Astrology Tips: ಈ 12ರಾಶಿಗಳಲ್ಲಿ ಯಾವ ರಾಶಿಯವರು ಯಾವ ಕೆಲಸ ಮಾಡಿದರೆ ಆ ಕೆಲಸ ಅವರ ಕೈಹಿಡಿಯುತ್ತದೆ ಗೊತ್ತೇ?

Astrology:ಮೇಷ ರಾಶಿ(Aries): ಈ ರಾಶಿಯವರಿಗೆ ಒಂದೇ ಕೆಲಸದಲ್ಲಿ ದೀರ್ಘಕಾಲ ಇರೋದಕ್ಕೆ ಸಾಧ್ಯವೇ ಇಲ್ಲ. ಆಗಾಗ ಕೆಲಸವನ್ನು ಬದಳಾಯಿಸುವ ಮನಸ್ಥಿತಿ ಉಳ್ಳವರು ಇವರು. ಚಾಲೆಂಜಿಂಗ್ ಆಗಿರುವ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.  ಮಾರ್ಕೆಟಿಂಗ್, ಪ್ರಾಜೆಕ್ಟ್ ಎಂಜಿನಿಯರಿಂಗ್, ಕಂಪೆನಿಗೆ ಹೊಸ ಪ್ರಾಜೆಕ್ಟ್ ಗಳ ಡೀಲಿಂಗ್, ಕ್ರೈಸಿಸ್ ಮ್ಯಾನೇಜ್​ಮೆಂಟ್ ಖಾತೆ, ಕಲ್ಲಿದ್ದಲು ಉದ್ದಿಮೆ, ಎಡ್ವೆಂಚರ್ ಗೈಡಿಂಗ್ ಇಂಥಹ ಕೆಲಸಗಳನ್ನು ಆಯ್ದುಕೊಳ್ಳುತ್ತಾರೆ. ಆರಾಮವಾಗಿ ಕೂತ ಕಡೆಯಲ್ಲಿ ಕುಳಿತು ಕೆಲಸ ಮಾಡುವ ಜನ ಇವರಲ್ಲ. ಇವರ ಮಾತುಗಾರಿಕೆಯಿಂದ ಇವರಿಗೆ ಮಿತ್ರರು ಎಷ್ಟೋ ಶತ್ರುಗಳೂ ಕೂಡ ಅಷ್ಟೇ ಇರುತ್ತಾರೆ. ವೃತ್ತಿಯ ಆರಂಭದಲ್ಲಿ ಯಶಸ್ಸಿಗಾಗಿ ಶ್ರಮಿಸಬೇಕಾಗುತ್ತದೆ.

ವೃಷಭ ರಾಶಿ(Taurus): ಇವರು ಏನೆ ಕೆಲಸ ಮಾಡಿದರೂ ಅದನ್ನು ಗುರುತಿಸಿ ಅದರ ಬಗ್ಗೆ ಇತರರು ಅಭಿಪ್ರಾಯಗಳನ್ನು ನೀಡಬೇಕು. ಇಲ್ಲವಾದಲ್ಲಿ ಸಿಟ್ಟು ನೆತ್ತಿಗೇರುತ್ತದೆ. ಸುಗಂಧ ದ್ರವ್ಯ, ಸೌಂದರ್ಯವರ್ಧಕಗಳ ಮಾರಾಟ, ಹಣಕಾಸು ಸಂಸ್ಥೆಗಳು, ಎನ್​ಜಿಒಗಳು, ಡೇರಿ, ಚಿತ್ರರಂಗದಲ್ಲಿ ಪ್ರೊಡಕ್ಷನ್ ವಿಭಾಗ, ಶಾಲೆ- ಕಾಲೇಜುಗಳಲ್ಲಿ ಆಡಳಿತ ವಿಭಾಗ ಮೊದಲಾದ ಕಡೆ ವೃಷಭ ರಾಶಿಯವರು ಕೆಲಸ ಮಾಡುತ್ತಾರೆ. ಇವರಿಗೆ ಇವರನ್ನ ಇವರೇ ಮಾರ್ಕೇಟಿಂಗ್ ಮಾಡಿಕೊಳ್ಳುವುದಕ್ಕೆ ಗೊತ್ತಿಲ್ಲ. ಹಾಗಾಗಿ ಸಣ್ಣ ಕೆಲಸವನ್ನು ಮಾಡಿದರೂ ಕೂದ ನನ್ನನ್ನು ಜನ ಗುರುತಿಸಬೇಕು ಎಂದು ಸುಮ್ಮನೇ ಹಲುಬುತ್ತಾರೆ. ಎತ್ತಿನಂತೆ ಸದಾ ಕೆಲಸ ಮಾಡುವುದೊಂದೇ ಗೊತ್ತು ಇವರಿಗೆ.

