UPI Payment: ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಸುಲಭವಾಗಿ ಯುಪಿಐ ಪೇಮೆಂಟ್ ಮಾಡಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

UPI Payment: ಕೆಲವು ವರ್ಷಗಳ ಹಿಂದೆ ಹೋದರೆ ಚಿಕ್ಕ ಪುಟ್ಟ ವಸ್ತುಗಳೇ ಇರಲಿ ಅಥವಾ ದೊಡ್ಡ ಪ್ರಮಾಣದಲ್ಲಿ ನಾವು ಯಾವುದಾದರೂ ವಸ್ತುವನ್ನು ಖರೀದಿಸಿದರೆ ಅದಕ್ಕೆ ಕ್ಯಾಶ್ ಅನ್ನು ನಾವು ನೀಡ್ತಿದಿದ್ದು. ಆದರೆ ಈಗ ಸಮಯ ಬದಲಾಗಿದೆ ಹಾಗೂ ಚಿಕ್ಕ ವಸ್ತುಗಳಿಗೂ ಕೂಡ ನಾವು ಯುಪಿಐ ಪೇಮೆಂಟ್ ಮಾಡೋದು ಅಭ್ಯಾಸ ಆಗಿಬಿಟ್ಟಿದೆ. 2016ರಲ್ಲಿ ಯುಪಿಐ ಅನ್ನು ಅಧಿಕೃತವಾಗಿ ಲಾಂಚ್ ಮಾಡಲಾಗಿತ್ತು. ಇವತ್ತಿನವರೆಗೂ ಸಾಕಷ್ಟು ಬದಲಾವಣೆಗಳ ಜೊತೆಗೆ ಆನ್ಲೈನ್ ಪೇಮೆಂಟ್ ಸಿಸ್ಟಮ್ ಅನ್ನೋದು ಇದರ ಸುತ್ತಮುತ್ತ ಸಾಕಷ್ಟು ಬೆಳೆದಿದೆ. ಇನ್ನು ಸಾಕಷ್ಟು ಕಡೆಗಳಲ್ಲಿ ನಮ್ಮ ಭಾರತ ದೇಶದಲ್ಲಿ ಇಂಟರ್ನೆಟ್ ಸೇವೆ ಇಲ್ಲದೆ ಇರಬಹುದು ಅಲ್ಲಿಯೂ ಕೂಡ NPCI ಸಂಸ್ಥೆ UPI LITE X ಅನ್ನು ಲಾಂಚ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.

UPI LITE ಬಗ್ಗೆ ಇಲಿದೆ ನೋಡಿ ಸಂಪೂರ್ಣ ಮಾಹಿತಿ.

ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದಂತಹ ಸ್ಥಳಗಳಲ್ಲಿ ಕೂಡ ಇದನ್ನು ಬಳಸಿಕೊಳ್ಳುವ ಮೂಲಕ ನೀವು ಹಣದ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ನೆಟ್ವರ್ಕ್ ಪ್ರಾಬ್ಲಮ್ ಇರುವಂತ ಸ್ಥಳಗಳಲ್ಲಿ ಖಂಡಿತವಾಗಿ ಈ ಹೊಸ ಅಡ್ವಾನ್ಸ್ ಟೆಕ್ನಾಲಜಿ ಸಾಕಷ್ಟು ಸಹಾಯಕಾರಿಯಾಗಿ ಕಾಣಿಸಿಕೊಳ್ಳಲಿದೆ. ಬೇರೆಯೆಲ್ಲ ಪೇಮೆಂಟ್ ಫ್ಲ್ಯಾಟ್ ಫಾರ್ಮ್ ಗಳಿಗೆ ಹೋಲಿಸಿದರೆ ಇದು ಅತ್ಯಂತ ವೇಗವಾಗಿ ಪೇಮೆಂಟ್ ಮಾಡುವಂತಹ ಪ್ಲಾಟ್ ಫಾರ್ಮ್ ಆಗಿದೆಯೆನ್ನಬಹುದಾಗಿದೆ.

