Investments:ಈ ಟಾಪ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಉದ್ಯೋಗಸ್ಥರು ಬೆಸ್ಟ್ ಲಾಭವನ್ನು ಸಂಪಾದನೆ ಮಾಡಬಹುದು!

Investments: ಒಂದು ವೇಳೆ ನೀವು ಪ್ರತಿ ತಿಂಗಳು ನಿಯಮಿತವಾಗಿ ಆದಾಯವನ್ನು ಸಂಪಾದನೆ ಮಾಡುವಂತಹ ಉದ್ಯೋಗಸ್ಥರಾಗಿದ್ದಾರೆ ನೀವು ಕೆಲವೊಂದು ಯೋಜನೆಗಳ ಹೂಡಿಕೆಯಲ್ಲಿ ಹಣವನ್ನ ಹೂಡಿಕೆ ಮಾಡುವುದು ಅತ್ಯಂತ ಉತ್ತಮವಾಗಿದೆ ಎಂದು ಹೇಳಬಹುದಾಗಿದ್ದು ಅಂತಹ ಟಾಪ್ ಯೋಜನೆಗಳು ಯಾವುವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ!

  • ಈ ಸಾಲಿನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಇದರಲ್ಲಿ ನೀವು ವರ್ಷಕ್ಕೆ 500 ರೂಪಾಯಿಗಳಿಂದ 1.50 ಲಕ್ಷ ರೂಪಾಯಿಗಳ ವರೆಗೂ ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಹೂಡಿಕೆ ಮಾಡುವಂತಹ ಗ್ರಾಹಕರಿಗೆ 7.1 ಪ್ರತಿಶತ ಬಡ್ಡಿದರ ಸಿಗುತ್ತದೆ. ಇನ್ನು ಇದರಲ್ಲಿ ಇನ್ಕಮ್ ಟ್ಯಾಕ್ಸ್ ಉಳಿತಾಯ ಮಾಡುವುದಕ್ಕೆ ಕೂಡ ಅವಕಾಶ ಇದೆ.
  • ಎರಡನೇದಾಗಿ ಫಿಕ್ಸೆಡ್ ಡೆಪಾಸಿಟ್ ಯೋಜನೆ ಕೂಡ ಉದ್ಯೋಗಸ್ಥರಿಗೆ ಹೂಡಿಕೆ ಮಾಡುವುದಕ್ಕೆ ಉತ್ತಮವಾದಂತಹ ಯೋಜನೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ ದೀರ್ಘಕಾಲಿಕ ಹೂಡಿಕೆಯಲ್ಲಿ ಸಾಕಷ್ಟು ಲಾಭದಾಯಕ ಹಾಗೂ ಸುರಕ್ಷಿತ ಯೋಜನೆಯಾಗಿದ್ದು ಇದರ ಮೇಲೆ ನಿಮಗೆ ಇನ್ಕಮ್ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗಲಿದೆ. ಇನ್ನು ಬೇರೆ ಬೇರೆ ಬ್ಯಾಂಕ್ ಹಾಗೂ ಫೈನಾನ್ಸಿಯಲ್ ಕಂಪನಿಗಳು ಫಿಕ್ಸೆಡ್ ಡೆಪಾಸಿಟ್ ಮೇಲೆ ಅವುಗಳದ್ದೇ ಆಗಿರುವಂತಹ ಬಡ್ಡಿದರವನ್ನು ನಿಗದಿ ಮಾಡಿರುತ್ತವೆ ಹಾಗೂ ಅವುಗಳಲ್ಲಿ ಹೆಚ್ಚಾಗಿರುವಂತಹ ಹಾಗೂ ಸುರಕ್ಷಿತವಾಗಿರುವಂತಹ ಬ್ಯಾಂಕುಗಳಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
  • ಬೇರೆ ಬೇರೆ ಕಂಪನಿಯ ಶೇರುಗಳಲ್ಲಿ ಸಮನ್ವಯವಾಗಿ ಹೂಡಿಕೆ ಮಾಡುವಂತಹ ಈಕ್ವಿಟಿ ಮ್ಯೂಚುಯಲ್ ಫಂಡ್ ಕೂಡ ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳುತ್ತದೆ ಆದರೆ ಇವುಗಳ ಅಪಾಯದ ಅರಿವನ್ನು ಕೂಡ ನೀವು ತಿಳಿದುಕೊಂಡು ನಂತರ ಹೂಡಿಕೆ ಮಾಡುವುದು ಅತ್ಯಂತ ಪ್ರಮುಖವಾಗಿದೆ.
  • ಉದ್ಯೋಗಸ್ಥರು ತಮ್ಮ ಆರ್ಥಿಕ ಭವಿಷ್ಯವನ್ನು ಸದೃಢಗೊಳಿಸಲು ಸ್ವಯಂ ಪ್ರೇರಿತ ಭವಿಷ್ಯ ನಿಧಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದಲೂ ಕೂಡ ತಮ್ಮ ನಿಗದಿತ ಆರ್ಥಿಕ ಗೋಲ್ಗಳನ್ನು ಸರಿಯಾದ ರೀತಿಯಲ್ಲಿ ಸಾಧಿಸಬಹುದಾದಂತಹ ಅವಕಾಶವನ್ನು ಹೊಂದಿದ್ದಾರೆ.
  • ಕೊನೆದಾಗಿ ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಕೂಡ ಹಣವನ್ನು ಹೂಡಿಕೆ ಮಾಡುವುದು ನಿಮಗೆ ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದಕ್ಕೆ ಕಾರಣವಾಗುತ್ತದೆ. ನೀವು ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುವ ಮೂಲಕ ನಿವೃತ್ತಿಯ ನಂತರ ಆರ್ಥಿಕವಾಗಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಅನ್ನೋದನ್ನ ಖಾತ್ರಿಪಡಿಸಿಕೊಳ್ಳಿ ಬಹುದಾಗಿದೆ.

ಇಂತಹ ಲಾಭದಾಯಕ ಯೋಜನೆಗಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಸದರಣಗೊಳಿಸಬಹುದಾಗಿದೆ ಹಾಗೂ ಇಂದಿನ ದುಬಾರಿ ಜಗತ್ತಿನಲ್ಲಿ ಭವಿಷ್ಯದ ಬಗ್ಗೆ ಹಣವನ್ನು ಇವತ್ತಿನಿಂದಲೇ ಸೇವಿಂಗ್ ಮಾಡಿದರೆ ಮಾತ್ರ ನೀವು ಯಾವುದೇ ಚಿಂತೆ ಇಲ್ಲದೆ ಬಾಳಲು ಸಾಧ್ಯ.

Comments are closed.