ಮಿಥುನ ರಾಶಿ (Gemini): ಒಂದೇ ಸಮಯಕ್ಕೆ ನೂರು ವಿಷಯಗಳನ್ನು ಯೋಚನೆ ಮಾಡುತ್ತಾರೆ. ಹಾಗಾಗಿ ಇವರು ಬೇಗ ಯಶಸ್ಸನ್ನು ಕೂಡ ಗಳಿಸುತ್ತಾರೆ. ಆದರೆ ತಮ್ಮ ಮಾತಿನಿಂದಲೇ ಮೇಲಧಿಕಾರಿಗಳ ಜತೆಗೆ ಜಗಳ ಮಾಡಿಕೊಳ್ಳುತ್ತಾರೆ. ಅಕೌಂಟೆಂಟ್, ಸಂಶೋಧಕರು, ಪತ್ರಕರ್ತರು, ಕೌನ್ಸೆಲಿಂಗ್, ಕೆರಿಯರ್ ಅಡ್ವೈಸರ್​ಗಳು, ಟ್ಯಾಕ್ಸ್ ಕನ್ಸಲ್ಟೆಂಟ್, ಆರ್ಕಿಟೆಕ್ಟ್ ಮೊದಲಾದ ಕ್ಷೇತ್ರದಲ್ಲಿ ಮಿಥುನ ರಾಶಿಯ ಜನ ಕೆಲಸ ಮಾಡುತ್ತಾರೆ. ತಲೆಯಲ್ಲಿ ಕೆಲಸದ ಬಗ್ಗೆ ನೂರೆಂಟು ಯೋಚನೆ ಇಟ್ಟುಕೊಂಡು ಇತರರನ್ನು ದೂರುವ ಸ್ವಭಾವ ಇವರದ್ದು. ಇದನ್ನೂ ಓದಿ: Garuda Purana:ಗರುಡ ಪುರಾಣದ ಪ್ರಕಾರ ಈ ವಸ್ತುಗಳನ್ನು ನೋಡೋದ್ರಿಂದ ಪುಣ್ಯ ಹಾಗೂ ಸಂಪತ್ತು ಪ್ರಾಪ್ತಿಯಾಗತ್ತೆ; ಯಾವ ವಸ್ತುಗಳು ಗೊತ್ತೇ?

ಕರ್ಕಾಟಕ ರಾಶಿ(Cancer): ವೃತ್ತಿ ಅಂತ ಬಂದ್ರೆ ಇದ್ದ ಬಿದ್ದ ಕೆಲಸಗಳಾನ್ನೇಲ್ಳಾ ಮೈಮೇಲೆ ಎಳೆದುಕೊಂಡು ತಾವೇ ಎಲ್ಲಾ ಕೆಲಸ ಮಾಡುತ್ತಾರೆ. ಕಚೇರಿಯ ಅವಧಿ ಮುಗಿದರೂ ಕೆಲಸ ಮಾಡುತ್ತಿರುತ್ತಾರೆ. ಉಪನ್ಯಾಸಕ,, ವಿಜ್ಞಾನಿಗಳು, ವೈದ್ಯರು, ಪರಿಸರಶಾಸ್ತ್ರಜ್ಞರು, ಸಿವಿಲ್ ಎಂಜಿನಿಯರ್​ಗಳು, ಬ್ಯಾಂಕ್ ಅಧಿಕಾರಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಈ ರಾಶಿಯವರು. ತಮ್ಮ ಮನಸ್ಸಿನಲ್ಲಿ ಏನಿದೆ ಎಂದು ಹೇಳಿಕೊಳ್ಳುವುದಿಲ್ಲ. ಬದಲಿಗೆ ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಹಾಗಾಗಿ ಈ ರಾಶಿಯವರು ಹೆಚ್ಚು ಕಡಿಮೆ ಒಬ್ಬಂಟಿಯಾಗಿಯೇ ಇರುತ್ತಾರೆ.

