Savings:ಸಾವಿರಗಳಲ್ಲಿ ಹಣವನ್ನು ಉಳಿಸಿ ಲಕ್ಷದಲ್ಲಿ ರಿಟರ್ನ್ ಪಡೆದುಕೊಳ್ಳುತ್ತೀರಾ; ನಿಮ್ಮ ಮನೆಯ ಹೆಣ್ಣು ಮಗಳ ಭವಿಷ್ಯಕ್ಕಾಗಿ ಈಗಲೇ ಪ್ಲಾನ್ ಮಾಡಿ!

Savings: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನರಾಗಿ ನಿಲ್ಲಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ. ಹೆಣ್ಣು ಮಗುವಿನ 10 ವರ್ಷ ವಯಸ್ಸಿನ ಸಮಯದಿಂದ ಹೋಲಿಕೆಯನ್ನು ಪ್ರಾರಂಭಿಸಿ ಆಕೆ 21 ವರ್ಷ ಆಗುವ ಸಂದರ್ಭದಲ್ಲಿ ಈ ಹಣವನ್ನು ಆಕೆ ಪಡೆದುಕೊಳ್ಳಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ!

ಬೇರೆ ಯಾವುದೇ ಹೂಡಿಕೆಗಳಿಗಿಂತ ಹೆಚ್ಚಿನ ಬಡ್ಡಿದರ ಅಂದ್ರೆ ವಾರ್ಷಿಕ 8.2% ಬಡ್ಡಿದರವನ್ನು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು ಇದನ್ನ ನೀವು ಬ್ಯಾಂಕು ಹಾಗೂ ಅಂಚೆ ಕಚೇರಿಯಲ್ಲಿ ಕೂಡ ಪ್ರಾರಂಭ ಮಾಡಬಹುದಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭ ಮಾಡುವುದಕ್ಕಿಂತ ಮುಂಚೆ ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಅದರ ಫಾರ್ಮ್ ಅನ್ನು ತೆಗೆದುಕೊಂಡು ಬರಬೇಕು. ಈ ಸಂದರ್ಭದಲ್ಲಿ ಪೋಷಕರ ಐಡಿ ಹಾಗೂ ಫೋಟೋ ಇದರ ಜೊತೆಗೆ ಮಗಳ ಜನ್ಮ ಪ್ರಮಾಣ ಪತ್ರ ಕೂಡ ಬೇಕಾಗಿರುತ್ತದೆ. ಒಮ್ಮೆ ಖಾತೆಗೆ ಸೇರಿದ ನಂತರ ನಿಮಗೆ ಅಕೌಂಟ್ ನ ಪಾಸ್ ಬುಕ್ ಅನ್ನು ಕೂಡ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮ್ಮ ಕುಟುಂಬದಲ್ಲಿ ಕೇವಲ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಖಾತೆ ತೆರೆಯುವಂತಹ ಅವಕಾಶವನ್ನು ನೀಡಲಾಗುತ್ತದೆ. ಒಂದು ವೇಳೆ ಮೊದಲನೇ ಹೆಣ್ಣು ಮಗಳು ಪ್ರತ್ಯೇಕವಾಗಿ ಹಾಗೂ ಎರಡನೇ ಹೆಣ್ಣುಮಗಳು ಅವಳಿ ಜವಳಿಯಾಗಿ ಜನಿಸಿದರೆ ಆ ಸಂದರ್ಭದಲ್ಲಿ ಮಾತ್ರ ಮೂರು ಮಕ್ಕಳಿಗೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದಾದಂತಹ ಅವಕಾಶವನ್ನು ನೀಡಲಾಗುತ್ತದೆ. 250 ಇಂದ 1.5 ಲಕ್ಷ ರೂಪಾಯಿಗಳ ವರೆಗೂ ಕೂಡ ವರ್ಷಕ್ಕೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇದರ ಅವಧಿ 15 ವರ್ಷ ಆಗಿರುತ್ತದೆ ಹಾಗೂ ಹೆಣ್ಣು ಮಗು 21 ವರ್ಷವನ್ನು ಪೂರೈಸಿದಾಗ ಇದನ್ನ ನೀವು ಪಡೆದುಕೊಳ್ಳಬಹುದಾಗಿದೆ.

ಪ್ರತಿ ತಿಂಗಳೂ ನೀವು ಈ ಯೋಜನೆಯಲ್ಲಿ ಹತ್ತು ಸಾವಿರ ಹಣ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ಗೊತ್ತಾ?

ನಿಮ್ಮ ಹೆಣ್ಣು ಮಗು ಒಂದು ವರ್ಷ ಇದ್ದಾಗ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 15 ವರ್ಷಗಳ ಕಾಲ 10,000 ಹಣವನ್ನು ಹೂಡಿಕೆ ಮಾಡಿಕೊಂಡು ಬಂದರೆ ನೀವು ಒಟ್ಟಾರೆಯಾಗಿ 18 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ ರೀತಿಯಲ್ಲಿ ಆಗುತ್ತದೆ. ಇನ್ನು ಈ ಯೋಜನೆಗೆ ಇರುವಂತಹ 8.2% ಬಡ್ಡಿ ದರದ ರಿಟರ್ನ್ ಲೆಕ್ಕಾಚಾರದಲ್ಲಿ ನೀವು ಮಾಡಿರುವಂತಹ ಹೂಡಿಕೆ ಮೇಲೆ ಒಟ್ಟಾರೆಯಾಗಿ 55.46 ಲಕ್ಷ ರೂಪಾಯಿ ಹಣವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುತ್ತೀರಿ. ಈ ಹಣವನ್ನು ನೀವು ನಿಮ್ಮ ಮಗಳ ಉನ್ನತ ವ್ಯಾಸಂಗ ಹಾಗೂ ಮದುವೆಗೆ ಖರ್ಚು ಮಾಡಬಹುದಾಗಿದೆ. ಈ ಯೋಜನೆ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ಪ್ರೀಮಿಯಂ ಮೇಲೆ ಕೂಡ ಯಾವುದೇ ಟ್ಯಾಕ್ಸ್ ಕಟ್ಟಬೇಕಾಗಿಲ್ಲ ಹಾಗೂ ಇದರಿಂದ ಬಂದಿರುವಂತಹ ಆದಾಯದ ಮೇಲೆ ಕೂಡ ತೆರಿಗೆ ರಿಯಾಯಿತಿ ದೊರಕುತ್ತದೆ.

Comments are closed.