ಇದರ ಲಾಭಗಳು!

ಇದರ ಮೂಲಕ ಆಫ್ಲೈನ್ ಪೇಮೆಂಟ್ ಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಫ್ಲೈಟ್ ಅಥವಾ ಯಾವುದೇ ರೀತಿಯ ನೆಟ್ವರ್ಕ್ ಕಡಿಮೆ ಇರುವ ಅಥವಾ ನೆಟ್ವರ್ಕ್ ಇಲ್ಲದೇ ಇರುವಂತಹ ಸ್ಥಳಗಳಲ್ಲಿ ಕೂಡ ಈ ಮೂಲಕ ಪೇಮೆಂಟ್ ಗಳನ್ನು ಮಾಡಬಹುದಾಗಿದೆ. ಇದರಲ್ಲಿ ಪೇಮೆಂಟ್ ಯಶಸ್ವಿಯಾಗಿ ಪೂರ್ತಿಯಾಗುತ್ತದೆ ಯಾಕೆಂದರೆ ನೆಟ್ವರ್ಕ್ ಇಲ್ಲದೆ ಕೂಡ ನೀವು ಇದನ್ನು ಟ್ರಾನ್ಸಾಕ್ಷನ್ ಮಾಡಬಹುದಾಗಿದೆ.

ಇದನ್ನ ಬಳಕೆ ಮಾಡುವುದು ಹೇಗೆ?

BHIM ಅಪ್ಲಿಕೇಶನ್ ನಲ್ಲಿ ನೀವು UPI Lite ಅನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ. NFC ಸಪೋರ್ಟ್ ಆಗಿರುವಂತಹ ಆಂಡ್ರಾಯ್ಡ್ ಫೋನ್ ಅನ್ನು ಹಣವನ್ನು ಕಳುಹಿಸುವವರು ಹಾಗೂ ಪಡೆಯುವವರು ಇಬ್ಬರೂ ಕೂಡ ಹೊಂದಿರಬೇಕಾಗುತ್ತದೆ.

UPI Lite ಫೀಚರ್ ಅನ್ನು ಫೋನ್ನಲ್ಲಿ ಆನ್ ಮಾಡೋ ಬಗೆ!

  • BHIM ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ನಂತರ ನಿಮಗೆ ಅಲ್ಲಿ UPI Lite X Balance ಎನ್ನುವಂತಹ ಆಪ್ಷನ್ ಅನ್ನು ನಿಮಗಾಗಿ ನೀಡಲಾಗಿರುತ್ತದೆ.
  • Enable ಬಟನ್ ಅನ್ನು ಅಲ್ಲಿ ಕ್ಲಿಕ್ ಮಾಡುವ ಮೂಲಕ ಆಫ್ಲೈನ್ ಪೇಮೆಂಟ್ ಟ್ರಾನ್ಸಾಕ್ಷನ್ ಗಾಗಿ ನೀವು ಒಪ್ಪಿಗೆ ನೀಡಿದಂತಾಗುತ್ತದೆ.
  • ಇದಾದ ನಂತರ ನಿಮ್ಮ UPI Lite ಅಕೌಂಟ್ಗೆ ಹಣವನ್ನು ಆಡ್ ಮಾಡಬೇಕಾಗುತ್ತದೆ. ಹೊಸ ಪಿನ್ ನಂಬರ್ ಅನ್ನು ಕೂಡ ಅದಕ್ಕೆ ಸೆಟ್ ಮಾಡಬೇಕಾಗುತ್ತೆ.
  • ನಿಮ್ಮ ಖಾತೆಗೆ ಹಣ ಬರುತ್ತಿದ್ದಂತೆ ಅದನ್ನು ಟ್ರಾನ್ಸಾಕ್ಷನ್ ಮಾಡೋದಕ್ಕೆ ಬಳಸಿಕೊಳ್ಳಬಹುದಾಗಿದೆ.

Comments are closed.