ಸಿಂಹ ರಾಶಿ(Leo): ಎಲ್ಲರ ಎದುರಿನಲ್ಲಿಯೂ ಗುರುತಿಸಿಕೊಳ್ಳಬೇಕು ಎನ್ನುವ ಸ್ವಭಾವ ಇವರದ್ದು. ತಮಗೆ ಗೊತ್ತಿರುವ ವಿದ್ಯೆಯನ್ನು ಬೆರೆಯವರಿಗೆ ಹೇಳಿಕೊಡಲು ಸ್ವಲ್ಪ ಹಿಂದೇಟು ಹಾಕುವ ಸ್ವಭಾವ ಇವರದ್ದು. ಸರ್ಕಾರದ ಉದ್ಯೋಗ, ಹೃದಯ ಹಾಗೂ, ಕಣ್ಣಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಇವರು ಕೆಲಸ ಮಾಡುತ್ತಾರೆ ಎನ್ನಬಹುದು.  ಸೋಷಿಯಲ್ ಮೀಡಿಯಾ ನೋಡಿಕೊಳ್ಳುವುದು, ಷೇರು ದಲ್ಲಾಳಿಗಳು, ರಾಜಕೀಯ ವ್ಯಕ್ತಿಗಳ ಸಲಹೆಗಾರರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಸಾಮಾನ್ಯವಾಗಿ ಸಿಂಹರಾಶಿಯವರೇ ಆಗಿರುತ್ತಾರೆ.

ಕನ್ಯಾ ರಾಶಿ(Virgo): ಈ ರಾಶಿಯವರಿಗಂತೂ ಎಲ್ಲವೂ ಸರಿಯಾಗಿರಬೇಕು. ಕೆಲಸದ ಅವಧಿಗೂ ಮೊದಲೇ ಮುಗಿಸುವ ಚಾಕಚಕ್ಯತೆ ಇವರಿಗಿದ್ದರೂ ಆ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯನ್ನು ನೀಡಿದ ಮೇಲೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಬೇಕು. ಮಧ್ಯದಲ್ಲಿ ಮೂಗು ತೂರಿಸಿದರೆ ಅವರು ಆ ಕೆಲಸ ಮಾಡುವುದೇ ಇಲ್ಲ. ಜಾಹಿರಾತು ಕಂಪನಿಗಳು, ಈವೆಂಟ್ ಮ್ಯಾನೇಜ್​ಮೆಂಟ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ, ಡೇಟಾ ಸೈನ್ಸ್ ಇಂತಹ ಕೆಲಸಗಳನ್ನು ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಪತ್ರಿಕಾ ಮಾಧ್ಯಮಗಳಲ್ಲಿ ಪುರವಣಿ ವಿಭಾಗದ ಹೆಡ್ ಆಗಿಯೂ, ಕಲಾವಿದರಾಗಿಯೂ ಇವರು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಈ ರಾಶಿಯವರು ದೀರ್ಘಕಾಲ ಒಂದೇ ವೃತ್ತಿ ಮಾಡಬಲ್ಲರು.

