Kannada Film: ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಗೆ ಆಡಿಶನ್ ಕೊಟ್ಟಿದ್ದು ಹೇಗಿತ್ತು ಗೊತ್ತಾ? ಈ ವಿಡಿಯೋ ನೋಡಿದ್ರೆ ನ್ಯಾಷನಲ್ ಕ್ರಷ್ ಇವರೇನಾ ಅಂತಿರಾ!

Kannada Film:

ಕನ್ನಡ ಚಿತ್ರರಂಗದಿಂದ ಬೇರೆ ಚಿತ್ರರಂಗಕ್ಕೆ ನಟ-ನಟಿಯರು ತೆರಳುವುದು, ಅಥವಾ ಬೇರೆ ಚಿತ್ರರಂಗದಿಂದ ಕನ್ನಡಕ್ಕೆ ಬಂದು ಹೆಸರನ್ನು ಗಳಿಸುವುದು ಇದು ಇಂದಿನ ಮಾತಲ್ಲ. ಚಿತ್ರರಂಗ ಆರಂಭವಾದಾಗಿನಿಂದ ನಡೆದುಕೊಂಡು ಬಂದಿದೆ. ಆದರೆ ಹೆಚ್ಚಿನ ಕಲಾವಿದರು ತಮ್ಮ ಮಾತೃಭಾಷೆಯನ್ನು ಮಾತ್ರ ಮರೆಯುವುದಿಲ್ಲ. ಅದಕ್ಕೆ ಕೊಡುವ ಗೌರವ ಕಡಿಮೆ ಮಾಡುವುದಿಲ್ಲ. ಆದರೆ ಕೆಲವರಿಗೆ ಹಣ, ಸಂಪತ್ತು, ಕೀರ್ತಿ ಬರುತ್ತಿದ್ದಂತೆ ಎಲ್ಲವನ್ನು ಮರೆತು ಬಿಡುತ್ತಾರೆ. ತಾವೇ ಸರ್ವಶ್ರೇಷ್ಠರು ಎಂದು ಅಂದುಕೊಂಡುಬಿಡುತ್ತಾರೆ. ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಸ್ಟಾರ್ ನಟಿಯಾಗಿ ಬೆಳೆದು ನಿಂತವರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.

