Airtel Plans Kannada: ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಏರ್ಟೆಲ್: ಗ್ರಾಹಕರಿಗೆ ಜೀವನದಲ್ಲಿ ಮೊದಲ ಬಾರಿಗೆ ಈ ಸಿಹಿ ಸುದ್ದಿ. ಏನಾಗಿದೆ ಗೊತ್ತೇ?

Airtel Plans Kannada: ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ, ಅತ್ಯುತ್ತಮ ಸೇವೆಗಳನ್ನು ಬಜೆಟ್ ಫ್ರೆಂಡ್ಲಿ ಆಗಿ ನೀಡುವ ಟೆಲಿಕಾಂ ಕಂಪನಿಗಳಲ್ಲಿ ಒಂದು ಏರ್ಟೆಲ್ ಸಂಸ್ಥೆ. ಉತ್ತಮ ಸೇವೆಗಳನ್ನು ಗ್ರಾಹಕರಿಗೆ ನೀಡುವ ಏರ್ಟೆಲ್ ಸಂಸ್ಥೆಯು ಈಗ 5ಜಿ ಸೇವೆ ವಿಚಾರದಲ್ಲಿ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಆ ಸುದ್ದಿ ಕೇಳಿ ಗ್ರಾಹಕರು ಕೂಡ ಸಂತೋಷ ಪಟ್ಟಿದ್ದಾರೆ. 2022ರ ಅಕ್ಟೋಬರ್ 1ರಿಂದ ಏರ್ಟೆಲ್ ಸಂಸ್ಥೆ 5ಜಿ ಸೇವೆಯನ್ನು ಶುರು ಮಾಡಿದೆ. ಬೆಂಗಳೂರು ಮುಂಬೈ, ಕೊಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಶುರುವಾಗಿದೆ.

ಇದೀಗ ಏರ್ಟೆಲ್ ತಿಳಿಸಿರುವ ಮಾಹಿತಿ ಏನೆಂದರೆ, 5ಜಿ ಮೊಬೈಲ್ ನಲ್ಲಿ 4ಜಿ ಪ್ಲಾನ್ ಬಳಸುತ್ತಿರುವ ಗ್ರಾಹಕರು ಅನಿಯಮಿತ 5ಜಿ ಸೇವೆಯನ್ನು ಆನಂದಿಸುತ್ತಾರೆ. ಈ ವಿಚಾರದಲ್ಲಿ ಜಿಯೋ ದಾರಿಯಲ್ಲೇ ಏರ್ಟೆಲ್ ಸಹ ನಡೆಯುತ್ತಿದೆ. ಈ ಹಿಂದೆ ಜಿಯೋ ಸಂಸ್ಥೆಯು ತಮ್ಮ ಗ್ರಾಹಕರು 234 ರೂಪಾಯಿಗಿಂತ ಹೆಚ್ಚಿನ ಪ್ಲಾನ್ ರೀಚಾರ್ಜ್ ಮಾಡಿಸಿರುವ ಗ್ರಾಹಕರು ಅನಿಯಮಿತ 5ಜಿ ಸೇವೆಗಳನ್ನು ಆನಂದಿಸಬಹುದು ಎಂದು ಮಾಹಿತಿ ನೀಡಿತ್ತು. ಇದೀಗ ಏರ್ಟೆಲ್ ಕೂಡ ಅದೇ ರೀತಿ ಹೇಳಿದೆ, ಆದರೆ 5ಜಿ ಸೇವೆ ಪಡೆಯಲು ಎಷ್ಟು ಮೊತ್ತಕ್ಕೆ ರೀಚಾರ್ಜ್ ಮಾಡಿಸಿರುವ ಗ್ರಾಹಕರಿಗೆ ಸಾಧ್ಯ ಎಂದು ಏರ್ಟೆಲ್ ಸಂಸ್ಥೆ ತಿಳಿಸಿಲ್ಲ.

ಪ್ರಸ್ತುತ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ, ಅತ್ಯದ್ಬುತ ಸ್ಪೀಡ್ ನ 5ಜಿ ಡೇಟಾವನ್ನು ಪ್ರಯಾಣಿಕರು ಅನಂದಿಸುತ್ತಿದ್ದಾರೆ. ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಆಗಮನ, ನಿರ್ಗಮನ, ಟರ್ಮಿನಲ್ ಗಳು, ಲಾಂಜ್ ಗಳು, ಬೋರ್ಡಿಂಗ್ ಗೇಟ್ ಗಳು, ಭದ್ರತೆಯ ಗೇಟ್ ಗಳು, ಬ್ಯಾಗೇಲ್ ಕ್ಲೇಮ್ ಮಾಡುವ ಬೆಲ್ಟ್ ಮತ್ತು ಇನ್ನಿತರ ಸೇವೆಗಳು ಇರುವ ಕಡೆ, 5ಜಿ ಸೇವೆಯನ್ನು ಆನಂದಿಸಬಹುದು. ಬೆಂಗಳೂರು ಏರ್ ಪೋರ್ಟ್ ನ ಎರಡನೇ ಟರ್ಮಿನಲ್ ನಲ್ಲಿ ಏರ್ಟೆಲ್ ಗ್ರಾಹಕರು, ಹೈಡೆಫಿನಿಷನ್ ಗೇಮಿಂಗ್, ವಿಡಿಯೋ ಸ್ಟ್ರೀಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋ ಅಪ್ಲೋಡಿಂಗ್ ಇವುಗಳನ್ನು ಸೂಪರ್ ಫಾಸ್ಟ್ ಸ್ಪೀಡ್ ನಲ್ಲಿ ಮಾಡಬಹುದು ಎಂದು ಸಂಸ್ಥೆಯ CT0 Randeep Sekhon ಅವರು ತಿಳಿಸಿದ್ದಾರೆ. ಏರ್ಟೆಲ್ ನಲ್ಲಿ 5ಜಿ ಸೇವೆ ಶುರುವಾಗಿ ಕೇವಲ 1 ತಿಂಗಳಿನಲ್ಲಿ 1ಮಿಲಿಯನ್ ಗ್ರಾಹಕರಾಗಿದ್ದರೆ. ಮುಂಬರುವ ದಿನಹಳಲ್ಲಿ ಇನ್ನು ಹೆಚ್ಚು ಜನರು 5ಜಿ ಗ್ರಾಹಕರಾಗಲಿದ್ದಾರೆ..

Comments are closed.