ಹೋಗಬಾರದು ಎನ್ನುವಂತಹ ನಿಯಮವನ್ನ ಜಾರಿಗೆ ತರಲಾಗಿದೆ. ತಿರುಮಲದಲ್ಲಿರುವಂತಹ ಪ್ರತಿಯೊಂದು ಹೂಗಳು ಕೂಡ ಶ್ರೀಮನ್ನಾರಾಯಣನಿಗೆ ಮೀಸಲಾಾಗಿರುವಂತಹ ಹೂಗಳು ಎಂಬುದಾಗಿ ಪರಿಗಣಿಸುವ ಕಾರಣದಿಂದಾಗಿ ಭಕ್ತರು ಅದರಲ್ಲಿ ವಿಶೇಷವಾಗಿ ಮಹಿಳಾ ಭಕ್ತರು ಹೂವನ್ನು ಮುಡಿದುಕೊಂಡು ಹೋಗೋದಿಲ್ಲ. ನಮ್ಮ ಧರ್ಮಶಾಸ್ತ್ರಗಳಲ್ಲಿ ಪ್ರತಿಯೊಂದು ಆಚರಣೆಗೂ ಕೂಡ ಅದರದ್ದೇ ಆಗಿರುವಂತಹ ಮಹತ್ವ ಇರುತ್ತದೆ ಹಾಗೂ ಪ್ರತಿಯೊಬ್ಬರು ಕೂಡ ಅದರ ಬಗ್ಗೆ ತಿಳಿದುಕೊಂಡು ಮುನ್ನಡೆಯುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇಂತಹ ಆಚರಣೆಗಳನ್ನು ಪ್ರಶ್ನಿಸುವುದು ನಮ್ಮ ಸನಾತನ ಧರ್ಮ ಅನ್ನೋದು ಇಡೀ ವಿಶ್ವದಲ್ಲಿ ಅತ್ಯಂತ ಪ್ರಾಚೀನ ಧರ್ಮವಾಗಿರುವ ಕಾರಣದಿಂದಾಗಿ ಇಲ್ಲಿ ಆಚರಿಸಲಾಗುವಂತಹ ಪ್ರತಿಯೊಂದು ಆಚರಣೆಗಳಿಗೂ ಕೂಡ ಅದರದೇ ಆಗಿರುವಂತಹ ಮಹತ್ವದ ಅರ್ಥ ಇರುತ್ತದೆ ಅನ್ನೋದನ್ನ ಪ್ರತಿಯೊಬ್ಬರು ಹೇಳದೆ ಅರ್ಥಮಾಡಿಕೊಳ್ಳಬೇಕು.

Comments are closed.