Drone prathap:ಡ್ರೋನ್ ಪ್ರತಾಪ್ ಹೊಸ ಕಂಪನಿಯಲ್ಲಿದೆಯಂತೆ ಉದ್ಯೋಗಾವಕಾಶ; ಯಾರೆಲ್ಲಾ ಅಪ್ಲೈ ಮಾಡ್ತೀರಾ?

Drone prathap: ತಾವೇ ಡ್ರೋನ್ ತಯಾರು ಮಾಡಿದ್ದೇನೆ. ನೂರಾರು ಕೆ.ಜಿ.ಯ ಡ್ರೋನ್ ಗಳನ್ನು ನಾನೊಬ್ಬನೇ ಹೊತ್ತೊಯ್ದಿದ್ದೆ ಎಂದೆಲ್ಲ ಬುರುಡೆ ಬಿಟ್ಟಿದ್ದ ಡ್ರೋನ್ ಪ್ರತಾಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಡ್ರೋನ್ ಪ್ರತಾಪ್ ಇದೀಗ ತಾನೆ ಹೊಸ ಕಂಪನಿ ಶುರು ಮಾಡಿರುವುದಾಗಿ ತನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೇಳಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಡ್ರೋನ್ ಪ್ರತಾಪ್ ಎಂದರೆ ಎಲ್ಲರೂ ಗುರುತು ಹಿಡಿಯುತ್ತಿದ್ದರು. ತಾನೇ ಡ್ರೋನ್ ತಯಾರಿಸಿದ್ದು, ಅದರಿಂದ ಸಿಕ್ಕಾಪಟ್ಟೆ ಸಾಧನೆ ಮಾಡಿದ್ದೇನೆ ಎಂದು ಭಾಷಣ ಬಿಗಿಯುತ್ತ ಸಿಕ್ಕಾಪಟ್ಟೆ ಪ್ರಸಿದ್ದಿ ಪಡೆದಿದ್ದ. ಇದೇ ರೀತಿಯ ಸುಳ್ಳನ್ನು ಹೇಳುತ್ತ ಹಲವು ಜನರಿಗೆ ನಾಮವನ್ನು ಹಾಕಿದ್ದ. ಆದರೆ ಈಗ ಡ್ರೋನ್ ಪ್ರತಾಪ್ ತಾನೇ ಒಂದು ಡ್ರೋನ್ ತಯಾರಿಕಾ ಕಂಪನಿ ಶುರು ಮಾಡಿದ್ದಾರಂತೆ. ಈ ಕುರಿತು ಅವರೇ ಹೇಳಿಕೊಂಡಿದ್ದಾರೆ. ಇದರ ಜೊತೆ ಟ್ರೋಲರ್ ಗಳಿಗೂ ತಿರುಗೇಟು ನೀಡಿದ್ದಾನೆ. ಇದನ್ನೂ ಓದಿ: ಹರ್ಬಜನ್ ಸಿಂಗ್

I am a founder and CEO of the Dronerkaerospace company. ಎಂದು ಕೆಜಿಎಫ್ ಸ್ಟೈಲ್ ನಲ್ಲಿಯೇ ಮಾತು ಶುರುಮಾಡಿದ್ದಾರೆ ಪ್ರತಾಪ್. ಡ್ರೋನ್ ಆರ್ ಕೆ ಸ್ಪೇಸ್ ಎನ್ನುವ ಕಂಪನಿ ಸ್ಥಾಪನೆ ಮಾಡಿದ್ದೇನೆ. ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇರಲಿದೆ. ಜೊತೆಗೆ ನಾಸಿಕ್, ಪುಣೆ, ದುಲೆಯಲ್ಲಿ ಶಾಖಾ ಕಚೇರಿಗಳನ್ನು ತೆರೆಯಲಿದ್ದೇನೆ. ನಾನು ಕೃಷಿಕರಿಗೆ ಅನುಕೂಲ ಮಾಡಿಕೊಡುವ ಎರಡು ಡ್ರೋನ್ ತಯಾರಿಸಿದ್ದೇವೆ. ಯಾರೂ ಬೇಕಾದರೂ ಇದನ್ನು ತೆಗೆದುಕೊಳ್ಳಬಹುದು. ಅಥವಾ ಬಾಡಿಗೆಗೆ ಬೇಕಾದರೂ ಬಳಸಿಕೊಳ್ಳಬಹುದು. ಸದ್ಯ 10 ಲೀಟರ್ ಹಾಗೂ 16 ಲೀಟರ್ ನ ಡ್ರೋಣ್ ತಯಾರು ಮಾಡಲಾಗಿದೆ. ಮುಂದೆ 25-30 ಲೀಟರ್ ಔಷಧ ಹಿಡಿಯುವ ಡ್ರೋನ್ ತಯಾರು ಮಾಡಲು ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಸಹಾಯ ಆಗಬಹುದು ಎಂದಿದ್ದಾನೆ.

ಡ್ರೋನ್ ಕಂಪನಿಯ ಸ್ಥಾಪನೆಯ ಮುಖ್ಯ ಉದ್ದೇಶ ಯುವಕರಿಗೆ, ಪ್ರತಿಭಾವಂತರಿಗೆ ಕೆಲಸ ನೀಡುವುದಾಗಿದೆ. ಹಾಗಾಗಿ ಕೆಲಸ ಮಾಡಲು ಆಸಕ್ತಿ ಇರುವ ಪ್ರತಿಭಾವಂತರಿಗೆ ಕೆಲಸ ನೀಡುತ್ತೇನೆ ಎಂದು ಹೇಳಿದ್ದಾನೆ.

ಹೀಗೆ ಮುಂದುವರಿದು, ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಾನು ಟ್ರೋಲ್ ಆಗಿದ್ದನ್ನು ಜ್ಞಾಪಿಸಿಕೊಂಡು ಅವರಿಗೂ ಸರಿಯಾಗಿ ತಿರುಗೇಟು ಕೊಟ್ಟಿದ್ದಾನೆ. ನನ್ನನ್ನು ಯಾರೂ ಎಷ್ಟು ಬೇಕಾದರೂ ಟ್ರೋಲ್ ಮಾಡಬಹುದು. ನಿಮ್ಮ ಕೆಲಸವನ್ನು ನೀವು ಮಾಡಿ. ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ. ಜನರಿಗೆ ಕೆಲಸ ನೀಡುವುದಷ್ಟೆ ನನ್ನ ಗುರಿ. ಅದಕ್ಕಾಗಿಯೇ ನಾನು ಕಂಪನಿ ಸ್ಥಾಪಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪ್ರತಾಪ್ ಜೊತೆ ಕೆಲಸ ಮಾಡಲು ಇಷ್ಟ ಇರುವವರು ಅಪ್ಲೈ ಮಾಡಬಹುದು.

companyDrone Prathapಡ್ರೋನ್ ಪ್ರತಾಪ್ಹೊಸ ಕಂಪನಿ