ರಶ್ಮಿಕಾ ಮಂದಣ್ಣ(Rashmika Mandanna) ಅವರು ಕಿರಿಕ್ ಪಾರ್ಟಿ(Kirik Party) ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಯಾರಿಗಾದರೂ ಅದೃಷ್ಟ ಬಂದರೆ ಈ ರೀತಿ ಬರಬೇಕು ಎಂದು ಅಸೂಯೆ ಪಡುವಷ್ಟು ಅದೃಷ್ಟ ಅವರಿಗೆ ಬಂದಿದೆ. ಕಿರಿಕ್ ಪಾರ್ಟಿ ಸಿನೆಮಾ ಸಿಕ್ಕಾಪಟ್ಟೆ ಹಿಟ್ ಆಯಿತು. ಈ ಸಿನೆಮಾವನ್ನು ರಿಶಬ್ ಶೆಟ್ಟಿ(Rishab Shetty) ಅವರು ನಿರ್ದೇಶಿಸಿದ್ದರು. ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನೆಮಾದಿಂದ ರಶ್ಮಿಕಾ ಅವರು ಕರ್ನಾಟಕದ ಕ್ರಶ್ ಆಗಿದ್ದರು. ನಂತರ ಅವರಿಗೆ ತೆಲುಗು, ತಮಿಳು ಭಾಷೆಯ ಚಿತ್ರರಂಗದಿಂದ ಆಫರ್ಗಳು ಬರಲು ಪ್ರಾರಂಭವಾದವು. ಬಂದ ಅವಕಾಶಗಳನ್ನು ರಶ್ಮಿಕಾ ಅವರು ಸರಿಯಾಗಿಯೇ ಬಳಸಿಕೊಂಡರು. ಇದರಿಂದ ತೆಲುಗು, ತಮಿಳಿನಲ್ಲಿಯೂ ಇವರ ಬೇಡಿಕೆ ಹೆಚ್ಚಾಯಿತು. ಕಳೆದ ವರ್ಷ ಬಿಡುಗಡೆಯಾದ ಪುಷ್ಪ ಸಿನೆಮಾ ಕೂಡ ಸಿಕ್ಕಾಪಟ್ಟೆ ಹಿಟ್ ಆಗುವ ಮೂಲಕ ರಶ್ಮಿಕಾ ಅವರ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ. ಇಷ್ಟೆ ಅಲ್ಲದೆ ರಶ್ಮಿಕಾ ಬಾಲಿವುಡ್ಗೂ ಹೋಗಿ ಬಂದಿದ್ದಾರೆ. ಗುಡ್ ಬೈ ಎನ್ನುವ ಸಿನೆಮಾದಲ್ಲಿ ಬಾಲಿವುಡ್(Bollywood)  ಬಿಗ್ ಬಿ ಅಮಿತಾಬ್ ಬಚ್ಚನ್(Amithab bachhan) ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇಷ್ಟೆಲ್ಲ ಹೆಸರು, ಕೀರ್ತಿ ಗಳಿಸಿದರೂ ರಶ್ಮಿಕಾ ಅವರು ಟ್ರೋಲ್ ಗಳಿಗೆ ಪದೆ ಪದೇ ಆಹಾರವಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರ ನಡವಳಿಕೆ, ಅವರು ನೀಡುವ ಹೇಳಿಕೆಗಳು. ಕಾಂತಾರ ಸಿನೆಮಾ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮೊದಲು ಕನ್ನಡದಲ್ಲಿ ಬಿಡುಗಡೆಯಾಯಿತು. ನಂತರ ಎಲ್ಲ ಭಾಷೆಗಳಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು/ ಪ್ರಭಾಸ್, ರಜನಿಕಾಂತ್(RajaniKanth) ಕಂಗನಾ ರಣಾವತ್, ಸೇರಿದಂತೆ ಸೌತ್ ಇಂಡಿಯನ್ ಎಲ್ಲ ಸ್ಟಾರ್ ನಟರು, ನಿರ್ದೇಶಕರು ಈ ಸಿನೆಮಾ ನೋಡಿ ಹಾಡಿ ಹೊಗಳಿದ್ದಾರೆ. ಒಂದು ದಿನ ಮುಂಬೈ ಎರ್ಪೋರ್ಟ್ನಲ್ಲಿ ರಶ್ಮಿಕಾ ಅವರು ಪತ್ರಕರ್ತರ ಕಣ್ಣಿಗೆ ಬಿದ್ದಾಗ ಅವರು ಕಾಂತಾರಾ ಸಿನೆಮಾ ನೋಡಿದಿರಾ ಎಂದು ಕೇಳಿದ್ದಾರೆ. ಆಗ ರಶ್ಮಿಕಾ ಇಲ್ಲ… ಇನ್ಮುಂದೆ ಸಮಯ ಸಿಕ್ಕರೆ ನೋಡುತ್ತೇನೆ ಎಂದು ಹೇಳಿ ಜಾರಿಕೊಂಡಿದ್ದರು. ತಮ್ಮನ್ನು ಸಿನೆಮಾ ಜಗತ್ತಿಗೆ ಪರಿಚಯಿಸಿದ ನಿರ್ದೇಶಕ ನಿರ್ದೇಶಿಸಿ ನಟಿಸಿದ ಸಿನೆಮಾ ನೋಡಲು ರಶ್ಮಿಕಾ ಅವರಿಗೆ ಸಮಯವಿಲ್ಲವೇ ಎಂದು ಟ್ರೋಲರ್ಗಳು ಕೇಳುತ್ತಿದ್ದಾರೆ. ಸಿನೆಮಾದಲ್ಲಿ ಹೊಸತನ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕಾದರೂ ರಶ್ಮಿಕಾ ಸಿನೆಮಾ ನೋಡಬೇಕಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.  ಹೀಗೆ ತಾವು ಕೊಡುವ ದಡ್ಡತನದ ಹೇಳಿಕೆಗಳಿಂದಲೇ ರಶ್ಮಿಕಾ ಅವರು ಟ್ರೋಲರ್ಗಳಿಗೆ ಆಹಾರವಾಗುತ್ತಿರುವುದು ಸುಳ್ಳಲ್ಲ. ಅಂದಹಾಗೆ

Kannada Filmkirik PartyRakshith ShettyRashmika mandannaRishab Shettyರಶ್ಮಿಕಾ ಮಂದಣ್ಣ