Gruhalakshmi:ರಾಜ್ಯದ ಜನತೆಗೆ ಶಾಕ್ ಕೊಟ್ಟ ಸರ್ಕಾರ – ಇನ್ನು ಮುಂದೆ ಇವರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ

Gruhalakshmi:ಕಳೆದ ಬಾರಿ ಅಧಿಕಾರಿಕ್ಕೆ ಬಂದಂತಹ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾತನಾಡುವುದಾದರೆ ಕಳೆದ ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗಿ ಪ್ರತಿ ತಿಂಗಳು ಈ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಂಡಿರುವಂತಹ ಮಹಿಳೆಯರಿಗೆ 2000 ರೂಪಾಯಿ ಹಣವನ್ನ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡೈರೆಕ್ಟ್ ಟ್ರಾನ್ಸ್ಫರ್ ಮೂಲಕ ವರ್ಗಾವಣೆ ಮಾಡಿ ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸುವುದಕ್ಕೆ ಒಂದು ಚಿಕ್ಕಮಟ್ಟದಲ್ಲಿ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಸರ್ಕಾರ ಮಾಡಿಕೊಂಡು ಬರ್ತಾ ಇದೆ.

ಮನೆಯ ನಿರ್ವಹಣೆಗೆ ಮನೆಯ ಯಜಮಾನಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ಕೆಲಸವನ್ನು ಮಾಡಲಾಗಿದೆ. ರಾಜ್ಯದ ಮಹಿಳೆಯರು ಕೂಡ ಈ ಯೋಜನೆಯಿಂದಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತಿರುವುದು ಕೂಡ ಕಂಡುಬರುತ್ತದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿರುವುದರಿಂದಾಗಿ ನಿಮ್ಮ ಮನೆಯ ಒಡತಿ ಅಂದರೆ ನಿಮ್ಮ ಮನೆಯಲ್ಲಿ ಅಮ್ಮ ಅಥವಾ ಯಾರಾದ್ರೂ ಇದ್ರೆ ಅವರ ಹೆಸರಿನಲ್ಲಿ ಕೂಡ ಈ ಯೋಜನೆಯ ನೀವು ಪ್ರಾರಂಭ ಮಾಡಬಹುದಾಗಿದ್ದು ಹತ್ತಿರದಲ್ಲಿರುವಂತಹ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಏಳು ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಈ ಯೋಜನೆಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಂಡು ಫಲಾನುಭವಿಗಳಾಗಿ ತಿಂಗಳಿಗೆ ರೂ.2000 ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ನಿಮಗೆ ನೀಡುವಂತಹ ಎಪಿಎಲ್ ಅಂತ್ಯೋದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದ ಮಹಿಳಾ ಒಡತಿಗೆ ಮಾತ್ರ ಈ ಯೋಜನೆಯನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ. ಒಂದು ಕುಟುಂಬದಲ್ಲಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ ಅನ್ನೋದನ್ನ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಇನ್ಮುಂದೆ ಇವರಿಗೆ ಗ್ರಹಲಕ್ಷ್ಮಿ ಯೋಜನೆ ಕ್ಯಾನ್ಸಲ್!

ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವಂತಹ ಕುಟುಂಬದಲ್ಲಿ ಗಂಡ ಅಥವಾ ಹೆಂಡತಿ ಯಾರಾದರೂ ಟ್ಯಾಕ್ಸ್ ಪಾವತಿ ಮಾಡ್ತಾ ಇದ್ರೆ ಅವರಿಗೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಸಿಗುವುದಿಲ್ಲ. ಇನ್ನೊಂದು ವೇಳೆ GST ರಿಟರ್ನ್ ಅನು ನಿಮ್ಮ ಮನೆಯಲ್ಲಿ ಯಾರಾದರೂ ಸಲ್ಲಿಸುತ್ತ ಇದ್ದರೆ ಅವರಿಗೂ ಕೂಡ ಇನ್ಮುಂದೆ ರಾಜ್ಯ ಸರ್ಕಾರದಿಂದ ನೀಡಲಾಗುವಂತಹ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಗಳ ಮಾಶಾಸನ ಸಿಗುವುದಿಲ್ಲ ಎನ್ನುವುದನ್ನ ಸರ್ಕಾರ ಖಚಿತಪಡಿಸಿದೆ. ಮನೆಯಲ್ಲಿ ಸರ್ಕಾರಿ ಕೆಲಸದವರು ಇದ್ದರೂ ಕೂಡ ಅವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ ಎನ್ನುವಂತಹ ಮಾಹಿತಿ ದೊರಕಿದ್ದು ಮುಂದಿನ ದಿನಗಳಲ್ಲಿ ಇಂತಹ ಫಲಾನುಭವಿಗಳು ಲಿಸ್ಟ್ ನಲ್ಲಿ ಇದ್ದರೆ ಅವರನ್ನು ಲಿಸ್ಟಿನಿಂದ ಕೆಲಸವನ್ನು ಮಾಡಲಾಗುತ್ತದೆ.

Comments are closed.