ತುಲಾರಾಶಿ(Libra):  ತಮ್ಮ ಸಂಭಾವನೆಗೆ ತಕ್ಕಷ್ಟು ಮಾತ್ರ ಕೆಲಸ ಮಾಡುವ ಜನ ಇವರು. ಹೆಚ್ಚಿನ ಮಾನ್ಯತೆ ಸಿಕ್ಕರೆ ಹೆಚ್ಚು ಕೆಲಸ ಮಾಡುತ್ತಾರೆ. ಇಲ್ಲವಾದರೆ ಇಲ್ಲ. ಪಕ್ಕಾ ಲೆಕ್ಖಾಚಾರದ ಮಂದಿ ಇವರು. ಮಾತು ಹಾಗೂ ಕೆಲಸ ಎರಡನ್ನೂ ಎಷ್ಟು ಬೇಕೋ ಅಷ್ಟು ಮಾತ್ರ ಮಾಡುತ್ತಾರೆ.  ಕಾನೂನು ಸೇವೆಗಳಲ್ಲಿ, ಐ.ಟಿ ವಿಭಾಗದಲ್ಲಿ, ಭಾರೀ ಯಂತ್ರಗಳ ನಿರ್ವಹಣೆ, ಬ್ಯಾಂಕ್​ಗಳಲ್ಲಿ ಸಾಗಾಟ, ಕರೆನ್ಸಿ ಮುದ್ರಣ, ಎಟಿಎಂಗಳ ನಿರ್ವಹಣೆ ಮೊದಲಾದ ಹಣಕಾಸು ಸಂಬಂಧಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಹೋಟೆಲ್ ಗಲ್ಲಿ ಶೇಫ್ ಆಗಿಯೂ ಕೂಡ ಕಾರ್ಯನಿರ್ವಹಿಸುತ್ತಾರೆ.  

ವೃಶ್ಚಿಕ ರಾಶಿ(Scorpio): ಇವರಿಗೆ ಅಪರಾಧ ವಿಭಾಗದಲ್ಲಿ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಇವರಿಗೆ ಇಷ್ಟ. ಇನ್ವೆಸ್ಟಿಗೇಟಿವ್ ಜರ್ನಲಿಸಂ, ಸ್ಟಿಂಗ್ ಆಪರೇಷನ್​ ನಂತಹ ಕೆಲಸದಲ್ಲಿಯೂ ಇವರು ಕೈಚಳಕ ‘ತೋರಿಸುತ್ತಾರೆ. ಇನ್ನು ಸೈನ್ಯವಾಗಿರಲಿ, ಪೊಲೀಸ್ ಇಲಾಖೆ, ರೆಸ್ಟೋರೆಂಟ್ ಮ್ಯಾನೇಜರ್, ಫೈನಾನ್ಸ್ ನೋಡಿಕೊಳ್ಳುವವರು, ಜನರಲ್ ಮ್ಯಾನೇಜರ್ ಇಂತಹ ಕೆಲಸಕ್ಕೆ ಇವರು ಸಿದ್ಧಹಸ್ತರು. ​ ಜೀವನದಲ್ಲಿ ಇವರಿಗೆ ಸುಲಭವಾಗಿ ಯಶಸ್ಸನ್ನು ಕಾಣುವುದಿಲ್ಲ. ಇನ್ನೇನು ಸೋಲುತ್ತೇನೆ ಅನ್ನುವಾಗ ಗೆಲುವು ಇವರ ಕೈ ಹಿಡಿಯುತ್ತದೆ.

ಧನು ರಾಶಿ (Sagittarius): ಹೊಂದಾಣಿಕೆಯ ಸ್ವಭಾವ ಇವರದ್ದು. ಹಾಗಾಗಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡುತ್ತಾರೆ. ಹಾಗೆಯೇ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸ್ಥಳಗಳಲ್ಲಿ ಕೆಲಸ ಮಾಡುವುದು ಈ ರಾಶಿಯವರಿಗೆ ಇಷ್ಟ. ವೈದ್ಯಕೀಯ ಕಾಲೇಜುಗಳಲ್ಲಿ ಆಡಳಿತಾಧಿಕಾರಿಗಳಾಗುವ ಸಾಧ್ಯತೆಯೂ ಇದೆ. ತಮಾಷೆಯ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಳ್ಳದೇ ಗಂಭೀರವಾಗಿ ತೆಗೆದುಕೊಳ್ಳುವ ಗುಣ ಇವರದ್ದು.  ಎಲ್ಲರೂ ತಮ್ಮನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ.

