Lifestyle: ಒತ್ತಡದ ಬದುಕು ನಡೆಸುತ್ತಿದ್ದೀರಾ? ಆಹಾರ ಸವಿಯೋದಕ್ಕೂ ಟೈಮ್ ಇಲ್ವಾ? ಹಾಗಾದ್ರೆ ಈ ರೀತಿ ಸಲಾಡ್ ಟ್ರೈ ಮಾಡಿ; ಆರೋಗ್ಯವಾಗಿಯಾದ್ರೂ ಇರಬಹುದು!

Lifestyle:ಇಂದು ಬಹುತೇಕ ಎಲ್ಲರೂ ಒತ್ತಡದ ಬದುಕನ್ನೇ ನಡೆಸುತ್ತಿದ್ದಾರೆ. ಸದಾ ಟೆನ್ಶನ್, ಪುರುಸೋತ್ತಿಲ್ಲದ ಕೆಲಸ, ಅದರ ನಡುವೆ ಟ್ರಾಫಿಕ್, ಮನೆಯ ಜಂಜಾಟಗಳು, ಒಟ್ಟಿನಲ್ಲಿ ಹೊಟ್ತೆಗೆ ಹಿಟ್ಟು ತಿನ್ನೋದಕ್ಕೂ ಪುರುಸೋತ್ತೇ ಇರಲ್ಲ. ಇದರಿಂದ ಸುಲಭವಾಗಿ ಆರೊಗ್ಯ ಕೈಕೊಡತ್ತೆ. ಆರೋಗ್ಯವೇ ಸರಿ ಇಲ್ಲದಿದ್ದರೆ ಎಷ್ಟು ಕೆಲಸ ಮಾಡಿ ಏನು ಪ್ರಯೋಜನ ಅಲ್ವೇ?

ಹೌದು, ಒತ್ತಡದ ಬದುಕಿನಿಂದ ಹೊರಬರುವುದು ಅಷ್ಟು ಸುಲಭವಲ್ಲ. ಯಾಕಂದ್ರೆ, ನಮ್ಮ ಕಮಿಟ್ಮೆಂಟ್ ಗಳಿಂದಾಗಿ ಕೆಲಸ ಮಾಡಲೇಬೇಕು. ಈ ನಡೂವೆ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಯಾವಾಗಲೂ ಪೂರ್ಣ ಆಹಾರಗಳನ್ನು ಸಿದ್ಧಪಡಿಸಿಕೊಂಡು ತಿನ್ನಲು ಸಾಧ್ಯವಾಗದೇ ಇದ್ದಲ್ಲಿ ಸುಲಭವಾಗಿ ಆರೋಗ್ಯಕರವಾದ ಸಲಾಡ್ ಗಳನ್ನು ಮಾಡಿಕೊಂಡು ತಿನ್ನಬಹುದು. ಇದು ಹಸಿವನ್ನೂ ನೀಗಿಸುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಸುಲಭ ಸಲಾಡ್ ಗಳು: (Fruits salad)

ಬೀನ್ಸ್ ಮತ್ತು ಕಡಲೆಕಾಯಿ ಬಳಸಿ ಸಲಾಡ್ (Salad) ಮಾಡಬಹುದು. ಈ ಸಲಾಡ್ ಗೆ ಚೆರ್ರಿ ಹಣ್ಣು, ದ್ರಾಕ್ಷಿ, ಟೊಮೆಟೊ ಪೀಸ್ ಗಳು ಮತ್ತು ಸೌತೆಕಾಯಿ ಹೋಳುಗಳನ್ನು ಕೂಡ ಸೇರಿಸಿದರೆ ಟೇಸ್ಟ್ ಚೆನ್ನಾಗಿರುತ್ತೆ. ಬೇಕಿದ್ದಲ್ಲಿ ಪುದೀನಾ ಎಲೆಗಳನ್ನು ಸೇರಿಸಿ.

ಪಾಲಕ್​(palak/spinach) ಆರೋಗ್ಯಕ್ಕೆ ಎಷ್ಟು ಉತ್ತಮ ಎನ್ನುವುದು ಹಲವರಿಗೆ ಗೊತ್ತು. ಪಾಲಾಕ್ ಗೆ ಆಲಿವ್ ಎಣ್ಣೆ, ಮೊಸರನ್ನು ಬೆರೆಸಿ ಸಲಾಡ್ ಮಾಡಿಕೊಳ್ಳಬಹುದು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇದು ದಿನವಿಡೀ ನಿಮ್ಮಲ್ಲಿ ಚೈತನ್ಯವನ್ನು ಇಡುತ್ತದೆ.

ಇನ್ನು ಆರೊಗ್ಯಕರವಾದ ಆವಕಾಡೊ, (avocado) ವಾಲ್‌ನಟ್ಸ್, (walnut) ಪಾಲಕ್ ಮತ್ತು ಸ್ಟ್ರಾಬೆರಿ(strawberry)ಗಳನ್ನ ಮಿಕ್ಸ್ ಮಾಡಿ  ಸಲಾಡ್​ನ್ನು ತಯಾರಿಸಿ ಇದಕ್ಕೆ ಬೇಯಿಸಿದ ಚಿಕನ್ ಅಥವಾ ಹುರಿದ ಸಾಲ್ಮನ್‌ ಬೆರೆಸಿ ತಿನ್ನಬಹುದು. ಅಫೀಸ್ ನಲ್ಲಿ ಹಸಿವಾದಾಗ ಸುಲಭವಾಗಿ ಹಸಿವು ನೀಗಿಸಿಕೊಳ್ಳುವುದಕ್ಕೆ ಮತ್ತು ನಿಮ್ಮಲ್ಲಿ ತಾಜಾತನವನ್ನು ಉಳಿಸಿಕೊಳ್ಳುವುದಕ್ಕೆ ಈ ಸಲಾಡ್ ಗಳು ಬಹಳ ಒಳ್ಳೆಯದು. ಹಾಗಾಗಿ ತಪ್ಪದೇ ಸಲಾಡ್ ಗಳನ್ನು ಮಾಡಿಕೊಂಡು ಸೇವಿಸಿ.

Healthy foodhealthy lifeLifestylesaladಅಡುಗೆಮನೆಸಲಾಡ್