Post Office: ಪೋಸ್ಟ್ ಆಫೀಸ್ ನಿಂದ ಬಂತು ನೋಡಿ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್; ಕೆಲಸಕ್ಕಾಗಿ ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್!

Post Office: ನಮ್ಮ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗದಷ್ಟು ನಿರುದ್ಯೋಗದ ಸಮಸ್ಯೆ ಕೂಡ ಹೆಚ್ಚಾಗ್ತಾ ಇದೆ. 150 ಕೋಟಿ ಸಮೀಪ ಇರುವಂತಹ ಜನಸಂಖ್ಯೆಗೆ ಪೂರ್ಣ ರೀತಿಯಲ್ಲಿ ಉದ್ಯೋಗವನ್ನು ಹಂಚಿಕೆ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಹಾಗಿದ್ರೂ ಕೂಡ ಸರ್ಕಾರಿ ಸಂಸ್ಥೆಗಳಲ್ಲಿ ಆಗಾಗ ಬರುವಂತಹ ಕೆಲವೊಂದು ಉದ್ಯೋಗ ಅವಕಾಶಗಳನ್ನು ನಿರುದ್ಯೋಗಿಗಳು ಅದರಲ್ಲೂ ವಿಶೇಷವಾಗಿ ಅರ್ಹರಾಗಿರುವಂತಹ ನಿರುದ್ಯೋಗಿಗಳು ಬಳಸಿಕೊಂಡು ಅದರಿಂದ ಜೀವನ ಕಟ್ಟಿಕೊಳ್ಳಬಹುದಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಅಂಚೆ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವಂತಹ ಸಂಸ್ಥೆ ಆಗಿದೆ. ಈ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಈಗ ಜಾಬ್ ಆಫರ್ ಅನ್ನು ನೀಡಲಾಗಿದ್ದು ಬನ್ನಿ ಯಾರೆಲ್ಲಾ ಈ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಹಾಗೂ ಈ ಉದ್ಯೋಗದ ಮಾಹಿತಿಯ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೋಸ್ಟ್ ಆಫಿಸ್ ಇಲಾಖೆಯಿಂದ ಅರ್ಜಿ ಆಹ್ವಾನ!

ಭಾರತೀಯ ಅಂಚೆ ಇಲಾಖೆಯಿಂದ 5 ಹುದ್ದೆಗಳಿಗೆ ಅರ್ಜಿ ನೀಡುವಂತೆ ಆಹ್ವಾನ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಎಮ್‌ಟಿಎಸ್, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಡ್ರೈವರ್ ಹಾಗೂ ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಪೋಸ್ಟ್ ಆಫೀಸ್ ಇಲಾಖೆ ಆಹ್ವಾನ ನೀಡಿದ್ದು ಒಂದು ವೇಳೆ ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಿ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಇರುವಂತಹ ಹುದ್ದೆಗಳ ಸಂಖ್ಯೆ ಎಷ್ಟು?

  • ಎಂ ಟಿ ಎಸ್ ನಲ್ಲಿ 12,141 ಹುದ್ದೆಗಳು ಖಾಲಿ ಇವೆ
  • ಪೋಸ್ಟ್ ಮ್ಯಾನ್ ಕೆಲಸಕ್ಕೆ 6174 ಹುದ್ದೆಗಳು ಖಾಲಿ ಇವೆ ಎಂಬುದಾಗಿ ತಿಳಿದು ಬಂದಿದೆ
  • ಮೇಲ್ ಗಾರ್ಡ್ ಹುದ್ದೆಗೆ 11025 ಹುದ್ದೆಗಳು ಖಾಲಿ ಇವೆ
  • ಡ್ರೈವರ್ ಹುದ್ದೆಗೆ 871 ಹುದ್ದೆಗಳು ಖಾಲಿ ಇವೆ
  • ಗ್ರಾಮೀಣ ಡಾಕ್ ಸೇವೆ ಹುದ್ದೆಗೆ 1231 ಹುದ್ದೆಗಳು ಖಾಲಿ ಇವೆ

ಇದನ್ನು ಅತಿ ಶೀಘ್ರದಲ್ಲಿಯೇ ಜಾರಿಗೆ ತರಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಅಧಿಕೃತವಾಗಿ ಪೋಸ್ಟ್ ಆಫೀಸ್ ಇಲಾಖೆ ಇನ್ನೂ ಕೂಡ ಯಾವ ದಿನಾಂಕದಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ ಎನ್ನುವ ಮಾಹಿತಿಯನ್ನು ನೀಡಿಲ್ಲ. https://indiapost.gov.in ಇದು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದ್ದು ನೀವು ಈ ಕೆಲಸಕ್ಕಾಗಿ ಭಾರತೀಯ ಅಂಚೆ ಇಲಾಖೆ ಯಾವಾಗ ಅರ್ಜಿ ದಿನಾಂಕವನ್ನು ಪ್ರಾರಂಭಿಸಬಹುದು ಎನ್ನುವಂತಹ ಮಾಹಿತಿಯನ್ನು ಮುಂಚಿತವಾಗಿ ಇಲ್ಲಿ ಹೋಗಿ ತಿಳಿದುಕೊಳ್ಳಬಹುದಾಗಿದೆ.

ಮಾನ್ಯತೆ ಪಡೆದಿರುವಂತಹ ವಿದ್ಯಾಸಂಸ್ಥೆಯಲ್ಲಿ ಎಂಟರಿಂದ ಹನ್ನೆರಡನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿರುವಂತಹ ಯಾರು ಬೇಕಾದರೂ ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವಂತಹ ಅರ್ಹತೆಯನ್ನು ಹೊಂದಿರುತ್ತಾರೆ ಎಂಬುದಾಗಿ ಭಾರತೀಯ ಅಂಚೆ ಇಲಾಖೆ ತಿಳಿಸಿದೆ. ಇನ್ನು ವಯೋಮಿತಿಯ ಬಗ್ಗೆ ಮಾತನಾಡುವುದಾದರೆ 18ರಿಂದ 28 ವರ್ಷದ ನಡುವಿನ ಜನರಿಗೆ ಈ ಕೆಲಸ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕದ ವಿವರ

  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ ಎಂಬುದಾಗಿ ಪೋಸ್ಟ್ ಆಫೀಸ್ ಇಲಾಖೆ ಅಧಿಕೃತವಾಗಿ ತಿಳಿಸಿದೆ
  • ಇನ್ನುಳಿದ ವರ್ಗಗಳು ಅರ್ಜಿ ಸಲ್ಲಿಸುವುದಕ್ಕೆ ನೂರು ರೂಪಾಯಿಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ.

Comments are closed.