Government Job: SSLC ಪಾಸ್ ಆಗಿದ್ದರೆ ಸಾಕು, ನಿಮ್ಮ ಊರಿನಲ್ಲಿಯೇ ಅಂಗನವಾಡಿಯಲ್ಲಿ ಕೆಲಸಕ್ಕೆ ಸೇರಿ, ಸರ್ಕಾರೀ ನೌಕರಿ ಪಡೆಯಿರಿ. ಹೇಗೆ ಅಪ್ಲೈ ಮಾಡಬೇಕು ಗೊತ್ತೇ??

Government Job: ನಾನು 1೦ನೇ ತರಗತಿ (10th Class) ಅಥವಾ ಎಸ್ಎಸ್ಎಲ್ಸಿ (SSLC) ವರೆಗೆ ಮಾತ್ರ ಓದಿದ್ದೇನೆ. ನನಗೆ ಯಾವುದೇ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ನೀವು ಭಾವಿಸುವುದು ಬೇಡ. ಇದೀಗ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯು (Women and Child Development) ಅಂಗನವಾಡಿ ಕಾರ್ಯಕರ್ತೆ (Anganwadi worker) ಅಥವಾ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಕೆಲಸ ಮಾಡಲು ಆಸಕ್ತರು ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು. ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
ಈ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ಸೈಟ್ ಗೆ (Website) ಭೇಟಿ ನೀಡಬೇಕು. ಈಗಾಗಲೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದಲ್ಲಿ ಒಟ್ಟು 5೦೦ ಹುದ್ದೆಗಳು (500 Jobs) ಖಾಲಿ ಇದ್ದು, ಜನವರಿ 18 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: Winter Health Care: ಹೃದಯಾಘಾತ ಆಗಬಾರದು ಎಂದರೆ, ಇದೊಂದು ಸೊಪ್ಪು ಸಾಕು. ಹೀಗೆ ಮಾಡಿ ಕುಡಿದರೆ, ಜನ್ಮದಲ್ಲಿ ಹೃದಯಾಘಾತ ಬರಲ್ಲ ನೋಡಿ!

ಅಭ್ಯರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 1೦ನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು. ಸಾಮಾನ್ಯ ವರ್ಗದವರಾದರೆ 21 ವರ್ಷದಿಂದ 4೦ ವರ್ಷದ ಒಳಗಿನವರು ಅರ್ಜಿಸಲ್ಲಿಸಬಹುದು. ಎಸ್ಸಿ, ಎಸ್ಟಿ, ವಿಧವೆಯರು, ವಿಚ್ಛೆದಿತರು, ವಿಶೇಷಚೇನರಾದರೆ ೪೫ ವರ್ಷದ ಒಳಗಿನವರಾಗಿರಬೇಕು.

ನೀವು ಭರ್ತಿ ಮಾಡಿದ ಅರ್ಜಿ (Application) ಯೊಂದಿಗೆ ಜನನ ಪ್ರಮಾಣಪತ್ರ ಅಥವಾ ಜನ್ಮದಿನಾಂಕ ಇರುವ ಎಸ್ಎಸ್ಎಲ್ಸಿ ಅಂಕಪಟ್ಟಿ, ವಾಸಸ್ಥಳ ದೃಢಿಕರಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮೀಸಲಾತಿ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಮೆರಿಟ್ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗಾದರೆ ಇನ್ಯಾಕೆ ತಡ, ನೀವೂ ಅರ್ಹರಾಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ. ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಿ!

anganwadi jobGov. Jobಅಂಗನವಾಡಿ ಕಾರ್ಯಕರ್ತೆ