ಮಕರ ರಾಶಿ; (Capricorn): ಇವರು ದೊಡ್ಡ ಉದಾಸೀನದ ವ್ಯಕ್ತಿತ್ವ ಉಳ್ಲವರು. ಕೆಲಸದ ವಿಚಾರ ಬಂದಾಗ ಸಿಕ್ಕಾಪಟ್ಟೆ ಶ್ರಮ ಹಾಕುತ್ತಾರೆ. ಆದರೆ ಉಳಿದಂತೆ ಇವರು ಆಲಸಿಗಳು. ರಸ್ತೆ ನಿರ್ಮಾಣ, ಕಟ್ಟಡ, ಚರಂಡಿ ನಿರ್ಮಾಣ ಕಬ್ಬಿಣ, ಸಿಮೆಂಟ್ ಮಾರಾಟ ಮೊದಲಾದ ಕೆಲಸಗಳಲ್ಲಿ ಇವರು ಪರಿಣಿತರು. ತಾವು ಕೆಲಸ ಮಾಡುವ ಸಂಸ್ಥೆಯ ವ್ಯಾಪಾರ- ವ್ಯವಹಾರದಲ್ಲಿಯೂ ಭಾಗಿಆಗಿರುತ್ತಾರೆ. ಪ್ಲ್ಯಾನಿಂಗ್, ಆಡಳಿತ ವ್ಯವಹಾರಗಳು, ಬ್ಯಾಂಕಿಂಗ್ ವ್ಯವಹಾರ ಇವುಗಳಲ್ಲಿ ಮಕರ ರಾಶಿಯವರದ್ದು ಎತ್ತಿದ ಕೈ. ಇದನ್ನೂ ಓದಿ:ಮನೆಯಲ್ಲಿ ಆಮೆ ಮೂರ್ತಿ ಇದ್ದರೆ ಅದೃಷ್ಟ ಹುಡುಕಿಕೊಂಡು ಬರುತ್ತೆ ಗೊತ್ತಾ? ಆದರೆ ಸರಿಯಾದ ದಿಕ್ಕಿನಲ್ಲಿಯೇ ಇಡಬೇಕು!

ಕುಂಭ ರಾಶಿ(Aquarius): ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ ಇವರಿಗೆ. ಕೃಷಿ ಇಲಾಖೆ, ಮಾರುಕಟ್ಟೆಗಳಲ್ಲಿ ಉದ್ಯೋಗ ಮಾಡುತ್ತಾರೆ. ಇತರರ ಮಾತಿಗೆ ಇವರು ಕಿವಿಗೊಡುವುದಿಲ್ಲ. ತಮ್ಮದೇ ಚೌಕಟ್ಟಿನಲ್ಲಿ ಬದುಕುತ್ತಾರೆ. ರಿಯಲ್ ಎಸ್ಟೇಟ್ ಕಂಪೆನಿಗಳಲ್ಲೂ ಇವರು ಕೆಲಸ ಮಾಡುವ ಸಾಧ್ಯತೆ ಇದೆ. ಕೆಲವೊಮ್ಮೆ ಸಿಕ್ಕಿರುವ ಅವಕಾಶಗಳು ಇವರ ಕೈತಪ್ಪಿ ಹೋಗುತ್ತದೆ.

ಮೀನ ರಾಶಿ (Pisces): ಏರ್​ಫೋರ್ಸ್, ನೇವಿಯಲ್ಲಿ ಮೀನ ರಾಶಿಯವರು ಕೆಲಸ ಮಾಡುತ್ತಾರೆ. ವೈಟ್ ಕಾಲರ್ ಹುದ್ದೆಗಳು ಇವರಿಗೆ ಫಿಟ್ ಆಗುತ್ತವೆ. ಈ ರಾಶಿಯವರಿಗೆ ವಿದೇಶಗಳಲ್ಲಿ ಪರ್ಮನೆಂಟ್ ಇರುವ ಉದ್ಯೋಗಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಯಾರ ಮಾತಿಗೂ ಇವರು ಸಿಕ್ಕಿಹಾಕಿಕೊಳ್ಳುವ ಜಾಯಮಾನದವರಲ್ಲ. ಇವರಿಗೆ ಜವಾಬ್ದಾರಿ ಕಡಿಮೆ ಎಂದು ಜನ ಭಾವಿಸುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೀನ ರಾಶಿಯವರು ಉದ್ಯೋಗ ಮಾಡುತ್ತಾರೆ.

12 zodiac signs12 ರಾಶಿಗಳುAstrologyjobದ್ವಾದಶ ರಾಶಿಗಳ ಫಲ